ನಿವೃತ್ತ ಎಎಸ್‌ಐ ಅವರ ಮನೆಗೆ ನುಗ್ಗಿದ 105 ಗ್ರಾಂ ಚಿನ್ನ, 1.18 ಕೆಜಿ ಬೆಳ್ಳಿ, ₹40 ಸಾವಿರ ನಗದು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ನಿವೃತ್ತ ಎಎಸ್‌ಐ ರಾಜಶೇಖರ್ ರಟಕಲ್ ಅವರ ನಿವಾಸದಲ್ಲಿ ಈ ಕಳ್ಳತನ ನಡೆದಿರುವುದು ತಿಳಿದು ಬಂದಿದೆ.
ರಾಜಶೇಖರ್ ರಟಕಲ್ ಅವರು ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಮನೆಗೆ ಯಾರೂ ಇಲ್ಲದಿರುವುದನ್ನು ಗಮನಿಸಿದ ದುಷ್ಕರ್ಮಿಗಳು ಮನೆಗೆ ನುಗ್ಗಿದ್ದಾರೆ. ಬಳಿಕ ಬೆಡ್‌ರೂಮ್‌ನ ಕಬೋರ್ಡ್‌ಗಳು ಹಾಗೂ ದೇವರ ಮನೆಯಲ್ಲಿದ್ದ ಆಭರಣಗಳನ್ನು ಶೋಧಿಸಿ, ಸುಮಾರು 105 ಗ್ರಾಂ ಚಿನ್ನಾಭರಣ, 1,180 ಗ್ರಾಂ ಬೆಳ್ಳಿ ಆಭರಣ ಮತ್ತು ₹40 ಸಾವಿರ ನಗದು ಕಳ್ಳತನ ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಯಾದಗಿರಿ | ಅನವಾರದಲ್ಲಿ ಜಲಜೀವನ್ ಯೋಜನೆ ವಿಫಲ: 15 ದಲಿತ ಕುಟುಂಬಗಳಿಗೆ ಹಳ್ಳವೇ ಆಶ್ರಯ
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಅಶೋಕನಗರ ಪೊಲೀಸರು, ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.





