ಕಲಬುರಗಿ | ಸಮಸಮಾಜ ಕಟ್ಟುವಲ್ಲಿ ಯುವಜನರ ಪಾತ್ರ ಮುಖ್ಯ: ರಾಹುಲ್ ಪಂಚಶೀಲ

Date:

ಭಾರತ ದೇಶದಲ್ಲಿ 66% ಯುವಕರಿದ್ದಾರೆ. ಯುವಜನರು ಮೇಲುಕೀಳೆಂಬ ಭಾವನೆಯನ್ನು ಬಿಟ್ಟು, ಅಂಬೇಡ್ಕರರ ವಿಚಾರವನ್ನು ಅನುಸರಿಸಬೇಕು. ಸಮಸಮಾಜ ಕಟ್ಟುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಉಪನ್ಯಾಸಕ ರಾಹುಲ್ ಪಂಚಶೀಲ ಹೇಳಿದ್ದಾರೆ.

ಕಲಬುರಗಿಯ ಜೇವರ್ಗಿಯಲ್ಲಿ ಅಂಬೇಡ್ಕರ್ ಸೇವಾ ಸಮಿತಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. “ಯುವಜನರು ಶಿಕ್ಷಣವಂತರಾಗಬೇಕು. ‘ಶಿಕ್ಷಣ ಎಂಬುದುಹುಲಿಯ ಹಾಲು ಇದ್ದಂತೆ, ಕುಡಿದವರು ಘರ್ಜಿಸಬೇಕು’ ಎಂದು ಅಂಬೇಡ್ಕರ್ ಹೇಳಿದ್ದಾರೆ. ಯುವಜನರು ಶಿಕ್ಷಣವಂತರಾದರೆ ಮಾತ್ರ ನಮಗೆ ಅನ್ಯಾಯದ ವಿರುದ್ಧ ಪ್ರಶ್ನಿಸುವ, ಪ್ರತಿಭಟಿಸುವ ಧೈರ್ಯ ಬರುತ್ತದೆ. ಅಂಬೇಡ್ಕರ್ ವಿಚಾರಧಾರೆಗಳನ್ನು ನನಸು ಮಾಡುವ ನಿಟ್ಟಿನಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಕು” ಎಂದು ಯುವಜನರಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಡಾ ಕೆ.ಎಂ.ಸಂದೇಶ, ಬುದ್ದೇಶ್ ಶಿಂಗೆ, ಮಾಂತೇಶ್ ಬಾವಿಕಟ್ಟಿ, ಸಿದ್ದು ಶಹಾಪುರ, ಅಬ್ದುಲ್ ಗನ್ನಿ, ವಿಶ್ವರಾಧ್ಯ ಗೋಪಾಲ್ಕರ್, ಅರ್ಜುನ್, ರಾಜು ಆಂದೋಲ, ಬಸವರಾಜ್ ಇಂಗಳಗಿ, ಸತೀಶ್ ಹರವಾಳ, ಮರೆಪ್ಪ ಕೊಳಕೂರ, ಮೌನೇಶ್ ಗೂಲ್ಲಾ, ದೇವು ಬಡಿಗೇರ್ ಸೇರಿದಂತೆ ಹಲವರು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...