ಕಲಬುರಗಿ ನಗರದ ಕುರಿಕೋಟಾ ಹಳೆಯ ಸೇತುವೆಯಿಂದ ಯುವತಿಯೋರ್ವಳು ನದಿಗೆ ಹಾರಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಯುವತಿ ನಾಪತ್ತೆಯಾಗಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ನಾಪತ್ತೆಯಾಗಿರುವ ಯುವತಿಯನ್ನು ಕಮಲಾಪುರ ತಾಲೂಕಿನ ಮಹಾಗಾಂವ್ ಗ್ರಾಮದ ನಿವಾಸಿ ತ್ರೀವೇಣಿ ಸೂರ್ಯಕಾಂತ (30) ಎಂದು ಗುರುತಿಸಲಾಗಿದೆ. ಜೀವನದಲ್ಲಿ ಜಿಗುಪ್ಸೆಗೊಂಡು ಸೇತುವೆಯಿಂದ ನದಿಗೆ ಹಾರಿರಬಹುದೆಂದು ಶಂಕಿಸಲಾಗಿದೆ. ಘಟನೆಯ ಮಾಹಿತಿ ತಿಳಿದ ತಕ್ಷಣ ಮಹಾಗಾಂವ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಲಂಚ ಪಡೆಯುತ್ತಿದ್ದ ವೇಳೆ ಎಫ್‌ಡಿಎ ಲೋಕಾಯುಕ್ತ ಬಲೆಗೆ
ಶುಕ್ರವಾರದಿಂದಲೇ ಅಗ್ನಿಶಾಮಕ ದಳ ಹಾಗೂ ಈಜುಗಾರರ ಸಹಾಯದಿಂದ ನದಿಯಲ್ಲಿ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಆದರೆ ಶನಿವಾರ ಸಂಜೆವರೆಗೂ ಯುವತಿಯ ಸುಳಿವು ಲಭ್ಯವಾಗಿಲ್ಲ. ರವಿವಾರವೂ ಸಹ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಪೊಲೀಸರ ತನಿಖೆ ನಡೆಯುತ್ತಿದೆ.





