ನಗರದ ರಿಂಗ್ ರಸ್ತೆಯ ಶಾಹ ಜಿಲಾನಿ ಕ್ರಾಸ್‌ನಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿರು ಘಟನೆ ನಡೆದಿದೆ.
ಮೃತರನ್ನು ಡಬರಾಬಾದ್ ನಿವಾಸಿ ಸಚಿನ್ ಅಶೋಕ ಸಂಗಾವಿ (28) ಎಂದು ಗುರುತಿಸಲಾಗಿದೆ. ಅವರು ಸಿಐಬಿ ಕಾಲೊನಿಯಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.
ಮಧ್ಯಾಹ್ನ ಮಿರ್ಜಾ ನಗರದಿಂದ ಡಬರಾಬಾದ್ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಹಿಂದಿನಿಂದ ವೇಗವಾಗಿ ಬಂದ ಟಿಪ್ಪರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಸಚಿನ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನು ಓದಿದ್ದೀರಾ? ಬೀದರ್ | ಎಸ್ಸೆಸ್ಸೆಲ್ಸಿ ಫಲಿತಾಂಶ ಶೂನ್ಯ ಬಂದರೆ ಶಿಕ್ಷಕರೇ ಹೊಣೆ : ಡಿಸಿ ಶಿಲ್ಪಾ ಶರ್ಮಾ
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿರುವುದು ತಿಳಿಸಿದು ಬಂದಿದೆ.





