ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಆರೋಪದ ಮೇಲೆ ಇಬ್ಬರು ಪೊಲೀಸರನ್ನು ಗುರುವಾರ ಪೊಲೀಸ್ ಕಮಿಷನರ್ ಶರಣಪ್ಪ ಎಸ್ ಡಿ ಅಮಾನತು ಆದೇಶ ಹೋರಡಿಸಿದ್ದಾರೆ.
ಚಿತ್ತಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ದಿಗ್ಗಾಂವ್ ಗ್ರಾಮದಿಂದ ಬೆನಕನಹಳ್ಳಿ ಕಡೆಗೆ ಸಾಗುವ ರಸ್ತೆಯ ಪಕ್ಕದಲ್ಲಿ ಫೆಬ್ರುವರಿ 17ರಂದು ಇಸ್ಪೀಟ್ ಜೂಜಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಚಿತ್ತಾಪುರ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಜೂಜಾಟದಲ್ಲಿ ತೊಡಗಿದ್ದವರ ಪೈಕಿ ಇಬ್ಬರು ಪೊಲೀಸರು ಸಿಕ್ಕಿ ಬಿದ್ದಿದ್ದಾರೆ.
ಅಮಾನತುಗೊಂಡವರನ್ನು ಕಲಬುರಗಿಯ ಎಂ ಬಿ ನಗರ ಪೊಲೀಸ್ ಠಾಣೆಯ ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ಗುರುನಾಥ ಹಾಗೂ ಸಶಸ್ತ್ರ ಮೀಸಲು ಘಟಕದ ಕಾನ್‌ಸ್ಟೆಬಲ್ ಮಡಿವಾಳಪ್ಪ ಎಂದು ತಿಳಿದು ಬಂದಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ನೀರಿನ ತುರ್ತು ಸೇವೆಗೆ ‘ಸ್ವಿಚ್ ಆಫ್’ ಸಂದೇಶ: ಪಾಲಿಕೆ ಎಂಜಿನಿಯರ್ ನಡೆಗೆ ಜನ ಆಕ್ರೋಶ
ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡಿರು ಶ್ರೀನಿವಾಸುಲು ಸಲ್ಲಿಸಿದ ವರದಿ ಆಧರಿಸಿ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಅವರು ಗುರುವಾರ ಅಮಾನತು ಆದೇಶ ಹೊರಡಿಸಿದ್ದಾರೆ.





