ಕಲಬುರಗಿ | ಮನುಸ್ಮೃತಿ ದಹನದಿಂದಲೆ ಸಮಸ್ಥರ ಉನ್ನತಿ ; ಕರಾದಸಂಸ ಬೃಹತ್ ಪ್ರತಿಭಟನೆ

Date:

ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ 1927ರಲ್ಲಿ ಮಹಾರಾಷ್ಟ್ರದ ಮಹಾಡದಲ್ಲಿ ನಡೆದ ಐತಿಹಾಸಿಕ ಮನುಸ್ಮೃತಿ ದಹನದ ಸ್ಮರಣಾರ್ಥವಾಗಿ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಜಿಲ್ಲಾ ಸಮಿತಿ ಕಲಬುರಗಿ ಮತ್ತು ಯಾದಗಿರಿ ವತಿಯಿಂದ ಗುರುವಾರ ಕಲಬುರಗಿ ನಗರದಲ್ಲಿ ಮನುಸ್ಮೃತಿ ದಹನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಲಬುರಗಿ ನಗರದ ಎಸ್‌ವಿಪಿ ವೃತ್ತದಿಂದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತ (ಜಗತ್ ವೃತ್ತ)ವರೆಗೆ ಬೃಹತ್ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಅಲ್ಲಿ ಮನುಸ್ಮೃತಿ ದಹನ ಮಾಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸಾಮಾಜಿಕ ಅನ್ಯಾಯ, ಜಾತಿ ವ್ಯವಸ್ಥೆ ಹಾಗೂ ಅಸ್ಪೃಶ್ಯತೆ ವಿರುದ್ಧ ಘೋಷಣೆಗಳು ಮೊಳಗಿದವು.

906950

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ದಸಂಸ ಹಿರಿಯ ಮುಖಂಡ ಅರ್ಜುನ ಭದ್ರೆ, “ಮನುಸ್ಮೃತಿ ದಹನವು ದ್ವೇಷಕ್ಕಾಗಿ ಅಲ್ಲ ಎಂದು ಡಾ. ಅಂಬೇಡ್ಕರ್ ಸ್ಪಷ್ಟಪಡಿಸಿದ್ದರು. ಭಯಂಕರ ರೋಗಕ್ಕೆ ಭಯಂಕರ ಔಷಧಿ ಬೇಕು, ಕಿವುಡರನ್ನು ಎಚ್ಚರಿಸಲು ಬಾಂಬ್ ಸ್ಫೋಟದ ಶಬ್ದ ಬೇಕು. ಅದೇ ರೀತಿ ಸನಾತನವಾದಿ ಸಮಾಜವನ್ನು ಎಚ್ಚರಿಸಲು ಮನುಸ್ಮೃತಿ ದಹನ ಅನಿವಾರ್ಯವಾಗಿತ್ತು” ಎಂದು ಅಂಬೇಡ್ಕರ್ ಹೇಳಿಕೆಯನ್ನು ಸ್ಮರಿಸಿದರು. ಮನುಸ್ಮೃತಿಯ ಪ್ರತಿಯೊಂದು ಪುಟವೂ ನಿಂದನಾರ್ಹವೆಂದು ಮಾತ್ರ ಹೇಳುವುದಲ್ಲ, ಅದರೊಳಗಿನ ಅಮಾನವೀಯತೆ, ಅಸಮಾನತೆ ಹಾಗೂ ಅಸತ್ಯಗಳನ್ನು ಸಮಾಜದ ಮುಂದೆ ಬಹಿರಂಗಪಡಿಸುವುದೇ ಅಂಬೇಡ್ಕರ್‌ರ ಉದ್ದೇಶವಾಗಿತ್ತು. ಶೂದ್ರ, ಅತಿಶೂದ್ರರ ಶೋಷಣೆಗೆ ಮೂಲವಾದ ಗ್ರಂಥದ ವಿರುದ್ಧ ಹೋರಾಟ ಅನಿವಾರ್ಯವಾಗಿತ್ತು’ ಎಂದು ಅವರು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
906945 1

ಈ ಸಂದರ್ಭದಲ್ಲಿ ದಸಂಸ ಹಿರಿಯ ಮುಖಂಡ ಮರಿಯಪ್ಪ ಹಳ್ಳಿ ಮಾತನಾಡಿ, ‘ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದಾ ಹತ್ಯೆ ಘಟನೆಗೆ ಮನುಸ್ಮೃತಿಯಂತಹ ಮನುವಾದಿ ಚಿಂತನೆಗಳೇ ಕಾರಣ. ದಲಿತ ಯುವಕನನ್ನು ಪ್ರೀತಿಸಿ ವಿವಾಹವಾದ ಕಾರಣಕ್ಕೆ ಮಗಳನ್ನು ಕೊಚ್ಚಿ ಕೊಲೆ ಮಾಡಿರುವುದು ಮಾನವೀಯತೆಗೆ ವಿರುದ್ಧವಾದ ಕ್ರೌರ್ಯ. ಇಂತಹ ಕ್ರೌರ್ಯವನ್ನು ದಹಿಸುವ ಸಂಕೇತವಾಗಿ ಮನುಸ್ಮೃತಿ ದಹನ ನಡೆಸಲಾಗುತ್ತಿದೆ ಎಂದು ಹೇಳಿದರು. ಎಲ್ಲಾ ಧರ್ಮಗಳ ಗುರುಗಳು ಹಾಗೂ ಮಠಾಧೀಶರು ಸ್ವಜಾತಿ ವಿವಾಹ ವಿರೋಧಿಸಿ, ಅಂತರ್ಜಾತಿ ವಿವಾಹವನ್ನು ಪ್ರೋತ್ಸಾಹಿಸಬೇಕೆಂದು’ ಎಂದರು.

906942

ದಸಂಸ ಮುಖಂಡ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ‘ಮನುಸ್ಮೃತಿ ಸ್ತ್ರೀ ವಿರೋಧಿ, ಮನುಷ್ಯ ವಿರೋಧಿ ಗ್ರಂಥವಾಗಿದ್ದು, ಮನುವಾದ ಅಸಮಾನತೆಯನ್ನು ಪ್ರತಿಪಾದಿಸುತ್ತದೆ’ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನು ಓದಿದ್ದೀರಾ? ಬೀದರ್‌ | ದಲಿತ ಸಂಘರ್ಷ ಸಮಿತಿಯಿಂದ ʼಮನುಸ್ಮೃತಿ ದಹನ ದಿನʼ ಆಚರಣೆ

ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ಖನ್ನಾ, ಮಹಾಂತೇಶ್ ಬದದಾಳ, ಮಹೇಶ್ ಕೋಕಿಲೆ, ರೇಷ್ಮೆ ನಂದೂರು, ಸೂರ್ಯಕಾಂತ ಅಜಾದಪುರ್, ಅಜೀಜ್ ಸಾಬ್, ಸಂತೋಷ ಮೆಲ್ಮನಿ, ಮಲ್ಲಿಕಾರ್ಜುನ ಆಶಿನಾಳ, ಆನಂದ ಬಜಂತಿ, ಮಲ್ಲಿಕಾರ್ಜುನ ಕುರಕುಂದಿ, ಮಲ್ಲಿಕಾರ್ಜುನ ಶಾಖಾನವರ, ರಾಜಕುಮಾರ ನಿಂಬಾಳ, ಶಿವಕುಮಾರ ಕೋರಳ್ಳಿ, ರಾಜಶೇಖರ ಹೊಸಮನಿ, ಬಸವರಾಜ ಶೆಳ್ಳಗಿ ಸೇರಿದಂತೆ ಹಲವರು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಆರು ದಿನಗಳ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರಕ್ಕೆ ಯಶಸ್ವಿ ತೆರೆ

ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ವತಿಯಿಂದ...

ಕಲಬುರಗಿ | ಕೇಂದ್ರೀಯ ವಿವಿಯಲ್ಲಿ ಅಕ್ರಮ ನೇಮಕಾತಿ ಆರೋಪ: ನ್ಯಾಯಾಂಗ ತನಿಖೆಗೆ ಕೆವಿಎಸ್ ಆಗ್ರಹ

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಬೋಧಕ ಹುದ್ದೆಗಳ ನೇಮಕಾತಿಯಲ್ಲಿ ಮೀಸಲಾತಿ ರೋಸ್ಟರ್ ನಿಯಮಗಳನ್ನು...

ಕಲಬುರಗಿ | ಅಪ್ರಾಪ್ತೆ ಮೇಲೆ ಅತ್ಯಾಚಾರ: ಅಪರಾಧಿಗೆ 20 ವರ್ಷ ಜೈಲು – 1.5 ಲಕ್ಷ ರೂ. ದಂಡ

15 ವರ್ಷದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದು ಅತ್ಯಾಚಾರ ಎಸಗಿದ್ದ ಅಪರಾಧಿಗೆ...