ನಕಲಿ ಅಂಕಪಟ್ಟಿ, ನಕಲಿ ಪದವಿ, ನಕಲಿ ಸೇವಾ ದಾಖಲೆಯ ಆರೋಪಿ ರಾಣಿ ಚೆನ್ನಮ್ಮ ವಿವಿ ಕುಲಪತಿಯಾದದ್ದಾದರೂ ಹೇಗೆ?

Date:

ಸರ್ಕಾರ ಆದೇಶ ಸಂಖ್ಯೆ ED 153:STB 98(2) ದಿನಾಂಕ 17-2-1999ರ ಷರತ್ತು 4ರ ಪ್ರಕಾರ ಸ್ವಯಂ ನಿವೃತ್ತಿ ಪಡೆದ ಉದ್ಯೋಗಿಯು ರಾಜ್ಯ ಸರ್ಕಾರ ಅಥವಾ ಅನುದಾನಿತ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ ಯಾವುದೇ ಸೇವೆಗೆ ನೇರ ನೇಮಕಾತಿ ಪಡೆಯಲು ಅರ್ಹರಾಗಿರುವುದಿಲ್ಲ. ಆದರೆ ಸ್ವಯಂ ನಿವೃತ್ತಿ ಪಡೆದ ಪ್ರೊ ಸಿ ಎಂ ತ್ಯಾಗರಾಜ್‌ ಅವರನ್ನು 2011ರಲ್ಲಿ ರಾಣಿ ಚನ್ನಮ್ಮ ವಿವಿಯ ಎಂಬಿಎ ಪ್ರೊಫೆಸರ್‌ ಆಗಿ ನೇಮಕ ಮಾಡಿಕೊಳ್ಳಲಾಗಿತ್ತು.

ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಸಿ ಎಂ ತ್ಯಾಗರಾಜ್‌ ಅವರ ವಿರುದ್ಧ ಹಲವು ಗಂಭೀರ ಆರೋಪಗಳು ಕೇಳಿಬಂದಿವೆ. ನಕಲಿ ಅಂಕಪಟ್ಟಿ, ನಕಲಿ ಸೇವಾ ದಾಖಲೆ, ನಕಲಿ ಎಂಬಿಎ ಪದವಿ ಮುಂತಾದ ಹಲವು ಆರೋಪಗಳಿಗೆ ಪುರಾವೆ ನೀಡುವ ಆರ್‌ಟಿಐ(RTI) ದಾಖಲೆಗಳು ಈ ದಿನ.ಕಾಮ್‌ಗೆ ಲಭ್ಯವಾಗಿದೆ.

ಶಿವಮೊಗ್ಗದ ಆಚಾರ್ಯ ತುಳಸಿ ನ್ಯಾಷನಲ್‌ ಕಾಲೇಜ್‌ ಆಫ್‌ ಕಾಮರ್ಸ್‌ನಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದ ತ್ಯಾಗರಾಜ್‌ 2007ರಲ್ಲಿ ಕೆಸಿಎಸ್‌ಆರ್‌ ನಿಯಮ 285(2)(v)ಅಡಿಯಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದಾರೆ. ನಿಯಮದ ಪ್ರಕಾರ ಸ್ವಯಂ ನಿವೃತ್ತಿ ಪಡೆದ ಉದ್ಯೋಗಿಯು ರಾಜ್ಯ ವಿಶ್ವವಿದ್ಯಾಲಯಗಳು ಸೇರಿದಂತೆ ರಾಜ್ಯ ಸರ್ಕಾರದ ಅಡಿಯಲ್ಲಿ ಯಾವುದೇ ಸೇವೆಗೆ ನೇರ ನೇಮಕಾತಿ ಪಡೆಯಲು ಅರ್ಹರಾಗಿರುವುದಿಲ್ಲ. ಆದರೆ, ತ್ಯಾಗರಾಜ್‌ ಅವರು ಎಂಬಿಎ ಪ್ರೊಫೆಸರ್‌ ಆಗಿ ಈಗ ಕುಲಪತಿಯೇ ಆಗಿದ್ದಾರೆ! ಇವರು ಅದೆಷ್ಟು ಕಣ್ಣುಗಳನ್ನು ತಪ್ಪಿಸಿ ಇಷ್ಟು ದೊಡ್ಡ ಹುದ್ದೆ ಅಲಂಕರಿಸಿದ್ದಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ. ನಮ್ಮ ಉನ್ನತ ಶಿಕ್ಷಣ ಕ್ಷೇತ್ರ ತಲುಪಿರುವ ಅಧೋಗತಿಗೆ ಹಿಡಿದ ಅನೇಕ ಕನ್ನಡಿಗಳಲ್ಲಿ ಇದೂ ಒಂದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
WhatsApp Image 2025 07 04 at 9.08.38 PM

ಕಾಲೇಜು ಶಿಕ್ಷಣ ಇಲಾಖೆಯು 29/08/2007ರಂದು ಸ್ವಯಂ ನಿವೃತ್ತಿ ಆದೇಶವನ್ನು ಹೊರಡಿಸಿದೆ. ಸರ್ಕಾರ ಆದೇಶ ಸಂಖ್ಯೆ ED 153:STB 98(2) ದಿನಾಂಕ 17-2-1999ರ ಷರತ್ತು 4ರ ಪ್ರಕಾರ ಸ್ವಯಂ ನಿವೃತ್ತಿ ಪಡೆದ ಉದ್ಯೋಗಿಯು ರಾಜ್ಯ ಸರ್ಕಾರ ಅಥವಾ ಅನುದಾನಿತ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ ಯಾವುದೇ ಸೇವೆಗೆ ನೇರ ನೇಮಕಾತಿ ಪಡೆಯಲು ಅರ್ಹರಾಗಿರುವುದಿಲ್ಲ. ಆದರೆ ತ್ಯಾಗರಾಜ್‌ ಅವರನ್ನು 2011ರಲ್ಲಿ ರಾಣಿ ಚನ್ನಮ್ಮ ವಿವಿಯ MBA ಪ್ರೊಫೆಸರ್‌ ಆಗಿ ನೇಮಕ ಮಾಡಿಕೊಳ್ಳಲಾಗಿತ್ತು. ಆ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಸ್ವಯಂ ನಿವೃತ್ತಿ ವಿಷಯವನ್ನು ಮರೆ ಮಾಚಿದ್ದಾರೆ. ಆದರೆ ಸರ್ಕಾರ ಅಭ್ಯರ್ಥಿಯ ಹಿನ್ನೆಲೆ ನೋಡದೇ ನೇಮಕ ಮಾಡಿಕೊಂಡಿದೆ. ಆಗ ವಿವಿಯ ಕುಲಪತಿ ಆಗಿದ್ದವರು ಪ್ರೊ ಅನಂತನ್‌. ಅನಂತನ್‌ ಅವರಿಗೆ ತ್ಯಾಗರಾಜ್‌ ಅವರ ಸೇವಾ ಹಿನ್ನೆಲೆಯ ಬಗ್ಗೆ ತಿಳಿದಿರಲಿಲ್ಲವೇ? ಅಥವಾ ಗೊತ್ತಿದ್ದೂ ಲೋಪ ಎಸಗಿದರೇ ಎಂಬ ಬಗ್ಗೆ ತನಿಖೆಯಾಗಬೇಕಿದೆ.

ಅಸ್ತಿತ್ವದಲ್ಲಿಯೇ ಇಲ್ಲದ ಯುನಿವರ್ಸಿಟಿಯಿಂದ ಎಂಬಿಎ !

ಪ್ರೊ ತ್ಯಾಗರಾಜ್‌ ಅವರು ಎಂಬಿಎ ಮೊದಲ ಮತ್ತು ಎರಡನೇ ಸೆಮಿಸ್ಟರುಗಳನ್ನು ರಾಯಪುರದ ಡಾ ಸಿ ವಿ ರಾಮನ್‌ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ಆದರೆ, ಯುಜಿಸಿ ಪಟ್ಟಿಯಲ್ಲಿ ಈ ಹೆಸರಿನ ವಿವಿಯೇ ಇಲ್ಲ! ಮೂರನೇ ಮತ್ತು ನಾಲ್ಕನೇ ಸೆಮಿಸ್ಟರ್‌ ಅನ್ನು ಬಿಲಾಸ್‌ಪುರ್‌ ಗುರು ಘಾಸಿದಾಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌, ಕಾಮರ್ಸ್‌ ಅಂಡ್‌ ಮ್ಯಾನೇಜ್‌ಮೆಂಟ್‌ ನಿಂದ ದೂರ ಶಿಕ್ಷಣದ ಮೂಲಕ ಪಡೆದಿದ್ದಾರೆ. ಆದರೆ, ಯಾವುದೇ ಪದವಿಯನ್ನು ಭಾಗಶಃ ರೆಗ್ಯುಲರ್‌, ಭಾಗಶಃ ದೂರ ಶಿಕ್ಷಣದ ಮೂಲಕ ಪಡೆಯಲು ಅವಕಾಶ ಇಲ್ಲ. ಇದಲ್ಲದೆ ಇವರು ಜನವರಿ 2005 ರಲ್ಲಿ ಎಲ್ಲಾ ಪರೀಕ್ಷೆಗಳನ್ನು ಬರೆದಿದ್ದಾರೆ ಮತ್ತು 3 ಮತ್ತು 4 ನೇ ಸೆಮಿಸ್ಟರ್ 2005ರ ಜನವರಿಯಿಂದ ಡಿಸೆಂಬರ್ ಅವಧಿಯಲ್ಲಿ ಪೂರ್ಣಗೊಂಡಿದೆ. ಆದರೆ ತರಗತಿಯ ದಿನಗಳಲ್ಲಿ ಮತ್ತು ಪರೀಕ್ಷಾ ದಿನಗಳಲ್ಲಿ ಅವರು ಆಚಾರ್ಯ ತುಳಸಿ ನ್ಯಾಷನಲ್ ಕಾಲೇಜ್ ನಲ್ಲಿ ಹಾಜರಿದ್ದರು.

ಆರ್‌ಟಿಐ ಅರ್ಜಿಗೆ ಪ್ರತಿಕ್ರಿಯೆಯಾಗಿ ಯುಜಿಸಿ ನೀಡಿದ ಉತ್ತರದಲ್ಲಿ, ಡಿಇಸಿ/ ಯುಜಿಸಿ ಎಂಬಿಎ ಕೋರ್ಸನ್ನು ಡಾ ಸಿ ವಿ ರಾಮನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಕಾಮರ್ಸ್‌ ಅಂಡ್‌ ಮ್ಯಾನೇಜ್‌ಮೆಂಟ್‌ ಬಿಲಾಸ್‌ಪುರ ದೂರ ಶಿಕ್ಷಣದ ಮೂಲಕ ನಡೆಸಲು ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

WhatsApp Image 2025 07 04 at 9.11.29 PM

31-12-2015, 22-4-2016, 26-8-2016, 21-10-2016, 8-11-2016 ಮತ್ತು 7-1-2017 ರಂದು ನಡೆದ ಸಿಂಡಿಕೇಟ್ ಸಭೆಗಳಲ್ಲಿ ಸಿ ಎಂ ತ್ಯಾಗರಾಜ ರವರ ನಕಲಿ ಎಂಬಿಎ ಪದವಿಯ ವಿಷಯವನ್ನು ಪ್ರಸ್ತಾಪಿಸಿ ಚರ್ಚಿಸಲಾಯಿತು ಮತ್ತು ಸಭೆಗಳ ನಡಾವಳಿಗಳಲ್ಲಿ ಕೆಳಗಿನ ವಿಷಯಗಳನ್ನು ದಾಖಲಿಸಲಾಗಿದೆ.

i) ಕೇವಲ ಒಂದು ವರ್ಷದಲ್ಲಿ[2005] ಎಲ್ಲಾ ಸೆಮಿಸ್ಟರ್‌ಗಳನ್ನು ಮಾಡಿರುವುದು.
ii) ಒಂದು ವಿಶ್ವವಿದ್ಯಾಲಯದಿಂದ 2 ಸೆಮಿಸ್ಟರ್‌ಗಳು ಮತ್ತು ಇನ್ನೊಂದು ವಿಶ್ವವಿದ್ಯಾಲಯದಿಂದ 2 ಸೆಮಿಸ್ಟರ್‌ಗಳನ್ನು ಮಾಡಿರುವುದು.
iii) ಎರಡೂ ವಿಶ್ವವಿದ್ಯಾಲಯಗಳು 2006 ರ ನಂತರ ಪ್ರಾರಂಭವಾಗಿವೆ. ಆದರೆ ಅವರು ಪಡೆದ ಪದವಿ 2005 ರಲ್ಲಿ.
iv) ಅಗತ್ಯ API ಸ್ಕೋರ್ 400 ಅಂಕಗಳ ಬದಲಿಗೆ ಅವರ API 205.
v) ಪ್ರೊಫೆಸರ್ ಹುದ್ದೆ ನೇಮಕಾತಿಗೆ 10 ವರ್ಷಗಳ ಅನುಭವದ ಅಗತ್ಯವಿದೆ. ತ್ಯಾಗರಾಜ್‌ ಗೆ ಅಷ್ಟು ಅನುಭವವಾಗಿಲ್ಲ.
vi) ಅವರಿಂದ MBA ಪದವಿಯ ಬಗ್ಗೆ ಸ್ಪಷ್ಟೀಕರಣವನ್ನು ಕೋರಿ ಪತ್ರ ಬರೆಯಲಾಗಿದೆ. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆಯಿಲ್ಲ.
vii) ಪದವಿಯನ್ನು ನೀಡಿರುವ ವಿಶ್ವವಿದ್ಯಾಲಯಕ್ಕೆ ಪದವಿಯ ದೃಢೀಕರಣದ ಬಗ್ಗೆ ಕೋರಿ ಪತ್ರ ಬರೆಯಲಾಗಿದೆ. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆಯಿಲ್ಲ.
viii) ಅವರ MBA ಪದವಿಗೆ ಸಂಬಂಧಿಸಿದಂತೆ ಸರ್ಕಾರದಿಂದ ನಿರ್ದೇಶನವನ್ನು ಕೋರುವುದು.

2015 ರಿಂದ 2018ರ ಅವಧಿಯಲ್ಲಿ ಆಗಿನ ಕುಲಪತಿಗಳ ಪುತ್ರ ಸಿ ಎಂ ತ್ಯಾಗರಾಜ ಅವರ ಮಾರ್ಗದರ್ಶನದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿದ್ದರಿಂದ ವಿಶ್ವವಿದ್ಯಾಲಯದ ಅಧಿಕಾರಿಗಳ ಮೇಲೆ ತಮ್ಮ ಲಾಬಿಯನ್ನು ಬಳಸಿಕೊಂಡು, ವಿಷಯಗಳ ಚರ್ಚೆ ಮತ್ತು ವಿಚಾರಣೆ ಆಗದಂತೆ ತಡೆದಿದಾರೆ ಎಂಬ ಆರೋಪ ಕೇಳಿ ಬಂದಿತ್ತು.

2017ರಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರು ಹಾಗೂ ಕನ್ನಡಪರ ಸಂಘಟನೆಗಳು ಪತ್ರಿಕಾಗೋಷ್ಠಿ ನಡೆಸಿ, ಪ್ರೊ ಸಿ ಎಂ ತ್ಯಾಗರಾಜ ಅವರು ನಕಲಿ ಅಂಕಪಟ್ಟಿ ಸಲ್ಲಿಸಿ ಕೆಲಸ ಗಿಟ್ಟಿಸಿಕೊಂಡಿರುವ ಕಾರಣ ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿದ್ದವು.

ಇಂತಹ ಆರೋಪಗಳ ಮೂಟೆಯನ್ನೇ ಹೊತ್ತಿರುವ ಪ್ರೊ ಸಿ ಎಂ ತ್ಯಾಗರಾಜ್‌ ಅವರನ್ನು 2024ರಲ್ಲಿ ರಾಣಿ ಚನ್ನಮ್ಮ ವಿವಿಯ ಕುಲಪತಿಯಾಗಿ ಸರ್ಕಾರ ಹೇಗೆ ನೇಮಕ ಮಾಡಿತು ಎಂಬುದು ಈಗ ಪ್ರಶ್ನಾರ್ಹ.

ಆರ್ಥಿಕ ವಂಚನೆ ಪ್ರಕರಣ

ತ್ಯಾಗರಾಜ ಅವರ ವಿರುದ್ಧ ಆರ್ಥಿಕ ವಂಚನೆ ಆರೋಪದಲ್ಲಿ ಬೆಂಗಳೂರಿನ ಸಿದ್ದಾಪುರ ಪೊಲೀಸ್‌ ಠಾಣೆಯಲ್ಲಿ 2020ರಲ್ಲಿ ಎಫ್‌ಐಆರ್‌ ದಾಖಲಾಗಿದೆ. ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದಿಂದ ವಿಚಾರಣೆಯ ವಿರುದ್ಧ ತಡೆಯಾಜ್ಞೆ ತಂದಿದ್ದಾರೆ. ಕುಲಪತಿ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಈ ಮಾಹಿತಿಯನ್ನು ಮರೆ ಮಾಚಿದ್ದಾರೆ. 2024 ಜನವರಿ 16ರಂದು ಇವರ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ. ಈ ವಿಷಯವು ವಿಚಾರಣೆಯ ಹಂತದಲ್ಲಿದೆ. ಹಿಂದೆ ರಾಣಿ ಚನ್ನಮ್ಮ ವಿವಿಯಲ್ಲಿ ಕರ್ತವ್ಯಲೋಪ ಎಸಗಿದ ಕಾರಣಕ್ಕೆ ʼವಿವಿಯ ಮೌಲ್ಯಗಳಿಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕುʼ ಎಂಬ ಷರತ್ತಿನೊಂದಿಗೆ ಕೌಶಲಾಭಿವೃದ್ಧಿ ನಿಗಮಕ್ಕೆ ಡೆಪ್ಯುಟೇಷನ್‌ ಮೇಲೆ ಕಳಿಸಲಾಗಿತ್ತು. ಅಲ್ಲಿ ಆರ್ಥಿಕ ವಂಚನೆ ಮಾಡಿದ ಆರೋಪ ಬಂದಿತ್ತು. ಕುವೆಂಪು ವಿವಿಯಲ್ಲಿ ಡೆಪ್ಯುಟೇಶನ್‌ ಮೇಲೆ ಇದ್ದಾಗ ಸಿಂಡಿಕೇಟ್‌ ನಿರ್ಧಾರಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂಬ ಆರೋಪದಲ್ಲಿ ಅವರನ್ನು ಮೌಲ್ಯಮಾಪನ ಕುಲಸಚಿವ ಹುದ್ದೆಯಿಂದ ತೆಗೆದು ಹಾಕಲಾಗಿತ್ತು. ಇಂತಹ ವ್ಯಕ್ತಿಯನ್ನು ಕರ್ನಾಟಕದ ಅತಿ ದೊಡ್ಡ ರಾಣಿ ಚನ್ನಮ್ಮ ವಿವಿಗೆ ಕುಲಪತಿಯಾಗಿ ನೇಮಕ ಮಾಡಿರುವ ಕಾಂಗ್ರೆಸ್‌ ಸರ್ಕಾರದ ನಡೆ ಅಚ್ಚರಿ, ಅನುಮಾನಕ್ಕೆ ಕಾರಣವಾಗಿದೆ.

ತ್ಯಾಗರಾಜ ಅವರ ವೃತ್ತಿಯ ಆರಂಭದ ದಿನಗಳಿಂದಲೂ ಒಂದಲ್ಲ ಒಂದು ನಿಯಮ ಉಲ್ಲಂಘನೆ ಮಾಡುತ್ತಲೇ ಬಂದಿದ್ದಾರೆ ಎಂಬ ಬಗ್ಗೆ ಆರ್‌ಟಿಐ ದಾಖಲೆಗಳೇ ಸಾರಿ ಹೇಳುತ್ತಿವೆ.

ಕೆಲಸ ಮಾಡದ ಕಾಲೇಜಿನಿಂದ ವರ್ಗಾವಣೆ!

ಚಿತ್ರದುರ್ಗದ ಮಹಾರಾಜ ಮದಕರಿನಾಯಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಸಿ ಎಂ ತ್ಯಾಗರಾಜರು ನೇಮಕಗೊಂಡಿಲ್ಲ. ಆದರೆ ನಕಲಿ ನೇಮಕಾತಿ ಆದೇಶಗಳನ್ನು ಸೃಷ್ಟಿಸಿದ್ದಾರೆ. ಚಿತ್ರದುರ್ಗ ಕಾಲೇಜು ಆರ್‌ಟಿಐ ಅರ್ಜಿಗೆ ಪ್ರತಿಕ್ರಿಯಿಸಿ, 1-1-1984 ರಿಂದ 31-7-1991ರವರೆಗೆ ನೇಮಕಗೊಂಡ ಉಪನ್ಯಾಸಕರ ನೇಮಕಾತಿ ಆದೇಶಗಳನ್ನು ಒದಗಿಸಿದೆ, ಆ ಆದೇಶಗಳಲ್ಲಿ 1-1-1984 ರಿಂದ 31-7-1991 ಅವಧಿಯಲ್ಲಿ ಸಿ ಎಂ ತ್ಯಾಗರಾಜ ಎಂಬ ಹೆಸರಿನ ವ್ಯಕ್ತಿಯನ್ನು ನೇಮಿಸಲಾಗಿಲ್ಲ. ಇಲ್ಲಿ ಬಯಲಾದ ಸತ್ಯ ಏನೆಂದರೆ, ಸಿ ಎಂ ತ್ಯಾಗರಾಜ ಅವರು ಮಹಾರಾಜ ಮದಕರಿನಾಯಕ ಪ್ರಥಮ ದರ್ಜೆ ಕಾಲೇಜಿನಲ್ಲಿ ನೇಮಕಗೊಂಡೇ ಇರಲಿಲ್ಲ. ಆದರೆ ಈ ಕಾಲೇಜಿನಿಂದ ಶಿವಮೊಗ್ಗದ ಆಚಾರ್ಯ ತುಳಸಿ ನ್ಯಾಷನಲ್ ಕಾಲೇಜ್ ಆಫ್ ಕಾಮರ್ಸ್ಗೆ ವರ್ಗಾವಣೆ ಆದೇಶವನ್ನು ಕಾಲೇಜು ಶಿಕ್ಷಣ ಇಲಾಖೆ ಹೊರಡಿಸಿದೆ.

ಚಿತ್ರದುರ್ಗ ವಿವಿ

ವೃತ್ತಿಯುದ್ದಕ್ಕೂ ಇಂತಹ ಹಲವು ಆರೋಪ ಬಂದಿರುವಾಗ, ಆರ್ಥಿಕ ಅಕ್ರಮದ ಆರೋಪದಲ್ಲಿ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿರುವ ವ್ಯಕ್ತಿ ಪ್ರಕರಣಕ್ಕೆ ಕೋರ್ಟ್‌ನಿಂದ ತಡೆ ತಂದ ತಕ್ಷಣ ನಿರಪರಾಧಿ ಆಗುತ್ತಾರಾ? ಇಂತಹ ಕಳಂಕಿತರನ್ನು ನೇಮಕ ಮಾಡಿದ ಸರ್ಕಾರ ಯಾವ ಸಂದೇಶ ಕೊಡುತ್ತಿದೆ? ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆ.

ಕುಲಪತಿಗಳ ವಿರುದ್ದ ಇರುವ ಆರೋಪಗಳ ಕುರಿತು ಸರ್ಕಾರವು ತಕ್ಷಣವೇ ತನಿಖೆಗೆ ಆದೇಶಿಸಬೇಕು. ತನಿಖೆ ಸಂದರ್ಭದಲ್ಲಿ ಕುಲಪತಿಗಳನ್ನು ಕಡ್ಡಾಯ ರಜೆಯ ಮೇಲೆ ಕಳಿಸಿ ಪಾರದರ್ಶಕವಾಗಿ ವಿಚಾರಣೆ ಒಳಪಡಿಸಬೇಕು ಎಂಬ ಕೂಗೆದ್ದಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...