ಮಲೆನಾಡಿನ ರೈತರು, ಕಾರ್ಮಿಕರು ಹಾಗೂ ಬಡವರು ಆತಂಕದಿಂದ ಬದುಕುವ ಪರಿಸ್ಥಿತಿ ಎದುರಾಗಿದೆ. ಅರಣ್ಯ ಇಲಾಖೆ ಕಳಸ ತಾಲ್ಲೂಕಿನ ಕಳಕೋಡು, ಹೋರನಾಡು, ಇಡಕಣಿ, ಸಂಸೆ, ಮರಸಣಿಗೆ, ತನೂಡಿಯ ಕಂದಾಯ ಭೂಮಿಯನ್ನು ಸೆಕ್ಷನ್ 4 (1) ಎಂದು ಘೋಷಿಸಿ ಮೀಸಲು ಅರಣ್ಯ ಮಾಡಿರುವ ಕುರಿತು ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನಲ್ಲಿ ರೈತ, ಕಾರ್ಮಿಕರ ಹಿತರಕ್ಷಣಾ ಸಮಿತಿಯಿಂದ ಸೋಮವಾರ ಬೆಳಗ್ಗೆ 11 ಗಂಟೆಗೆ ಕಳಶೇಶ್ವರ ದೇವಸ್ಥಾನದ ಆವರಣದಿಂದ ಅರಣ್ಯ ಇಲಾಖೆಯ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
ಕಳಕೋಡಿನ ಸರ್ವೆ ನಂ 20,70.80. ಮತ್ತು 55ರಲ್ಲಿ ಒಟ್ಟು 550.196 ಎಕರೆ ಕಂದಾಯ ಭೂಮಿಯನ್ನು ಮೀಸಲು ಅರಣ್ಯ ಮಾಡಲು ಹೊರಟಿದ್ದಾರೆ. ಹೊರನಾಡು ಗ್ರಾಮದಲ್ಲಿ ಸರ್ವೆನಂ 62,65,76,81,90,98,175.229 ಮತ್ತು 166ರಲ್ಲಿ ಒಟ್ಟು 1299.39 ಎಕರೆ ಕಂದಾಯ ಭೂಮಿಯನ್ನು ಮೀಸಲು ಅರಣ್ಯ ಎಂದು ಘೋಷಣೆ ಹೊರಡಿಸಲು ತಯಾರಿ ನಡೆದಿದೆ. ಹಾಗೇಯೇ ಕಳಸ ತಾಲ್ಲೂಕಿನ ಇಡಕಣಿ, ಸಂಸೆ, ಮರಸಣಿಗೆ, ತೋಟದೂರು, ತಲಗೋಡು ಗ್ರಾಮಗಳಲ್ಲಿ ಕಂದಾಯ ಭೂಮಿಯನ್ನು ಮೀಸಲು ಅರಣ್ಯ ಮಾಡುವ ಹೊನ್ನರ ನಡೆದಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಹೈಮಾಸ್ಟ್ ಬೀದಿ ದೀಪ ಅಳವಡಿಸಿ, ಕದ್ದವರನ್ನು ಬಂಧಿಸಿ; ವುಮೆನ್ ಇಂಡಿಯಾ ಮೂವ್‌ಮೆಂಟ್
ಹಕ್ಕೋತ್ತಾಯಗಳು: 1.ಈಗ ಪಹಣಿಗಳಲ್ಲಿ ಲಭ್ಯವಿರುವ ಗೋಮಾಳ ಭೂಮಿಯನ್ನು (ಕಂದಾಯ) ಮೀಸಲು ಅರಣ್ಯವಾಗಿ ಘೋಷಿಸಬಾರದು.
2. 2001-02ರಲ್ಲಿ ಅಂದಿನ ಜಿಲ್ಲಾಧಿಕಾರಿಗಳು ಅರಣ್ಯ ಎಂದು ಘೋಷಿಸಿರುವ ಸರ್ವೇ ನಂಬರಗಳಲ್ಲಿ ಕೃಷಿ ಭೂಮಿಗಳಿದ್ದು, ಮಂಜೂರಾತಿಗೆ ಸಮಸ್ಯೆಯಾಗಿರುವುದರಿಂದ ಮತ್ತೆ ಈ ಭೂಮಿಗಳನ್ನು ಕಂದಾಯ ಭೂಮಿಯನ್ನಾಗಿ ಘೋಷಿಸಬೇಕು.
3. ಫಾರಂ 50, 53, 57 ಹಾಗೂ 94C ಅಡಿಯಲ್ಲಿ ಅರ್ಜಿ ಹಾಕಿದ ಎಲ್ಲಾ ಅರ್ಹ ಫಲಾನುಭವಿಗಳಿಗೆ ಕೂಡಲೇ ಹಕ್ಕು ಪತ್ರ ವಿತರಿಸಲುಕ್ರಮ ಕೈಗೊಳ್ಳಬೇಕು.
4. ಪ್ರತಿಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ 10 ಎಕರೆ ಭೂಮಿಯನ್ನು ನಿವೇಶನಕ್ಕಾಗಿ ಮೀಸಲಿಡಬೇಕು.
5. ಫಾರಂ 57ರ ಮಂಜುರಾತಿಗೆ ವಾಣಿಜ್ಯ ಬೆಳೆಗಳನ್ನು ಹೊರಗಿಟ್ಟಿರುವುದರಿಂದ ಮಲೆನಾಡಿಗರಿಗೆ ಅನ್ಯಾಯವಾಗುತ್ತಿದ್ದು ಇದನ್ನು ಕೂಡಲೇ ಸರಿಪಡಿಸಬೇಕು.
6. ಅರಣ್ಯಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಕೇಂದ್ರ ಸರ್ಕಾರ ಅರಣ್ಯಕಾಯ್ದೆಗೆ ತಿದುಪಡಿ ತರಲು ಸಂಸತ್ತಿನಲ್ಲಿ ಕಾನೂನು ರೂಪಿಸಬೇಕು.
7. ಗ್ರಾಮಗಳ ಅಭಿವೃದ್ಧಿಗೆ ಅರಣ್ಯ ಇಲಾಖೆ ಅಡಚಣೆ ಮಾಡುವುದನ್ನು ನಿಲ್ಲಿಸಬೇಕು.
8. ಗ್ರಾಮೀಣ ಭಾಗದ ರಸ್ತೆಗಳನ್ನು ಕಾಂಕ್ರೀಟ್ ಕರಣಗೊಳಿಸಿ ಸರ್ವಋತು ರಸ್ತೆಗಳನ್ನಾಗಿ ಮಾರ್ಪಡಿಸಬೇಕು ಹಾಗೂ ಇನ್ನೂ ಹಲವಾರು ಬೇಡಿಕೆಯಿಟ್ಟು ಪ್ರತಿಭಟನೆ ಕೈಗೊಳ್ಳಲಾಗಿದೆ.





