ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಕರಿಕಲ್ ತಾಂಡಾದಲ್ಲಿ ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ನಡೆದಿದೆ.
ಮೃತ ರೈತನ ಹೆಸರು ಪ್ರಕಾಶ್ ಶೆವು ಜಾಧವ್(39). ಇವರು 2 ಎಕರೆ ಜಮೀನನ್ನು ಲೀಸ್‌ಗೆ ತೆಗೆದುಕೊಂಡು ತೊಗರಿ ಬೆಳೆ ಬೆಳೆದಿದ್ದರು. ಬೆಳೆ ನಷ್ಟ ಮತ್ತು ಸಾಲದ ಒತ್ತಡ ತಾಳಲಾರದೆ ಇವರು ತಮ್ಮ ಹೊಲದಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿಎಸ್‌ಎಸ್‌ಎನ್ ಸಹಕಾರ ಸಂಘದಲ್ಲಿ ₹25,000 ಸಾಲ, ಖಾಸಗಿ ಸಾಲಗಾರರಿಂದ ಸುಮಾರು ₹12 ಲಕ್ಷ ಸಾಲ ಸೇರಿದಂತೆ ಒಟ್ಟು 12 ಲಕ್ಷದ 25 ಸಾವಿರ ರೂಪಾಯಿ ಸಾಲ ಮಾಡಿಕೊಂಡಿದ್ದರು. ಕುಟುಂಬದ ಏಕೈಕ ಆಧಾರವಾಗಿದ್ದ ಪ್ರಕಾಶ್ ಇದೀಗ ಇಲ್ಲದಾಗಿದ್ದು, ಈ ಕುಟುಂಬ ಈಗ ಅತೀವ ಆರ್ಥಿಕ ಬಡತನ ಮತ್ತು ಮಾನಸಿಕ ಸಂಕಷ್ಟದಲ್ಲಿದೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಶಾಸಕರಿಗೆ ದೆಹಲಿ ಹೋಗುವ ಅಧಿಕಾರವಿದೆ: ಸಚಿವ ಎಂ ಬಿ ಪಾಟೀಲ
ಸರ್ಕಾರ ಸಾಲ ಮನ್ನಾ ಮಾಡಿ, ಕುಟುಂಬಕ್ಕೆ ತಕ್ಷಣದ ಪರಿಹಾರ ಮತ್ತು ಪುನರ್ವಸತಿ ನೀಡಬೇ ಎಂದು ಸ್ಥಳೀಯರು ಮತ್ತು ರೈತ ಸಂಘಟನೆಗಳು ಆಗ್ರಹಿಸುತ್ತಿವೆ.

ರೈತ ಪ್ರಕಾಶ್ ಶೆವು ಜಾಧವ್ ಅವರು ಪತ್ನಿ ಕವಿತಾಬಾಯಿ, ಹಿರಿಯ ಮಗಳು ಏಕಾಂತ, ಮಗ ದೇವರಾಜ್, ಕಿರಿಯ ಮಗ ವಿನಾಯಕ್ ಅವರನ್ನು ಅಗಲಿದ್ದಾರೆ.






