ಮಂಡ್ಯ | ನ.17ರಂದು ಕನ್ನಡಹಬ್ಬ; ಕವಿಗೋಷ್ಠಿ ಕಾರ್ಯಕ್ರಮ

Date:

ಮಂಡ್ಯ ನಗರದ ಗಾಂಧಿ ಭವನದಲ್ಲಿ ಡಾ.ಜೀಶಂಪ ಸಾಹಿತ್ಯ ವೇದಿಕೆ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಯುವಸೇನೆ ವತಿಯಿಂದ ನವೆಂಬರ್ 17ರ ಭಾನುವಾರ ಬೆಳಿಗ್ಗೆ 10-30ಕ್ಕೆ ಕನ್ನಡಹಬ್ಬ, ಕವಿಗೋಷ್ಠಿ ಹಾಗೂ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಡಾ.ಜೀಶಂಪ ಸಾಹಿತ್ಯ ವೇದಿಕೆಯ ರಾಜ್ಯಾಧ್ಯಕ್ಷ ಎಸ್ ಕೃಷ್ಣ ಸ್ವರ್ಣಸಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದು, “ಮೈಸೂರು ವಿಶ್ವವಿದ್ಯಾನಿಲಯ ಸಿಂಡಿಕೇಟ್ ಮಾಜಿ ಸದಸ್ಯ ಡಾ. ಈ ಸಿ ನಿಂಗರಾಜೇಗೌಡ ಕನ್ನಡಹಬ್ಬ ಉದ್ಘಾಟಿಸುವರು. ಹಿರಿಯ ಸಾಹಿತಿ ಡಾ. ಹೆಚ್ ಎಸ್ ಮುದ್ದೇಗೌಡ ಅಧ್ಯಕ್ಷತೆ ವಹಿಸಲಿದ್ದು, ಸುವರ್ಣ ಕರ್ನಾಟಕ ಸೇವಾರತ್ನ ಪ್ರಶಸ್ತಿಯನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾಧ್ಯಕ್ಷ ಬಿ ಪಿ ಪ್ರಕಾಶ್ ಪ್ರಶಸ್ತಿ ಪ್ರದಾನ ಮಾಡುವರು. ಬೆಂಗಳೂರಿನ ಕರ್ನಾಟಕ ರಾಜ್ಯ ಸಾಫ್ಟ್‌ಬಾಲ್‌ ಕ್ರಿಕೆಟ್ ಅಸೋಸಿಯೇಷನ್ ಸಂಸ್ಥಾಪಕ ಅಧ್ಯಕ್ಷ ಡಾ.ಗಂಗಾಧರ ರಾಜು ಕನ್ನಡರತ್ನ ಪ್ರಶಸ್ತಿ ಪ್ರದಾನ ಮಾಡುವರು” ಎಂದರು.

“ರಾಜ್ಯ ಮಟ್ಟದ ಕಾವ್ಯಶ್ರೀ ಪ್ರಶಸ್ತಿಯನ್ನು ಡಾ.ಜೀಶಂಪ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಸ್ ಕೃಷ್ಣಸ್ವರ್ಣಸಂದ್ರ ಪ್ರದಾನ ಮಾಡುವರು. ಡಾ. ಜೀಶಂಪ ಸಾಹಿತ್ಯ ವೇದಿಕೆಯ ಉಪಾಧ್ಯಕ್ಷರಾದ ಮಾಡ್ಲ ಅರಸಯ್ಯ ಕವಿಗಳಿಗೆ ನೆನಪಿನ ಕಾಣಿಕೆ ನೀಡುವರು. ಬೆಂಗಳೂರಿನ ಸಮಾಜಸೇವಕಿ ಡಾ.ಹೇಮಾ ರೆಡ್ಡಿ ಪ್ರಮಾಣ ಪತ್ರ ವಿತರಣೆ ಮಾಡುವರು. ಪ್ರೌಢಶಾಲಾ ಸಹ ಶಿಕ್ಷಕರ ಸಂಘ ದಕ್ಷಿಣ ವಲಯ ಅಧ್ಯಕ್ಷ ಮಂಗಲ ಶಿವಣ್ಣ ಪ್ರಾಸ್ತಾವಿಕವಾಗಿ ಮಾತನಾಡುವರು” ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸುವರ್ಣ ಕರ್ನಾಟಕ ಸೇವಾರತ್ನ ಪ್ರಶಸ್ತಿ ಪುರಸ್ಕೃತರು: ಡಾ.ಹೇಮಾ ರೆಡ್ಡಿ(ಸಮಾಜಸೇವೆ), ಡಿ ಜಯರಾಮು(ಸಮಾಜಸೇವೆ), ಡಾ ಗಂಗಾಧರರಾಜು(ಕ್ರೀಡೆ), ಸುರೇಶ್ ಕಂಠಿ(ಜನಪರ), ಬನ್ನಂಗಾಡಿ ಸಿದ್ದಲಿಂಗಯ್ಯ(ಸಂಘಟನೆ), ಹೆಚ್ ಎಂ ಸಿದ್ದೇಗೌಡ(ಉದ್ಯಮಿ), ಹೆಚ್ ಎಂ ವೆಂಕಟೇಶ್(ಸಮಾಜಸೇವೆ), ಡಾ ಹೊನ್ನೇಗೌಡ(ಸಾಹಿತ್ಯ), ಕೀಲಾರ ಕೃಷ್ಣ(ಸಹಕಾರ), ಬಿ ಜಿ ಶಿವರಾಮ್(ಸಮಾಜಸೇವೆ).

ಕನ್ನಡಹಬ್ಬ ಪುರಸ್ಕೃತರು: ಕಿಕ್ಕೇರಿ ನಾಗರಾಜು(ಶಿಕ್ಷಣ), ಹೆಚ್ ಆರ್ ಧನಂಜಯ(ಶಿಕ್ಷಣ), ಕೆ ವಿಜಯಕುಮಾರ್(ಮುದ್ರಣ), ಡಾ.ಸಿ ವಾರಯ್ಯ(ಶಿಕ್ಷಣ, ಸಾಹಿತ್ಯ), ಮಂಡ್ಯ ಯಶು(ಭರತನಾಟ್ಯ), ಮಂಜುಳಾ ಆಲದಹಳ್ಳಿ(ಗಾಯಕಿ-ಜನಪದ ಕಲಾವಿದೆ), ಎ ವಿ ಕುಮಾರ್(ಜನಪದ ಕಲೆ), ವಿಶ್ವನಾಥ್‌ಗೌಡ(ಸಾಹಿತ್ಯ), ಎನ್ ಶ್ರೀಕಂಠೇಶ್ವರ ಶರ್ಮ(ಸಂಕೀರ್ಣ), ಆರ್ ಮಂಗಳ(ಸಂಘಟನೆ, ಸಮಾಜಸೇವೆ), ಡಾ. ಶಿವರುದ್ರಪ್ಪ(ಶಿಕ್ಷಣ), ಜನಾರ್ಧನ ಹೂತಗೆರೆ(ಹೋರಾಟ), ಪ್ರಮಿಳಾ ಕುಮಾರಿ(ಹವ್ಯಾಸಿ ರಂಗಭೂಮಿ), ಶಿವಮಾದೇಗೌಡ(ಶಿಕ್ಷಣ), ಎಂ ಎಂ ಶಿವನಂಜಯ್ಯ(ರಂಗಕರ್ಮಿ).

ಇದನ್ನು ಓದಿದ್ದೀರಾ? ಜಾತಿ ದೌರ್ಜನ್ಯ | ದಲಿತ ವ್ಯಕ್ತಿ ಕುರ್ಚಿಯಲ್ಲಿ ಕುಳಿತಿದ್ದಕ್ಕೆ ಬ್ರಾಹ್ಮಣನ ದಾಂಧಲೆ

ರಾಜ್ಯ ಮಟ್ಟದ ಕಾವ್ಯಶ್ರೀ ಪ್ರಶಸ್ತಿ ಪುರಸ್ಕೃತರು: ಸೀತಾಲಕ್ಷ್ಮಿವರ್ಮ(ಮಂಗಳೂರು), ಬಿ ಎನ್ ರವಿ(ಬೆಂಗಳೂರು), ಮುತ್ತುರಾಜು ಚಿನ್ನಹಳ್ಳಿ(ತುಮಕೂರು), ಹರವು ಶ್ರೀನಿವಾಸ್(ರಂಗಭೂಮಿ), ಸುವರ್ಣ ಮಾಳಗಿಮನಿ(ಬಂಕಾಪುರ), ಶ್ವೇತ ಡಿ ಪ್ರಕಾಶ್(ಪಾಂಡವಪುರ), ವಸಂತಕುಮಾರಿ(ಬೆಂಗಳೂರು), ಬಸಪ್ಪ(ಬೆಂಗಳೂರು), ಚಂದ್ರು(ಬೆಸಗರಹಳ್ಳಿ), ಮಂಜುನಾಥ್ ಹಿರೀಬಿಳತಿ(ಹಾಸನ).

ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 66 ಮಂದಿ ಕವನ ವಾಚಿಸುವರು ಎಂದು ವೇದಿಕೆಯ ರಾಜ್ಯಾಧ್ಯಕ್ಷ ಎಸ್ ಕೃಷ್ಣ ಸ್ವರ್ಣಸಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...