ಕಳಸ | ರೈತರ ಕೃಷಿ ಒತ್ತುವರಿ ಜಮೀನನ್ನು ತೆರವು ಮಾಡಿದರೆ ಉಗ್ರ ಹೋರಾಟ: ರೈತ ಸಂಘ ಎಚ್ಚರಿಕೆ

Date:

ರೈತರು ಬದುಕಿಗಾಗಿ ಮಾಡಿರುವ ಕೃಷಿ ಒತ್ತುವರಿ ಜಮೀನನ್ನು ತೆರವು ಮಾಡಿದರೆ ಉಗ್ರ ಹೋರಾಟ ಹಮ್ಮಿಕೊಳುವುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ರೈತ ಮುಖಂಡರು, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಿಂದ ಹೊರತುಪಡಿಸಿದ ಪ್ರದೇಶಗಳ ರೈತರುಗಳ ಮೇಲೆ ಹಾಕಿದ 64(ಎ) ರಡಿ ನೀಡಿದ ತೆರವು ನೋಟಿಸುಗಳನ್ನು ವಾಪಸ್ಸು ಪಡೆಯಬೇಕು ಮತ್ತು ಎಲ್ಲಾ ರೈತರುಗಳ ಮೇಲೆ ಹಾಕಿದ ಮೊಕದ್ದಮೆಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಮಲೆನಾಡಿನ ಜನತೆಯು ಇಂದು ತನ್ನದೇ ಆದಂತಹ ಸಮಸ್ಯೆಗಳ ಸುಳಿವಿನಲ್ಲಿ ಸಿಲುಕಿದ್ದಾರೆ. ರೈತ ಸಮುದಾಯವು ಎದುರಿಸುತ್ತಿರುವ ಸಮಸ್ಯೆಗಳು ನೂರಾರಿದೆ. ಅದೆಷ್ಟೋ ಕುಟುಂಬಗಳಿಗೆ ಇಂದಿಗೂ ತನ್ನ ಬದುಕಿಗೆ ಅಗತ್ಯವಾಗಿ ಬೇಕಾಗಿರುವ ವಸತಿ, ರಸ್ತೆ ಕುಡಿಯುವ ನೀರು ಹಾಗೂ ಅಗತ್ಯವಾಗಿ ಬೇಕಾಗಿರುವುದು ‘ಭೂಮಿಯ ಮೇಲೆ ಮಾಡಿರುವ ಕೃಷಿ ಮತ್ತು ವಸತಿಗೆ ಬೇಕಾಗಿರುವುದು ಹಕ್ಕುಪತ್ರ. ಭಾರತೀಯ ಪ್ರಜೆಯಾಗಿ ಪ್ರಜೆಗಳಿಂದಲೇ ರಚಿಸಲ್ಪಟ್ಟ ಕಾನೂನುಗಳನ್ನು ಬಡ ರೈತರ ಮೇಲೆ ಮಾತ್ರ ಕಾನೂನುಗಳ ತಪ್ಪು ಗ್ರಹಿಕೆಯ ಮೂಲಕ ಶೋಷಿಸುತ್ತಿವೆ ಎಂದು ದೂರಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅರಣ್ಯ ಕಾನೂನುಗಳು ಕಠಿಣವಾಗಿದೆ ಎಂದು ಹೇಳುವ ಉದ್ದೇಶಪೂರ್ವಕವಾಗಿ ಕಾನೂನುಗಳ ತಪ್ಪು ಅರ್ಥ ವಿವರಣೆಯ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಮತ್ತು ರೈತರ ಹಾಗೂ ನಾಗರಿಕರ ಹಕ್ಕುಗಳಿಗೆ ಮೂಲಕ ಅರಣ್ಯ ಇಲಾಖೆಯವರು ಕಾನೂನಿನ ರಕ್ಷಣೆ ತಡೆಯೊಡ್ಡುತ್ತಿರುವುದು ಪ್ರಜಾ ಪ್ರಭುತ್ವದ ವ್ಯವಸ್ಥೆಗೆ ಮಾರಕವಾಗಿದೆ. ಮಲೆನಾಡಿನ ಹೆಚ್ಚಿನ ರೈತರು ಬದುಕಿಗಾಗಿ ಕೃಷಿಯನ್ನು ಅವಲಂಬಿಸಿದ್ದು ಇಲ್ಲಿನ ಕಾಡುಗಳನ್ನು ರಕ್ಷಿಸಿಕೊಂಡು ಬಂದಿರುತ್ತಾರೆ. ಆದರೆ ಪರಿಸರದ ಹೆಸರಿನಲ್ಲಿ ಕಸ್ತೂರಿ ರಂಗನ್ ವರದಿ ವಿಶ್ವ ಪಾರಂಪರಿಕ ತಾಣ, ಮೀಸಲು ಅರಣ್ಯ, ಡೀಮ್ದ್‌ ಫಾರೆಸ್ಟ್ ಇನ್ನಿತರ ಅನೇಕ ಹೆಸರುಗಳಲ್ಲಿ ಮಲೆನಾಡನ್ನು ನರಳುವಂತೆ ಮಾಡಿದೆ. ಮಲೆನಾಡಿನ ಜನರು, ಅರಣ್ಯ ವಾಸಿಗಳು ಭೂಮಿಯ ತಾಪಮಾನದ ಏರಿಕೆಗೆ ಕಾರಣರಲ್ಲ. ಇವರನ್ನು ಕಾಡಿನಿಂದ ಹೊರಹಾಕಿದರೆ ಎಲ್ಲವು ಸರಿಯಾಗುತ್ತದೆ ಎಂಬುವುದು ಭ್ರಮೆಯಷ್ಟೇ ಎಂದು ಹೇಳಿದರು.

ಭೂ ತಾಪಮಾನದ ಏರಿಕೆಗೆ ಕಾರಣವಾಗಿರುವುದು ಮಾನವನ ಆಧುನಿಕ ಜೀವನ ಶೈಲಿಯಾಗಿದೆ. ಕಾರ್ಖಾನೆಗಳು ಮತ್ತು ಜನಸಂಖ್ಯಾ ಹೆಚ್ಚಳ ಮತ್ತು ವಾಹನಗಳ ಬಳಕೆಗಾಗಿ ಸುಡುತ್ತಿರುವ ಡೀಸೆಲ್, ಪೆಟ್ರೋಲ್ ಮತ್ತು ಇಂಧನಕ್ಕಾಗಿ ಸುಡುತ್ತಿರುವ ಕಲ್ಲಿದ್ದಲು, ಮತ್ತು ಆಧುನಿಕ ಸಂಪರ್ಕ ಸಾಧನಗಳು ಮದ್ದುಗಳು ಕ್ಷಿಪಣಿಗಳು ಇತ್ಯಾದಿಯಾಗಿದೆ” ಎಂದು ರೈತ ಸಂಘಟನೆ ಗೌರವಾಧ್ಯಕ್ಷರಾದ ಸುರೇಶ್ ಭಟ್ ಅವರು ತಿಳಿಸಿದರು.

photo 6213174483410337126 y

ಕುದುರೆಮುಖದಲ್ಲಿರುವ ಕಂದಾಯ ಭೂಮಿಯನ್ನು ಅಗತ್ಯಕ್ಕೆ ತಕ್ಕಂತೆ ಅರಣ್ಯವಾಗಿ ಪರಿವರ್ತಿಸಿ, ಸಂಸೆ ಗ್ರಾಮದ ಸರ್ವೆ ನಂ.183ರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಗೆ ಬರುವ ರೈತರ ಅರಣ್ಯ ಕೃಷಿ ಭೂಮಿಯನ್ನು ಕಂದಾಯವನ್ನಾಗಿ ಪರಿವರ್ತಿಸಿ ಪಹಣಿ-ಪಟ್ಟಾ ನೀಡಬೇಕು. ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಹೊರಗಿಟ್ಟ ಗ್ರಾಮಾಂತರ ಪ್ರದೇಶದ ಅಭಿವೃದ್ಧಿ ಕಾರ್ಯಗಳಿಗೆ ಅರಣ್ಯ ಇಲಾಖೆ ಅಡ್ಡಿಪಡಿಸಬಾರದು ಎಂದು ರೈತರು ಆಗ್ರಹಿಸಿದರು.

photo 6213174483410337127 y

ಕಸ್ತೂರಿರಂಗನ್ ವರದಿ ಜಾರಯು ಗ್ರಾಮಗಳ ಅಭಿವೃದ್ಧಿ ಕಾರ್ಯಗಳಿಗೂ ಮತ್ತು ರೈತರುಗಳಿಗೆ ಕೆಲವು ನಿರ್ಬಂಧಗಳನ್ನು ಹೇರುವುದರಿಂದ ಕಸ್ತೂರಿ ರಂಗನ್ ವರದಿಯನ್ನು ಜಾರಿಗೆ ತರಬಾರದು. ಕುದುರೆಮುಖ ರಾಷ್ಟ್ರೀಯ ಉದ್ಯಾನವನವು 56,319 ಹೆಕ್ಟ‌ರ್ ಪ್ರದೇಶವನ್ನು ಹೊಂದಿದ್ದು, ಮುಂದೆಯೂ ಜನರ ಸಹಕಾರದಿಂದ ಪ್ರಾಣಿ ವೈವಿದ್ಯತೆ ಮತ್ತು ಸಸ್ಯ ವೈವಿದ್ಯತೆಗೆ ಒತ್ತು ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಶ್ರೀನಿವಾಸ್, ಟಿ ಎಲ್ ಕೃಷ್ಣೇಗೌಡ ಸೇರಿದಂತೆ ಮತ್ತಿತರರಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...