ಕಾರವಾರ: ಅರಣ್ಯ ಇಲಾಖೆ ಮಾರ್ಗದರ್ಶನದಲ್ಲಿ ಭಾವಳ ಕಡಲತೀರದಲ್ಲಿ ಕಡಲಾಮೆ ಮರಿಗಳನ್ನು ಸಮುದ್ರಕ್ಕೆ ಬಿಡುವ ವಿಶೇಷ ಕಾರ್ಯಕ್ರಮ ನಡೆಯಿತು.
ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಕಾರವಾರ ವಿಭಾಗ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಕಾರವಾರ ಉಪವಿಭಾಗದ ಮಾರ್ಗದರ್ಶನದಂತೆ, ಕೋಸ್ಟಲ್ & ಮರೈನ್ ಇಕೋ ಸಿಸ್ಟಮ್ ಸೆಲ್ ಕಾರವಾರದ ಸಲಹೆ ಸೂಚನೆ ಮೇರೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಗೂಡಿನಿಂದ ಹೊರಬಂದ ಒಟ್ಟು 66 ಕಡಲಾಮೆ ಮರಿಗಳನ್ನು ಸುರಕ್ಷಿತವಾಗಿ ಸಮುದ್ರಕ್ಕೆ ಪುನಃ ಬಿಡಲಾಯಿತು. ಕಡಲಾಮೆಗಳ ಸಂರಕ್ಷಣೆ ಮತ್ತು ಸಮುದ್ರ ಪರಿಸರದ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸ್ಥಳೀಯರು ಹಾಗೂ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ವೈಟ್ ಬೋರ್ಡ್ ವಾಹನಗಳಲ್ಲಿ ಬಾಡಿಗೆ ಓಡಿಸಿದರೆ ಲೈಸೆನ್ಸ್ ರದ್ದು: ಜಿಲ್ಲಾಧಿಕಾರಿಗಳ ಖಡಕ್ ಸೂಚನೆ
ಮರೈನ್ ಬಯಾಲಜಿ ವಿಭಾಗದ ವಿದ್ಯಾರ್ಥಿಗಳು, ಜೆಎಲ್‌ಆರ್ ಪ್ರವಾಸಿಗರು, ಪ್ರಾಣಿಪ್ರಿಯರು, ಸ್ಥಳೀಯ ಮೀನುಗಾರರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕೋಸ್ಟಲ್ & ಮರೈನ್ ಇಕೋ ಸಿಸ್ಟಮ್ ಸೆಲ್ ಹಾಗೂ ಗೋಪಿಶಿಟ್ಟಾ ವಲಯದ ಉಪ ವಲಯ ಅರಣ್ಯಾಧಿಕಾರಿಗಳು, ಗಸ್ತು ಅರಣ್ಯ ಪಾಲಕರು ಮತ್ತು ಸಿಬ್ಬಂದಿಗಳು ಸಹಕರಿಸಿದರು.
ಈ ಸಂದರ್ಭದಲ್ಲಿ ಕಾರವಾರ ವಿಭಾಗದ ಮಾನ್ಯ ಶ್ರೀ ರವಿಶಂಕರ್ ಸಿ (ಐಎಫ್‌ಎಸ್), ಕಾರವಾರ ಉಪವಿಭಾಗದ ಶ್ರೀ ಕೆ.ಡಿ. ನಾಯ್ಕ್, ಗೋಪಿಶಿಟ್ಟಾ ವಲಯ ಅರಣ್ಯಾಧಿಕಾರಿ ಶ್ರೀ ವಿ.ಪಿ. ನಾಯ್ಕ್, ನೌಕಾಪಡೆ ಕಾರವಾರದ ಹೆಚ್ಚುವರಿ ಹಣಕಾಸು ಸಲಹೆಗಾರರಾದ ಶ್ರೀಮತಿ ಕೆ.ಜಿ. ಅಮೂಲ್ಯ (ಐಡಿಎಎಸ್) ಹಾಗೂ ಉಪ ಹಣಕಾಸು ಸಲಹೆಗಾರರಾದ ಎಸ್. ಕೃಷ್ಣಮೂರ್ತಿ (ಐಡಿಎಎಸ್) ಉಪಸ್ಥಿತರಿದ್ದರು.





