ಕಾರವಾರ: ನಗರದ ಸರ್ಕಾರಿ ಆಯುರ್ವೇದ ಆಸ್ಪತ್ರೆಗೆ ರೋಟರಿ ಕ್ಲಬ್ ಆಫ್ ಕಾರವಾರ ಪಶ್ಚಿಮ ಹಾಗೂ ಐಡಿಬಿಐ ಬ್ಯಾಂಕ್ ಕಾರವಾರ ಶಾಖೆಯ ಸಹಯೋಗದಲ್ಲಿ ಸಿಎಸ್‌ಆರ್ ನಿಧಿಯಡಿ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ದೇಣಿಗೆಯಾಗಿ ನೀಡಲಾಯಿತು.
ಆಸ್ಪತ್ರೆಯಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ವಾಷ್ಪ ಚಿಕಿತ್ಸೆಗಾಗಿ ಬಳಸುವ ಸ್ಟೀಮರ್, ಪಂಚಕರ್ಮ ಚಿಕಿತ್ಸೆಗೆ ಅಗತ್ಯವಾದ ಮಸಾಜ್ ಮಂಚ ಹಾಗೂ ಬಸ್ತಿ ಚಿಕಿತ್ಸಾ ಯಂತ್ರಗಳನ್ನು ಈ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು.
ಈ ಉಪಕರಣಗಳು ಆಸ್ಪತ್ರೆಯ ಚಿಕಿತ್ಸಾ ಸೇವೆಗಳನ್ನು ಮತ್ತಷ್ಟು ಸುಧಾರಿಸಲು ಸಹಾಯಕವಾಗಲಿದ್ದು, ಪಂಚಕರ್ಮ ಚಿಕಿತ್ಸೆಗೆ ಬರುವ ರೋಗಿಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ದೇಣಿಗೆ ಹಸ್ತಾಂತರ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಆಫ್ ಕಾರವಾರ ಪಶ್ಚಿಮದ ಅಧ್ಯಕ್ಷ ಅಕ್ಷಯ ಅಧ್ಯಕ್ಷತೆ ವಹಿಸಿದ್ದರು.
ಐಡಿಬಿಐ ಬ್ಯಾಂಕ್ ಕಾರವಾರ ಶಾಖೆಯ ವ್ಯವಸ್ಥಾಪಕ ಪ್ರಸನ್ನ ಭಟ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ವಿಶೇಷ ಅತಿಥಿಗಳಾಗಿ ರೋಟರಿ ಜಿಲ್ಲಾ ಗವರ್ನರ್ ನಾಮನಿರ್ದೇಶಿತ ಅಶೋಕ್ ನಾಯ್ಕ, ಡಾ. ಪ್ರವೀಣ್ ಹಾಗೂ ಸಂಜೀವ್ ಉಪಸ್ಥಿತರಿದ್ದರು.
ಈ ಸುದ್ದಿ ಓದಿದ್ದೀರಾ ? ಮುಂಡಗೋಡ | ಕ್ಷುಲ್ಲಕ ಕಾರಣಕ್ಕೆ ಪರಿಶಿಷ್ಟ ಜಾತಿ ವ್ಯಕ್ತಿ ಮೇಲೆ ಹಲ್ಲೆ; ನಾಲ್ವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲು
ಕಾರ್ಯಕ್ರಮದ ನಿರೂಪಣೆಯನ್ನು ಖಜಾಂಚಿ ರತ್ನಾಕರ್ ನಡೆಸಿಕೊಟ್ಟರೆ, ಸಂಯೋಜಕರಾಗಿ ಪ್ರೀತಮ್ ಕಾರ್ಯನಿರ್ವಹಿಸಿದರು. ಕಾರ್ಯದರ್ಶಿ ಧರ್ಮೇಶ್ ಸೇರಿದಂತೆ ದಿನೇಶ್, ಲಕ್ಷ್ಮೀಕಾಂತ್, ಡೆಮಿ, ಪ್ರಜ್ಞಾ, ರಾಜು ಪಾಟೀಲ್, ಮಹಬೂಬ್, ಅರವಿಂದ್, ಜಿತೇಂದ್ರ ಹಾಗೂ ನಿತಿನ್ ಈ ವೇಳೆ ಉಪಸ್ಥಿತರಿದ್ದರು.





