ಹತ್ತನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬಂದಡ್ಕ ಎಂಬಲ್ಲಿ ನಡೆದಿದೆ. ಬಂದಡ್ಕ ಊಙತಡ್ಕದ ಸವಿತಾ ಎಂಬವರ ಪುತ್ರಿ ದೇವಿಕಾ ಮೃತಪಟ್ಟವರು. ವಿದ್ಯಾರ್ಥಿ ಕುಂಡಂಗುಳಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಓದುತ್ತಿದ್ದಳು.
ಇದನ್ನೂ ಓದಿ: ಮಂಗಳೂರು | ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಮಂಗಳವಾರ ದೇವಿಕಾಳ ತಂದೆ ಸತೀಶ್ ರ ಪುಣ್ಯತಿಥಿ ದಿನದಂದೇ ಈ ಘಟನೆ ಜರುಗಿದೆ. ಬೆಳಿಗ್ಗೆ ಅಜ್ಜಿ ಮತ್ತು ಸಹೋದರ ಮಾತ್ರ ಮನೆಯಲ್ಲಿ ಇದ್ದರು. ತಾಯಿ ಸವಿತಾ ಬಂದಡ್ಕ ಗ್ರಾಮೀಣ ಬ್ಯಾಂಕ್ ಸಮೀಪ ಹೋಟೇಲ್ ನಡೆಸುತ್ತಿದ್ದಾರೆ.
ಬೆಳಿಗ್ಗೆ ದೇವಿಕಾ ನಾಪತ್ತೆಯಾದ ಹಿನ್ನಲೆ ಸಹೋದರ ಶೋಧ ನಡೆಸಿದಾಗ ಸೀರೆಯಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಸ್ಥಳಕ್ಕೆ ಬೇಡಡ್ಕ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





