ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗೆ ಕೆ.ಸಿ ವ್ಯಾಲಿ ಮತ್ತು ಹೆಚ್ ಎನ್ ವ್ಯಾಲಿ ನೀರು ತಂದಿದ್ದು‌ ಅಂತರ್ಜಲ ವೃದ್ಧಿಗಾಗಿ : ರಫೀ ವುಲ್ಲಾ

Date:

ಚಿಕ್ಕಬಳ್ಳಾಪುರ: ರಾಜ್ಯದ ಬಯಲು ಸೀಮೆಯ ಕೋಲಾರ ಚಿಕ್ಕಬಳ್ಳಾಪುರ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಸುಮಾರು 65 ಲಕ್ಷ ಜನತೆಯ ದೀರ್ಘಕಾಲದ ಬೇಡಿಕೆ ಹೆಚ್.ಎನ್.ವ್ಯಾಲಿ ಮತ್ತುಕೆ.ಸಿ.ವ್ಯಾಲಿ ಮೂರನೇ ಹಂತದ ಶುದ್ಧೀಕರಣ ಆಗದೆ ಇರಲು ಪ್ರಮುಖ ಕಾರಣ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಎನ್‌.ಡಿ.ಎ ಸರ್ಕಾರವೆ ಹೊರತು ಕಾಂಗ್ರೆಸ್ ಪಕ್ಷದ ಸರ್ಕಾರದಲ್ಲ ಎಂದು ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಉಪಾಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಬಿ.ಎಸ್. ರಫಿ ಉಲ್ಲಾ ನೇರವಾಗಿ ಆರೋಪಿಸಿದರು.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿ ತಿಳಿಸಿರುವ ಅವರು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವರಾದ ವೀರಪ್ಪ ಮೋಯ್ಲಿ ರವರ ಜೀವನದ ಕನಸಿನ ಕೂಸು ಎತ್ತಿನಹೊಳೆ ಯೋಜನೆಯ ಮುಂದಿನ 2 ವರ್ಷಗಳಲ್ಲಿ ಪೂರ್ಣಗೊಳ್ಳುವುದು ಶತಸಿದ್ದ ಅಂತೆಯೇ ಈ ಭಾಗದ ಜನತೆಯ ಆಶಯ ಸಹಾ ಮೊಯ್ಲಿ ಅವರ ದೂರ ದೃಷ್ಟಿ ಸಕಾರ ಗೊಳ್ಳಲಿದೆ ಎಂದು ತಿಳಿಸಿರುವ ಬಿ.ಎಸ್. ರಫೀ ಉಲ್ಲಾ ಅವರು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ರವರ ನೇತೃತ್ವದ ಎನ್. ಡಿ.ಎ.ಸರ್ಕಾರ ರಾಜ್ಯಕ್ಕೆ ನ್ಯಾಯೋಚಿತವಾಗಿ ಸಲ್ಲಬೇಕಾದ ಜಿಎಸ್‌ಟಿ ನೀಡದೆ ಇರುವುದು ಆರ್ಥಿಕ ಮುಗ್ಗಟ್ಟಿಗೆ ಕಾರಣವಾಗಿದ್ದು ಒಂದು ವೇಳೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಸುಮಾರು 10ಸಾವಿರ ಕೋಟಿ ಜಿಎಸ್‌ಟಿ ಹಣ ಬರಬೇಕಾದ ತಾರತಮ್ಯ ಇಲ್ಲದೆ ನೀಡಿದ್ದರೆ ಆರ್ಥಿಕ ಸೌಲಭ್ಯ ದೊರೆಯುತ್ತಿತ್ತು ಆ ಸೌಲಭ್ಯದಿಂದ ಸುಮಾರು 4,500 ರಿಂದ 6000 ಕೋಟಿ ವೆಚ್ಚದಲ್ಲಿ ಮೂರನೇ ಹಂತದ ಪರಿಷ್ಕರಣೆ ಆಗುತ್ತಿತ್ತು ಈಗ ಆರ್ಥಿಕ ಇರುವ ಕಾರಣ ಕೆ .ಸಿ.ಮತ್ತು ಹೆಚ್.ಎನ್.ವ್ಯಾಲಿ ಮೂರನೇ ಹಂತದ ಶುದ್ಧೀಕರಣ ಮಾಡಲು ಸಾಧ್ಯವಾಗಿಲ್ಲ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಅಧಿಕಾರದ ಅವಧಿಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜನತೆಗೆ ಅಂತರ್ಜಲ ವೃದ್ಧಿಗಾಗಿ ಹೆಚ್.ಎನ್. ವ್ಯಾಲಿ ಮತ್ತು ಕೆ.ಸಿ.ವ್ಯಾಲಿ ಎಂಬ ಎರಡು ನೂರು ಕೋಟಿ ರುಗಳ ವೆಚ್ಚದ ಎರಡು ಯೋಜನೆಗಳನ್ನು ಜಾರಿಗೆ ತಂದಿತು. ಆಗ ಸರ್ಕಾರದ ಮುಂದೆ ಮೂರನೇ ಹಂತದ ಶುದ್ಧೀಕರಣದ ಯೋಚನೆ ಇರಲಿಲ್ಲ. ಹೆಚ್.ಎನ್.ವ್ಯಾಲಿ ಇಲ್ಲಿಗೆ ಹರಿದು ಬರಲು ಮೂಲ ಕಾರಣವೇ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಾ.ಕೆ. ಸುಧಾಕರ್ ಬದಲಾದ ರಾಜಕಾರಣದಲ್ಲಿ ಅವರು ಕಾಂಗ್ರೆಸ್ ತ್ಯಜಿಸಿ ಬಿಜೆಪಿಗೆ ಸೇರ್ಪಡೆಯಾದರು ಈಗ ಅವರೇ ತಂದಿದ್ದ ಹೆಚ್.ಏನ್.ವ್ಯಾಲಿ ಮೂರನೇ ಹಂತದ ಶುದ್ಧೀಕರಣಕ್ಕಾಗಿ ಹೋರಾಟ ಮಾಡುತ್ತೇನೆ ಎಂದು ಹೇಳುತ್ತಿರುವುದು ಹಾಸ್ಯಸ್ಪದ ರಾಜ್ಯದಿಂದ ಭಾರತೀಯ ಜನತಾ ಪಕ್ಷದ 25 ಮಂದಿ ಸಂಸದರು ಆಯ್ಕೆ ಆಗಿದ್ದು ಇವರುಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಹಣವನ್ನು ತರಲು ಏಕೆ ಪ್ರಯತ್ನಿಸುತ್ತಿಲ್ಲ ಈ ಕಾರಣದಿಂದಾಗಿ ಸಂಸದರು ಕೂಡ ಈ ವಿಚಾರದಲ್ಲಿ ವಿಫಲರಾಗಿದ್ದಾರೆ ಎಂದರು.

ಇದನ್ನು ಓದಿದ್ದೀರಾ..? ಒಳ ಮೀಸಲಾತಿ:ಬೆಂಗಳೂರಿನ ಬೃಹತ್ ಪ್ರತಿಭಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ತೆರಳಿದ ಮಾದಿಗ ಮುಖಂಡರುಗಳು

ಕೆ.ಸಿ.ವ್ಯಾಲಿ ಹಾಗೂ ಹೆಚ್.ಎನ್. ವ್ಯಾಲಿ ನೀರಿಗೆ ಮೂರನೇ ಹಂತದ ಶುದ್ದೀಕರಣ ಅತ್ಯವಶ್ಯಕ ಎಂದು ತಿಳಿದಿದ್ದರು ಸಹಾ ಹಾಗೂ ಶಾಶ್ವತ ನೀರಾವರಿ ಯೋಜನೆ ಸಂಘದ ಅಧ್ಯಕ್ಷರಾದ ಆಂಜನೇಯ ರೆಡ್ಡಿ ಹಾಗೂ ಇನ್ನಿತರೆ ಸ್ಥಳೀಯ ಸಂಘಟನೆಗಳ ತೀವ್ರವಾದ ಹೋರಾಟ ಹಾಗೂ ವಿರೋಧ ವ್ಯಕ್ತ ಪಡೆಸಿದ್ದರು ಸಹಾ ಡಾ.ಕೆ. ಸುಧಾಕರ್ ರವರು ಆತುರದಿಂದ ಈ ಭಾಗಕ್ಕೆ ವ್ಯವಸಾಯ ಹಾಗೂ ಇನ್ನಿತರೆ ಬಳಕೆಗೆ ಯೋಗ್ಯವಿಲ್ಲದ ನೀರನ್ನು ತಂದಿರುವ ಮೂಲ ರೂವಾರಿ ಇದೆ ಡಾ.ಕೆ.ಸುಧಾಕರ್ ಅವರದ್ದೇ ಎಂದರೆ ತಪ್ಪಾಗಲಾರದು ಪ್ರಸ್ತುತ ಕೆ.ಸಿ ಮತ್ತು ಹೆಚ್.ಎನ್. ವ್ಯಾಲಿಯ ಮೂಲ ರೂವಾರಿ ಡಾ.ಕೆ. ಸುಧಾಕರ್ ರವರೇ ಆಗಿದ್ದು ಪ್ರಸ್ತುತ ಆಂದ್ರ ಪ್ರದೇಶದ ಕೃಷ್ಣ ನದಿಯ ನೀರನ್ನು ತರುವ ವ್ಯರ್ಥ ಭರವಸೆಯನ್ನು ನೀಡುತಿರುವುದು ನಮ್ಮ ಈ ಕ್ಷೇತ್ರದ ದುರ್ಭಗ್ಯ ಎಂದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...