ಬೀದರ್‌ ವಿಶ್ವವಿದ್ಯಾಲಯದಲ್ಲಿ ‘ಕೀರ್ತನೆಗಳ ಸಂಗ್ರಹ’ ಕೃತಿ ಬಿಡುಗಡೆ

Date:

ಬೀದರ್‌ ನಗರದ ಹೊರಲವಲಯದಲ್ಲಿರುವ ಬೀದರ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಹಾಗೂ ಶರಣ ಸಾಹಿತ್ಯ ಗ್ರಂಥಾಲಯದಲ್ಲಿ ಪ್ರಾಧ್ಯಾಪಕರಾದ ಮೀನಾಕ್ಷಿ ಪ್ರಭು ಬಿರಾದಾರ ಹಾಗೂ ಡಾ.ಭೀಮಾಶಂಕರ ಬಿರಾದಾರ ಅವರು ಸಂಪಾದಿಸಿದ ‘ಕೀರ್ತನೆಗಳ ಸಂಗ್ರಹ’ ಬೀದರ ವಿಶ್ವವಿದ್ಯಾಲಯದ ಬಿ.ಎ.ತೃತೀಯ ಸಾಮಾನ್ಯ ಕನ್ನಡ ಪಠ್ಯ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಬೀದರ್‌ ವಿವಿ ಕುಲಪತಿ ಪ್ರೊ ಬಿ.ಎಸ್.ಬಿರಾದಾರ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ʼಜಗತ್ತನ್ನು ಸೂಕ್ಷ್ಮವಾಗಿ ಗ್ರಹಿಸಲು ಸಾಹಿತ್ಯ ಕೃತಿಗಳು ಅಗತ್ಯ. ಕನ್ನಡ ಸೃಜನಶೀಲ ಮತ್ತು ವಿಮರ್ಶಾ ಕೃತಿಗಳು ಲೋಕ ವಿಮರ್ಶೆ ಹೆಚ್ಚು ಬೌದ್ಧಿಕ, ವೈಚಾರಿಕ ನೆಲೆಯಲ್ಲಿ ಮಾಡಿವೆ. ಸಾಹಿತ್ಯ ಮನುಷ್ಯನನ್ನು ಆಳದ ಶೋಧನೆಗೆ ಹಚ್ಚುತ್ತವೆʼ ಎಂದರು.

ʼವಚನ, ಕೀರ್ತನೆ ಮತ್ತು ತತ್ವಪದಗಳು ಈ ನೆಲದ ಅನುಭಾವಿಕ ಸತ್ವವನ್ನು, ಬದುಕಿನ ಶೋಧನೆಯನ್ನು ಕಟ್ಟಿಕೊಟ್ಟಿವೆ. ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಅಸ್ಮಿತೆಯನ್ನು ರೂಪಿಸಿವೆ. ಪ್ರಸ್ತುತ ‘ಕೀರ್ತನೆಗಳ ಸಂಗ್ರಹ’ ಕೃತಿ ಅನುಭಾವಿಕ ಮತ್ತು ಸಾಮಾಜಿಕ ಬದುಕಿನ ಅಂತಃಸತ್ವವನ್ನು ಸಾರುತ್ತದೆʼ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬೀದರ್‌ ವಿವಿ ಮೌಲ್ಯಮಾಪನ ಕುಲಸಚಿವ ಪ್ರೊ. ಪರಮೇಶ್ವರ ನಾಯಕ ಮಾತನಾಡಿ, ʼನಿರಂತರ ಅಧ್ಯಯನ, ಸಂಶೋಧನೆ ಮತ್ತು ವಿಮರ್ಶೆಯಿಂದ ಹೊಸ ತಿಳುವಳಿಕೆ ಮೂಡುತ್ತದೆ. ಈ ಮೂರು ಸಂಗತಿಗಳು ಶೈಕ್ಷಣಿಕ ವಲಯಗಳ ಬೆಳವಣಿಗೆ ನಿರ್ಧರಿಸುತ್ತವೆ. ಕೀರ್ತನೆಗಳ ಸಂಗ್ರಹ ಪಠ್ಯ ಪುಸ್ತಕ ವಿದ್ಯಾರ್ಥಿಗಳಲ್ಲಿ ಕನ್ನಡ ಸಾಹಿತ್ಯ ಪರಂಪರೆಯ ಅರಿವಿಗೆ ದಾರಿಯಾಗಿದೆʼ ಎಂದರು.

ʼಸಂಶೋಧನಾತ್ಮಕ ಓದಿನಿಂದ ತಾರ್ಕಿಕ ಆಲೋಚನೆ, ವೈಚಾರಿಕ ನೆಲೆಯ ಅನುಸಂಧಾನ ಸಾಧ್ಯ. ಪದವಿ ಹಂತದಲ್ಲಿಯೇ ಸಂಶೋಧನಾ ಪ್ರಬಂಧದ ಓದು ಅಗತ್ಯ. ಪ್ರಸ್ತುತ ಪಠ್ಯ ಕೀರ್ತನಕಾರರ ರಚನೆ ಓದಿಗೆ ದಾರಿಯಾಗಿ ನಾಡಿನ ಹಿರಿಯ ಬರಹಗಾರರಾದ ಎಚ್.ಎಸ್.ವೆಂಕಟೇಶ್ ಮೂರ್ತಿ, ವಿಕ್ರಮ ವಿಸಾಜಿ, ಕಿರಣ ಗಾಜನೂರು ಬರಹಗಳು ಸಹಾಯಕವಾಗಿವೆʼ ಎಂದರು.

ಕೀರ್ತನೆಗಳ ಸಂಗ್ರಹ ಪಠ್ಯ ಪುಸ್ತಕ ಸಂಪಾದಕರಾದ ಮೀನಾಕ್ಷಿ ಪ್ರಭು ಬಿರಾದಾರ ಹಾಗೂ ಡಾ.ಭೀಮಾಶಂಕರ ಬಿರಾದಾರ ಮಾತನಾಡಿದರು.

ಇದನ್ನೂ ಓದಿ : ಬೀದರ್ | ಟನ್ ಕಬ್ಬಿಗೆ ₹3,100 ಬೆಲೆ ಕೊಡಲೇಬೇಕು : ಪಟ್ಟು ಹಿಡಿದ ರೈತರು, ಧರಣಿ ಆರಂಭ

ಬೀದರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಶಾಂತಲಿಂಗ ಸಾವಳಗಿ, ಅರ್ಜುನ ಕನಕ, ನಾಗಭೂಷಣ, ಶಿವನಾಥ ಪಾಟೀಲ, ವೈಷ್ಣವಿ ಪಾಟೀಲ, ಸಚಿನ್ ಮಲ್ಕಾಪುರೆ, ವಿಠಲದಾಸ್ ಪ್ಯಾಗೆ, ಅಬ್ದುಲ್ ಸತ್ತಾರ್ ಸೇರಿದಂತೆ ಬೀದರ ವಿಶ್ವವಿದ್ಯಾಲಯದ ಸಿಬ್ಬಂದಿ ಹಾಜರಿದ್ದರು.ಈ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಔರಾದ್‌ | ಅಪ್ಪಟ ದೇಶಪ್ರೇಮಿ ಶಾಹೀದ್ ಭಗತ್ ಸಿಂಗ್

ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ನಿದ್ದೆಗೆಡಿಸಿದ ಸಿಂಹಾಳಿಯಂತೆ ಗರ್ಜಿಸಿ ಭಾರತದ ಹಿರಿಮೆ ಗರಿಮೆಯನ್ನು...

ಬೀದರ್‌ | ಕಾರಂಜಾ ಸಂತ್ರಸ್ತರಿಗೆ ಕಾಲಮಿತಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿ

ಕಾರಂಜಾ ಸಂತ್ರಸ್ತರ ಸಮಸ್ಯೆ ಕುರಿತು ದಶಕಗಳಿಂದ ಹೋರಾಟ ನಡೆಯುತ್ತಿದ್ದು, ಸರ್ಕಾರಕ್ಕೂ ಈ...

ಬೀದರ್‌ನಲ್ಲಿ ಮಾ.25ರಂದು ಉದ್ಯೋಗ ಮೇಳ

ಬೀದರ್ ನಗರದ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ...

ರಾಯಚೂರು | ಟ್ರಾಕ್ಟರ್ ಗೆ ಬೈಕ್ ಡಿಕ್ಕಿ; ಇಬ್ಬರು ಯುವಕರು ಸಾವು

ರಸ್ತೆ ಬದಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು...