ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮನವಿಗೆ ಸ್ಪಂದನೆ, ಕೊಡಗಿನಲ್ಲಿ ಪಾಸ್ ಪೋರ್ಟ್ ಮೇಳ ನಡೆಸಲು ಬೆಂಗಳೂರು ವಿಭಾಗೀಯ ಪಾಸ್‌ಪೋರ್ಟ್ ಕಚೇರಿ ನಿರ್ಧರಿಸಿದೆ.
ಏಪ್ರಿಲ್.8 ರಿಂದ 10ರವರೆಗೆ ಮೂರು ದಿನಗಳ ಕಾಲ ಕೊಡಗು ಜಿಲ್ಲೆಯಲ್ಲಿ ಪಾಸ್‌ಪೋರ್ಟ್ ಮೇಳ ನಡೆಯಲಿದೆ. ಈ ಕುರಿತು ಮಾಹಿತಿ ನೀಡಿರುವ ಸಂಸದ ಕೊಡಗು ಜಿಲ್ಲೆಯ ಜನರಿಂದ ಪಾಸ್‌ಪೋರ್ಟ್ ಪಡೆಯುವುದು ತೀರ ಸಮಸ್ಯೆಯಾಗಿರುವುದರ ಬಗ್ಗೆ ಮನವಿ ಸಲ್ಲಿಸಿದ್ದರು.
ಕೆಲವರು ಮೈಸೂರಿಗೆ ಅಥವಾ ಬೆಂಗಳೂರಿಗೆ ತೆರಳಬೇಕು. ಇದರಿಂದ ಹಿರಿಯ ನಾಗರಿಕರಿಗೆ ತೊಂದರೆ ಆಗುತ್ತಿದೆ ಎಂದು ಮನವಿಯಲ್ಲಿ ವಿವರಿಸಿದ್ದರು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ನಿರ್ಧರಿಸಿ, ಪತ್ರ ಬರೆಯಲಾಗಿತ್ತು. ಕಳೆದ ಬಾರಿ ನವದೆಹಲಿಗೆ ತೆರಳಿದಾಗ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿಗಳಾದ ಶ್ರೀಪ್ರಿಯಾ ರಂಗನಾಥನ್ ಅವರನ್ನು ಭೇಟಿ ಮಾಡಿ, ಕೊಡಗು ಜಿಲ್ಲೆಯಲ್ಲಿ ಪಾಸ್‌ಪೋರ್ಟ್ ಮೇಳ ಆಯೋಜಿಸಲು ಮನವಿ ಸಲ್ಲಿಸಿದಾಗಿ ಮಾಹಿತಿ ನೀಡಿದ್ದಾರೆ.
ಈ ವಿಶೇಷ ಸುದ್ದಿ ಓದಿದ್ದೀರಾ? ರಾಜ್ಯ ಬಜೆಟ್ | ಕೊಡಗಿನ ಆದಿವಾಸಿ, ದಲಿತ, ಶೋಷಿತರ ಬದುಕು ಹಸನಾಗಲಿಲ್ಲ; ನಿರೀಕ್ಷೆ ತಪ್ಪಲಿಲ್ಲ!
ಇದಕ್ಕೆ ಸ್ಪಂದಿಸಿರುವ ಹಿರಿಯ ಅಧಿಕಾರಿಗಳು, ಬೆಂಗಳೂರು ಪಾಸ್‌ಪೋರ್ಟ್ ಕಚೇರಿಗೆ ಸೂಚನೆ ನೀಡಿ ಪಾಸ್‌ಪೋರ್ಟ್ ಮೇಳ ಆಯೋಜಿಸಲು ಕ್ರಮ ಕೈಗೊಂಡಿದ್ದಾರೆ. ಕೊಡಗು ಜಿಲ್ಲೆಯ ನಾಗರಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಈ ವಿಶೇಷ ಸುದ್ದಿ ಓದಿದ್ದೀರಾ? ರಾಜ್ಯ ಬಜೆಟ್ | ಸಾಂಸ್ಕೃತಿಕ ನಗರಿ ಮೈಸೂರಿನ ನಿರೀಕ್ಷೆಗಳೇನು? ಕಳೆದ ಬಜೆಟ್ ಕಡತದಲ್ಲೇ ಉಳಿಯಿತೇ?
ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮನವಿಗೆ ಸ್ಪಂದನೆ, ಕೊಡಗಿನಲ್ಲಿ ಪಾಸ್ ಪೋರ್ಟ್ ಮೇಳ ನಡೆಸಲು ಬೆಂಗಳೂರು ವಿಭಾಗೀಯ ಪಾಸ್‌ಪೋರ್ಟ್ ಕಚೇರಿ ನಿರ್ಧರಿಸಿದೆ.





