ಕೊಡಗು | ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ; ಅರಣ್ಯ ಸಿಬ್ಬಂದಿ ಸಾವು

Date:

ಕಾಡಾನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆ ಸಂದರ್ಭದಲ್ಲಿ ಆನೆ ಕಾರ್ಯಪಡೆ ಸಿಬ್ಬಂದಿಯೊಬ್ಬರು ಕಾಡಾನೆ ತುಳಿತಕ್ಕೆ ಬಲಿಯಾಗಿರುವ ಘಟನೆ ಮಡಿಕೇರಿ ಬಳಿಯ ಕೆದಕಲ್‌ನಲ್ಲಿ ನಡೆದಿದೆ. ಸಿಬ್ಬಂದಿ ಗಿರೀಶ್ (35) ಮೃತ ದುರ್ದೈವಿ ಎಂದು ತಿಳಿದುಬಂದಿದೆ.

ಮತ್ತೊಂದು ಘಟನೆಯಲ್ಲಿ ಸುಂಟಿಕೊಪ್ಪದ ಬಳಿ ಬೈಕ್‌ ಸವಾರನ ಮೇಲೆ ಒಂಟಿಸಲಗವೊಂದು ದಾಳಿ ನಡೆಸಿದ್ದು, ಬೈಕ್‌ ಸವಾರನಿಗೆ ಗಾಯಗಳಾಗಿವೆ. ಆತನನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಆಸ್ಪತ್ರೆಗೆ ರವಾನಿಸಿದ್ದಾರೆ.

ಬೈಕ್‌ ಸವಾರನ ಮೇಲೆ ದಾಳಿ ನಡೆಸಿದ್ದ ಆನೆ, ಘಟನೆ ನಡೆದ ಅನತಿ ದೂರದಲ್ಲಿದ್ದ ಮತ್ತೊಬ್ಬ ವ್ಯಕ್ತಿಯ ಮೇಲೂ ದಾಳಿ ನಡೆಸಿದೆ. ಆದರೆ, ಆತ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊಡಗು | ‘ದಿ. ಬಿ ಎಸ್ ಗೋಪಾಲಕೃಷ್ಣ ದತ್ತಿ’ ಪ್ರಶಸ್ತಿಗೆ ಭಾಜನರಾದ ವೈದ್ಯ ಡಾ. ಕೆ ಬಿ ಸೂರ್ಯಕುಮಾರ್

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪುರುಷ ಸಾಹಿತಿಗಳಿಗೆ ಮೀಸಲಾಗಿರುವ ಪ್ರತಿಷ್ಠಿತ...

ಕೊಡಗು | ‘ಎಸ್ಐಆರ್’ನಿಂದಾಗಿ ಭಾರತೀಯರಿಗೆ ಸಂಕಷ್ಟ: ಅಬ್ದುಲ್ ಮಜೀದ್

ಕೊಡಗು ಜಿಲ್ಲೆ, ಮಡಿಕೇರಿಯಲ್ಲಿ ಎಸ್‌ಡಿಪಿಐ ಪಕ್ಷದ ವತಿಯಿಂದ ಗಾಂಧಿ ಮೈದಾನದಲ್ಲಿ ನಡೆದ...

ಮಡಿಕೇರಿ | ವಿದ್ಯಾರ್ಥಿಗಳಿಗೆ ಸಾಹಿತ್ಯಾಸಕ್ತಿ ಮೂಡಿಸಲು ಕಥಾ ಸ್ಪರ್ಧೆಗಳು ದಾರಿದೀಪವಾಗಲಿವೆ: ಕಟ್ಟೆಮನೆ ಅನುಸೂಯ

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೊಡಗಿನ ಗೌರಮ್ಮರವರ ನೆನಪಿನಲ್ಲಿ ಜಿಲ್ಲೆಯ...

ಕೊಡಗು | ‘ವಿಜಯ ವಿಷ್ಣು ಭಟ್ ದತ್ತಿ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕೊಡಮಾಡುವ 'ವಿಜಯ ವಿಷ್ಣು ಭಟ್...