ಕೋಲಾರ ತಾಲೂಕಿನಲ್ಲಿ ಮಹಿಳಾ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಒಕ್ಕೂಟದಿಂದ ಸಂಘಗಳಿಗೆ ನೀಡುವ ವಿವಿಧ ಯೋಜನೆಗಳನ್ನು ಉಪಯೋಗಿಸಿಕೊಂಡು ಹಾಲು ಶೇಖರಣೆ ಮತ್ತು ಗುಣಮಟ್ಟ ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಸಂಘಗಳ ಅಭಿವೃದ್ಧಿಗೆ ಮತ್ತಷ್ಟು ಪ್ರೋತ್ಸಾಹ ಅಗತ್ಯವಿದೆ ಎಂದು ಕೋಲಾರ ಜಿಲ್ಲಾ ಮಹಿಳಾ ಉತ್ತರ ಕ್ಷೇತ್ರದ ನಿರ್ದೇಶಕಿ ಮಹಾಲಕ್ಷ್ಮೀ ಪ್ರಸಾದ್ ಬಾಬು ತಿಳಿಸಿದರು.
ಕೋಲಾರ ತಾಲೂಕಿನ ಕಸಬಾ ಹೋಬಳಿ ಚಿನ್ನಾಪುರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ 2024-25ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, “ಚಿನ್ನಾಪುರ ಸಂಘವನ್ನು ಸ್ಟೆಪ್ ಯೋಜನೆಗೆ ಅಳವಡಿಸಿದ್ದು ಸುಮಾರು 7 ಲಕ್ಷ ಮೊತ್ತದ ಚೆಕ್‌ಗಳನ್ನು ಪಲಾನುಭವಿಗಳಿಗೆ ನೀಡಿ ರಾಸುವನ್ನು ಖರೀದಿಸಲು ತಿಳಿಸಿ ಈಗಾಗಲೇ ಸದರಿ ಸಂಘದಲ್ಲಿ ಕಾಮನ್ ಸಾಫ್ಟವೇರ್ ಅಳವಡಿಸಿ ಉತ್ಪಾದಕರಿಗೆ ಗುಣಮಟ್ಟಕ್ಕೆ ತಕ್ಕಂತೆ ಧರ ನೀಡುತ್ತಿರುವುದು ಶ್ಲಾಘನೀಯ ಎಂದು ಪ್ರಶಂಸಿ ಸಂಘವು ಈ ಸಾಲಿನಲ್ಲಿ 7.9 ಲಕ್ಷ ವ್ಯಾಪಾರ ಲಾಭ ಗಳಿಸಿದ್ದು. ಉತ್ಪಾದಕರಿಗೆ ಶೇ.2.94 ಬೋನಸ್ ನೀಡಲಾಗುತ್ತದೆ” ಎಂದರು.
ಇದನ್ನೂ ಓದಿ: ಕೋಲಾರ | ಕಾಂಗ್ರೆಸ್ ಹಿರಿಯ ನಾಯಕ ಮೊಹಮ್ಮದ್ ಇಕ್ಬಾಲ್ ನಿಧನ
ಈ ಸಭೆಯಲ್ಲಿ ಸಂಘದ ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ, ವಿಸ್ತರಣಾಧಿಕಾರಿ ಮಂಜುಳಾ, ಭರತ್‌ಕುಮಾರ್, ಸಮೀರ್‌ಪಾಷ, ಎಸ್ ಶ್ರೀಕಾಂತ್, ಸ್ಟೆಪ್ ಯೋಜನೆಯ ಅಧಿಕಾರಿ ನಳಿನಿ, ಗ್ರಾಮ ಪಂಚಾಯಿತಿ ಸದಸ್ಯರುಗಳು, ಊರಿನ ಮುಖಂಡರುಗಳು, ಕಾರ್ಯಕಾರಿ ಮಂಡಳಿಯ ಸದಸ್ಯರು ಹಾಲು ಉತ್ಪಾದಕರು ಮತ್ತು ಗ್ರಾಮಸ್ಥರು ಇದ್ದರು.





