ಕೋಲಾರ | ಜಡತ್ವಕ್ಕೆ ವಿವೇಕ ನೀಡಿದ ಕುಸ್‌ ಕುಸ್ ದಿಲ್ ಕುಶ್ ನಾಟಕ

Date:

ಯಾವುದು ಸ್ಥಿರವಲ್ಲ. ಗಳಿಗೆ ಗಳಿಗೆಯೂ ಬದಲಾಗುತ್ತಿರುತ್ತದೆ. ಸ್ಥಿರವೆಂದು ಭಾವಿಸಿದವನಿಗೆ ಅವನ ತಲೆಯೇ ಭಾರವಾಗುವುದರ ಜತೆಗೆ ಅಧಿಕಾರ, ಅಂತಸ್ತುಗಳು ಪೆಡಂಭೂತವಾಗುತ್ತವೆ ಎಂಬ ಬುದ್ದನ ಸಂದೇಶ ಮನಸಿನಲ್ಲಿ ಮೊಳಕೆ ಹೊಡೆದು ಗಾಳಿಯಂತೆ ಹಗುರವಾಗುವ ಕ್ಷಣವನ್ನು ಸಾಹಿತಿ, ನಾಟಕಕಾರ ಕೋಟಗಾನಹಳ್ಳಿ ರಾಮಯ್ಯ ಅವರ ಕುಸ್ ಕುಸ್ ದಿಲ್ ಕುಶ್ ನಾಟಕವನ್ನು ನೋಡುತ್ತಾ ಅನುಭವಿಸಲು ಒಂದು ಅವಕಾಶ ಸಿಕ್ಕಿತು.

ಕೋಲಾರದ ಸಾಂಸ್ಕೃತಿಕ ಕೇಂದ್ರವಾಗಿರುವ ಆದಿಮದಲ್ಲಿ ಜೂನ್ 22ರಂದು 206ನೇ ಹುಣ್ಣಿಮೆ ಹಬ್ಬದ ಪ್ರಯುಕ್ತ ಮಕ್ಕಳ ನಾಟಕೋತ್ಸವವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಕೋಲಾರದ ಕೆಇಬಿ ನೌಕರರ ಸಂಘದ ಮಕ್ಕಳು, ಚಂದಿರನ ಹಾಲಿನಂತಹ ಬೆಳಕಿನಲ್ಲಿ ಕುಸ್ ಕುಸ್ ದಿಲ್ ಕುಶ್ ನಾಟಕವನ್ನು ತಮ್ಮ ಅಮೋಘ ಅಭಿನಯದ ಮೂಲಕ ತಮ್ಮ ಎದುರಿಗಿದ್ದ ಪ್ರೇಕ್ಷಕರ ಮನಸಿನಲ್ಲಿ ಬದುಕಿನ ನೆಮ್ಮದಿಗೆ ಬೇಕಾದ ಸಂದೇಶವನ್ನು ನಾಟಿ ಬಿಟ್ಟರು.

ಬದಲಾವಣೆ ಬಯಸದ ಆಲೋಚನೆ, ನಡತೆ, ಅಧಿಕಾರ, ಸಂಪತ್ತು ಜಡ್ಡುಕಟ್ಟುತ್ತದೆ. ಉಪಯೋಗಕ್ಕೂ ಬಾರದಾಗುತ್ತದೆ. ಆಗ ಅದು ರೋಗವಾಗಿಯೂ ಪರಿಣಮಿಸುತ್ತದೆ. ಅದರಲ್ಲೂ ಇಂತಹ ಜಡತ್ವ ಸ್ಥಿತಿ ಅಧಿಕಾರ ಸ್ಥಾನದಲ್ಲಿರುವವರಿಗೆ ಹೊಕ್ಕಿಬಿಟ್ಟರೆ ಅದರ ರೋಗುವ ಇಡೀ ಸಮಾಜಕ್ಕೆ ಅಂಟುವ ಭೀತಿ ಇರುತ್ತದೆ ಎಂಬ ಸಂದೇಶವನ್ನು ನಾಟಕವು ಜನಸಾಮಾನ್ಯರ ತಿಳುವಳಿಕೆಯ ಮೂಲಕ ಕಟ್ಟಿಕೊಟ್ಟಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸಾಮಾನ್ಯ ಎಂಬ ಪದವೇ ಹಗುರವಾದದ್ದು, ಸ್ವಚ್ಛಂದವಾಗಿರುವಂತಹದ್ದು ಹಾಗೂ ಮುಕ್ತವಾಗಿರುವಂತಹದ್ದು. ಪರಿಸರದ ಸಹಜವಾದ ಬದಲಾವಣೆಯ ಜತೆಗೆ ಹೊಂದಿಕೊಳ್ಳುತ್ತಾ ಸಾಗುವರು. ಇವರ ಹೊರತಾಗಿಯೂ ಜನಸಾಮಾನ್ಯರಿಂದಲೇ ಎದ್ದು ಹೋದವರು, ಸೇವೆಯ ನೆಪದಲ್ಲಿ ಅಧಿಕಾರ, ಅಂತಸ್ತನ್ನು ಸೃಷ್ಟಿಸಿಕೊಂಡು ವ್ಯವಸ್ಥೆಯನ್ನು ಜಡ್ಡುಗೊಳಿಸಲು ಪ್ರಾರಂಭಿಸುತ್ತಾರೆ. ಒಂದು ಹಂತದಲ್ಲಿ ಶ್ರಮದ ರುಚಿಯನ್ನು ಮರೆತು ಅಧಿಕಾರದ ವ್ಯಾಮೋಹಕ್ಕೆ ಬೀಳುವ ಅಧಿಕಾರಸ್ತರು, ಮೊದಲು ತಮ್ಮ ಮೆದುಳನ್ನು ಜಡಗೊಳಿಸಿಕೊಳ್ಳುತ್ತಾರೆ. ನಂತರ ಇಡೀ ವ್ಯವಸ್ಥೆಯನ್ನು ಜಡಗೊಳಿಸುತ್ತಾ ಹೋಗುತ್ತಾರೆ. ಆದರೆ, ಜನಸಾಮಾನ್ಯರಿಗೆ ಜಡತ್ವದ ಪರಿಚಯವೇ ಇರುವುದಿಲ್ಲ. ಅವರು ತಮ್ಮ ನಿತ್ಯದ ಬದುಕಿನಲ್ಲಿ ಸದಾ ಜಂಗಮರಾಗಿಯೇ ಇರುತ್ತದೆ. ಅದು ಶ್ರಮದ ಫಲವೇ ಅಂತಹದ್ದು. ಜನಸಾಮಾನ್ಯರ ಶ್ರಮದ ಫಲದಿಂದ ಕೂತು ತಿನ್ನುವ ಅಧಿಕಾರಸ್ಥ ಸ್ಥಾನದಲ್ಲಿವವರ ಜಡತ್ವವು, ಸಾರ್ವಾಧಿಕಾರಿಯಾಗಿಯೂ, ಹಿಂಸಾತ್ಮಕವಾಗಿಯೂ, ದ್ವೇಷಕಾರಿಯೂಗಿಯೂ ಪರಿಣಮಿಸಬಹುದೆಂಬುದನ್ನು ಕುಸ್‌ ಕುಸ್ ದಿಲ್ ಕುಶ್ ನಾಟಕವು ಸೂಚ್ಯವಾಗಿ ಪ್ರೇಕ್ಷಕರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದೆ.

ಯಾವುದೇ ಪ್ರಭುತ್ವವು ಅದೆಷ್ಟೇ ದಮನಕಾರಿಯಾಗಿದ್ದರೂ ಕೂಡ ಸರ್ವಾಧಿಕಾರಿ ಧೋರಣೆಯಿಂದ ಜನಸಾಮಾನ್ಯರ ಬದುಕನ್ನು ಹಿಡತದಲ್ಲಿ ಇಟ್ಟುಕೊಳ್ಳಲು ಮುಂದಾದರೂ ಜನಸಾಮಾನ್ಯರ ವಿವೇಕವು ಕೆಲವೊಮ್ಮೆ ಅಗೋಚರವಾಗಿ, ಮಗದೊಮ್ಮೆ ಝರಿಯಂತೆ ಸದಾ ಚಲನಶೀಲತೆಯನ್ನು ಸದಾ ಕಾಪಿಟ್ಟುಕೊಂಡಿರುತ್ತಾರೆ. ಸಂದರ್ಭಕ್ಕೆ ಅನುಗುಣವಾಗಿ ಆ ವಿವೇಕವೇ ಸಮಾಜವನ್ನು ಮುನ್ನಡೆಸುತ್ತಿರುತ್ತಾರೆ. ಪ್ರಭುತ್ವದ ಮೇಲ್ನೋಟಕ್ಕೆ ಬಲಿಷ್ಠವಾಗಿಯೂ, ಸುಂದರವಾಗಿ ಕಂಡರೂ ಆಂತರಿಕವಾಗಿ ಅದಕ್ಕೆ ಯಾವುದೇ ಸ್ವತಂತ್ರವಾದ ಅಸ್ಥಿತ್ವ ಇರುವುದಿಲ್ಲ. ಅದೇ ಹೊತ್ತಿನಲ್ಲಿ ಜನಸಾಮಾನ್ಯರು ನೋಡುವುದಕ್ಕೆ ಪ್ರಭುತ್ವದ ಅಡಿಯಲ್ಲಿದ್ದರೂ ಬದುಕಿನ ಬಗೆಗಿನ ಅವರ ವಿವೇಕವೂ ಪರಂಪರಾಗತವಾಗಿ ಅದಕ್ಕೊಂದು ಅಸ್ಮಿತೆಯನ್ನು ಇಟ್ಟುಕೊಂಡೇ ನಿರಂತರವಾಗಿ ಸಾಗುತ್ತಿರುತ್ತಾರೆ. ಒಂದು ಹಂತದಲ್ಲಿ ಜನಸಾಮಾನ್ಯರೇ ಪ್ರಭುತ್ವವನ್ನು ದಿಕ್ಕುದೆಸೆಯನ್ನು ನೀಡತ್ತಾರೆ ಎಂಬುದನ್ನು ನಾಟಕದಲ್ಲಿ ರಾಜನ ತಲೆಯಲ್ಲಿದ್ದ ಕಿರೀಟವನ್ನು ಜನಸಾಮಾನ್ಯರೇ ತೆಗೆಯುವ ಮೂಲಕ ಹೊಸ ಚಿಂತನೆಯ ಚಲನೆಗೆ ಅನುವು ಮಾಡಿಕೊಡುತ್ತಾರೆ. ನಾಟಕದಲ್ಲಿ ಬಿಂಬಿತವಾಗಿರುವ ಈ ದೃಶ್ಯವು ಜನಸಾಮಾನ್ಯರಿಗೆ ಒಪ್ಪದ ಯಾವ ಅಧಿಕಾರ ಬಹುದಿನ ಬಾಳುವುದಿಲ್ಲವೆಂಬ ಸಂದೇಶವನ್ನು ಗಟ್ಟಿಯಾಗಿ ಹೇಳುವಲ್ಲಿ ಯಶಸ್ವಿಯಾಗಿದೆ.

ನಾಟಕದ ಮತ್ತೊಂದು ವಿಶೇಷ ಏನೆಂದರೆ, ನಾಟಕದ ಸಂಭಾಷಣೆ ಸಹಜತೆಯಿಂದ ಕೂಡಿರುವುದು, ಇವತ್ತಿನ ಗಲ್ಲಿಗಳಲ್ಲಿ, ಓಣಿಗಳಲ್ಲಿ, ಆಡುವಾಗ, ನಲಿಯುವಾಗ ಬಳಸುವ ಗಾದೆಗಳು, ಕಿಚಾಯಿಸುವ ತಮಾಷೆಗಳ ಪದಗಳನ್ನೇ ಬಳಸಿಕೊಂಡಿರುವುದು. ಹೀಗಾಗಿ ಕೋಲಾರ ಪ್ರದೇಶದಲ್ಲಿ ಸಹಜವಾಗಿ ಬಳಸುವ ಕನ್ನಡ ಹಾಗೂ ತೆಲಗು ಭಾಷೆಯಲ್ಲೇ ನಾಟಕ ಪ್ರಸ್ತುತಗೊಂಡು ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುತ್ತಾ ವಿವೇಕವೊಂದನ್ನು ತಲುಪಿಸಿದ್ದು ಗಮನಾರ್ಹವಾದ ಅಂಶವಾಗಿದೆ.

ಈ ಸುದ್ದಿ ಓದಿದ್ದೀರಾ? ರಾಯಚೂರು | ಯಲಗಟ್ಟಾ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಬಯಲೇ ಶೌಚಾಲಯ

ಇನ್ನು ನಾಟಕದ ಪಾತ್ರದಾರಿಗಳಾದ ಮಕ್ಕಳ ಅಭಿನಯಕ್ಕೆ ನೋಡುಗರು ಮನಸೋತರು. ಅಲ್ಲಿ ಯಾರೂ ಹೆಚ್ಚು ಅಲ್ಲ, ಕಡಿಮೆಯೂ ಅಲ್ಲದ ರೀತಿಯಲ್ಲಿ ತಮಗೆ ನೀಡಿದ ಪಾತ್ರಗಳಲ್ಲಿ ತಲ್ಲೀನರಾಗಿದ್ದರು. ಪ್ರತಿ ಪಾತ್ರದಾರಿಗಳ ಪ್ರತಿ ಡೈಲಾಗ್‌ಗಳು ಮನ ಸೆಳೆಯುವಂತಿತ್ತು. ಒಟ್ಟಾರೆ ಈ ನಾಟಕದ ಯಶಸ್ಸಿನಲ್ಲಿ ನಾಟಕ ರಚನೆಕಾರ ಕೋಟಗಾನಹಳ್ಳಿ ರಾಮಯ್ಯ ಹಾಗೂ ನಿರ್ದೇಶಕ ಶೃಂಗಾರ್ ಅವರ ಶ್ರಮ, ಶ್ರದ್ಧೆಯು ಪಾತ್ರದಾರಿಗಳ ಪ್ರತಿ ಡೈಲಾಗ್‌ನಲ್ಲಿ ಗೋಚರವಾಗುತ್ತಿತ್ತು.

ಬರಹ: ಮಂಜುನಾಥ ದಾಸನಪುರ 

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...