ಕೋಲಾರ | ಉತ್ತಮ ಬೆಲೆ ಸಿಗದೆ ನಷ್ಟ: ಉಚಿತವಾಗಿಯೇ ಬಾಳೆ ಹಣ್ಣು ಹಂಚಿದ ರೈತ

Date:

ಬೆಲೆ ಕುಸಿತದಿಂದ ಹಾಕಿ ಬಂಡವಾಳವು ಸಿಗದೆ, ಮಾರುಕಟ್ಟೆಗೆ ಸಾಗಿದ ಬಾಡಿಗೆ ಹಣವೂ ದೊರೆಯದ ಕಾರಣದಿಂದಾಗಿ ಕೋಲಾರ ಜಿಲ್ಲೆಯ ರೈತನೊಬ್ಬ ತಾವು ಬೆಳೆದಿದ್ದ ಬಾಳೆ ಹಣ್ಣನ್ನು ಉಚಿತವಾಗಿಯೇ ಹಂಚಿಸಿದ್ದಾರೆ.

ಕೋಲಾರ ಜಿಲ್ಲೆಯ ಕೋಟೆಕನಹಳ್ಳಿಯ ರೈತ ಕೆ.ವೈ ಗಣೇಶ್ ಅವರು ಮೂರು ಎಕರೆ ಭೂಮಿಯಲ್ಲಿ ಬಾಳೆ ಬೆಳೆ ಬೆಳೆದಿದ್ದರು. ಸುಮಾರು 2,000 ಬಾಳೆ ಸಸಿಗಳನ್ನು ನಟ್ಟಿದ್ದ ಗಣೇಶ್‌, ಬೆಳೆಗಾಗಿ ಸುಮಾರು 4.5 ಲಕ್ಷ ರೂ. ಖರ್ಚು ಮಾಡಿದ್ದರು. ಆದರೆ, ಬಾಳೆ ಬೆಲೆಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತಗೊಂಡಿದ್ದು, ಸಗಟು ವ್ಯಾಪಾರಿಗಳು ಕೆ.ಜಿ ಹಣ್ಣಿಗೆ ಕೇವಲ 10 ರೂ.ಗಳಂತೆ ಖರೀದಿಸುವುದಾಗಿ ಹೇಳಿದ್ದಾರೆ.

ಸುಮಾರು ಎರಡು ಟನ್ (2,000 ಕೆ.ಜಿ) ಬಾಳೆ ಹಣ್ಣು ಬೆಳೆದಿದ್ದ ಗಣೇಶ್‌, 10 ರೂ.ಗಳಂತೆ ಮಾರಾಟ ಮಾಡಿದರೆ, ಯಾವುದೇ ಪ್ರಯೋಜನವಿಲ್ಲ. ಅಲ್ಲದೆ, ಮಾರುಕಟ್ಟೆಗೆ ಕೊಂಡೊಯ್ದರೆ, ಹೆಚ್ಚುವರಿಯಾಗಿ ವಾಹನ ಬಾಡಿಗೆ ಹಣದ ಹೊರೆಯೂ ತಮ್ಮ ಮೇಲೆಯೇ ಬೀಳುತ್ತದೆಂದು ಬಾಳೆ ಹಣ್ಣನ್ನು ತೋಟದಲ್ಲಿ ಉಚಿತವಾಗಿಯೇ ಹಂಚಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಹಿಂದೆ, ಗಣೇಶ ಹಬ್ಬ, ದೀಪಾವಳಿ ಹಗೂ ವರಮಹಾಲಕ್ಷ್ಮಿ ಹಬ್ಬಗಳ ಸಮಯದಲ್ಲಿ ಗಣೇಶ್‌ ಅವರು ಕೆ.ಜಿಗೆ 60 ರೂ.ಗಳಂತೆ ಸಗಟು ವ್ಯಾಪಾರಿಗಳಿಗೆ ಬಾಳೆ ಹಣ್ಣು ಮಾರಿದ್ದರು. ಆದರೆ, ಈ ಬಾರಿ ಉತ್ತಮ ಬೆಲೆ ಸಿಗದೆ ಗಣೇಶ್‌ ಕಂಗಾಲಾಗಿದ್ದಾರೆ. ಇದೀಗ, ಲಕ್ಷಾಂತರ ರೂಪಾಯಿ ನಷ್ಟ ಅನುಭವಿದ್ದಾರೆ.

“ಬೆಳೆ ಬೆಳೆಯಲು ಸಾಲ ಮಾಡಿದ್ದೇನೆ. ಸಾಲ ತೀರಿಸುವುದರ ಜೊತೆಗೆ, ಹೊಸ ಬೆಳೆ ಬೆಳೆಯಲು ಮತ್ತೆ ಬಂಡವಾಳ ಹೊಂದಿಸಬೇಕು. ಆದರೆ, ಬೆಲೆ ಸಿಗದೆ ನಷ್ಟವಾಗಿದೆ. ಮುಂದೇನು ಮಾಡುವುದು ತೋಚುತ್ತಿಲ್ಲ” ಎಂದು ಗಣೇಶ್ ಹೇಳಿಕೊಂಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...