ಬೇತಮಂಗಲ: ಪಟ್ಟಣದ ಕ್ಯಾಸಂಬಳ್ಳಿ ಮುಖ್ಯ ರಸ್ತೆಯ ಟಿಪ್ಪು ನಗರದಲ್ಲಿ ಕೊಳಚೆ ನೀರು ಮುಖ್ಯ ರಸ್ತೆಗೆ ಹರಿಯುತ್ತಿದ್ದು, ನಿವಾಸಿಗಳು ಸವಾರರು ದುರ್ವಾಸನೆಯಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿಯ ನಡುವೆ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೇತಮಂಗಲ ಕ್ಯಾಸಂಬಳ್ಳಿ ಮುಖ್ಯ ರಸ್ತೆಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಪರಿಣಾಮ ಮನೆಗಳ ಯುಜಿಡಿ ಮತ್ತು ಮಳೆ ನೀರು ರಸ್ತೆಗೆ ಹರಿಯುತ್ತಿದ್ದು ರೋಗ ಹರಡುವ ಭೀತಿಯ ನಡುವೆ ದುರ್ವಾಸನೆಯಿಂದ ಪ್ರತಿನಿತ್ಯ ಮೂಗು ಮುಚ್ಕೊಂಡು ಓಡಾಡುವ ಪರಿಸ್ಥಿತಿ ಇದ್ದು
ಈ ಕೂಡಲೇ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಿ ಕೊಳಚೆ ನೀರು ರಸ್ತೆಗೆ ಹರಿಯದಂತೆ ಕ್ರಮಕೈಗೊಳ್ಳ ಬೇಕೆಂದು ದಲಿತ ಭೀಮ ಸೇನೆ ರಾಜ್ಯಾಧ್ಯಕ್ಷ ಕೆ.ಬಿ ದೇವರಾಜ್ ಒತ್ತಾಯಿಸಿದ್ದಾರೆ.
ಅನೇಕ ದಶಕಗಳಿಂದಲೂ ಬೇತಮಂಗಲ ಕ್ಯಾಸಂಬಳ್ಳಿ ಮುಖ್ಯರಸ್ತೆಯ ರಾಜ ಕಾಲುವೆ ಒತ್ತುವರಿಯಾಗಿದ್ದು, ಒತ್ತುವರಿ ತಿರುಗೊಳಿಸುವ ಬಗ್ಗೆ ಅನೇಕ ಬಾರಿ ಗ್ರಾಮ ಸಭೆ ಹಾಗೂ ಪ್ರತ್ಯೇಕವಾಗಿಯೂ ಸ್ಥಳೀಯ ಸಾರ್ವಜನಿಕರು, ಪಿಡಿಒ, ಅಧ್ಯಕ್ಷರು, ಶಾಸಕರಿಗೂ ಸಹ ಅರ್ಜಿ ನೀಡಿದ್ದರು ಇದುವರೆಗೂ ಒತ್ತುವರಿ ತೆರವುಗೊಳಿಸಿದ ಪರಿಣಾಮ ಮಳೆಗಾಲದಲ್ಲಿ ರಸ್ತೆಯ ಮೇಲೆ ಕೊಳಚೆ ನೀರು ಹರಿಯುತ್ತಿದೆ.
ಇದೀಗ ನಿವಾಸಿಗಳ ಶೌಚಾಲಯ, ಯುಜಿಡಿ ನೀರು ರಸ್ತೆಗೆ ಹರಿಯುತ್ತಿದ್ದು ನಿತ್ಯ ಪ್ರಯಾಣಿಕರು , ಸವಾರರು, ನಿವಾಸಿಗಳು ದುರ್ವಾಸನೆಯಿಂದ ಹೈರಾಣಾಗಿದ್ದಾರೆ.
ಕನಿಷ್ಠ ಗ್ರಾಮ ಪಂಚಾಯಿತಿಯಿಂದ ನರೇಗಾ ಹಾಗೂ ಇತರೆ ಯೋಜನೆಗಳಾದ 15ನೇ ಹಣಕಾಸು ಯೋಜನೆ ಅಡಿಯಲ್ಲಿ ಕನಿಷ್ಠ ಚರಂಡಿ ವ್ಯವಸ್ಥೆ ಕಲ್ಪಿಸುವಲ್ಲಿ ಅಧಿಕಾರಿಗಳು ಮತ್ತು ಈ ವಾರ್ಡಿನಲ್ಲಿ ಪ್ರತಿನಿಧಿಸಿರುವ ಸದಸ್ಯರು ವಿಫಲರಾಗಿದ್ದಾರೆ ಎಂದು ಈ ವಾರ್ಡ್ ನ ಸಾರ್ವಜನಿಕರು ಆರೋಪಿಸಿದ್ದಾರೆ.
ಬೇತಮಂಗಲ ಗ್ರಾಮ ಪಂಚಾಯಿತಿ ತಾಲೂಕಿನಲ್ಲಿಯೇ ಅತಿ ಹೆಚ್ಚು 27 ಸದಸ್ಯರನ್ನು ಒಳಗೊಂಡಿದ್ದು ಒಟ್ಟು 8 ಬ್ಲಾಕ್ ಗಳನ್ನು ಹೊಂದಿದ್ದು ಅವಶ್ಯಕ ಪೌರಕಾರ್ಮಿಕರ ಸಂಖ್ಯೆ ಕಡಿಮೆ ಇದೆ ಜೊತೆಗೆ ನಿತ್ಯ ಸಂಗ್ರಹವಾಗುವ ಘನ ತ್ಯಾಜ್ಯ ವಿಲೇವಾರಿ ಮಾಡುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ ಹೇಗಿರುವಾಗ ರಸ್ತೆಗೆ ಹರಿಯುವ ಕೊಲಚೆ ನೀರನ್ನು ತಡೆಗಟ್ಟಲು ಸಮಸ್ಯೆ ಆಗಿದೆ ಎಂದು ಹೆಸರು ಹೇಳಲು ಇಚ್ಚಿಸದ ಸದಸ್ಯರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ..? ಉನ್ನತ ಶಿಕ್ಷಣ ಇಲಾಖೆಯ 103 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆಗೆ ಆಹ್ವಾನ
ಈ ಕೂಡಲೇ ಕ್ಷೇತ್ರದ ಶಾಸಕರು ಕಂದಾಯ ಅಧಿಕಾರಿಗಳು ತಕ್ಷಣ ಕಾಸೆಂಬಲ್ಲಿ ಬೇತಮಂಗಲ ಮುಖ್ಯರಸ್ತೆಯ ರಾಜ ಕಾಲುವೆ ಒತ್ತುವರಿ ಗುರುತಿಸಿ ತೆರವುಗೊಳಿಸಿ ಸುಸಜ್ಜಿತ ಶಾಶ್ವತ ಕಾಲುವೆ ನಿರ್ಮಿಸಿದ್ದಲ್ಲಿ ಮಾತ್ರ ಈ ಭಾಗದ ಸಾರ್ವಜನಿಕರು ಉತ್ತಮ ಆರೋಗ್ಯದೊಂದಿಗೆ ಜೀವನ ನಡೆಸಲು ಸಹಕಾರಿಯಾಗುತ್ತದೆ.





