ಕೋಲಾರ | ತಂಗಿಯನ್ನು ನಿಂದಿಸಿದ್ದಕ್ಕೆ 5 ಬಾರಿ ದೂರು ಕೊಟ್ಟರೂ ಪೊಲೀಸರು ಕ್ಯಾರೇ ಅನ್ನಲಿಲ್ಲ, ಅದಕ್ಕೆ ನಾನೇ ಕೊಂದೆ!

Date:

ಕೋಲಾರದ ಮೆಟ್ಟುಬಂಡೆ ಬಳಿ ನಡೆದ ಯಲ್ಲೇಶ್ ಕೊಲೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಆರೋಪಿ ಬಿಂದು ಕುಮಾರ್, ತನ್ನ ತಂಗಿಗೆ ಯಲ್ಲೇಶ್ ಕಿರುಕುಳ ನೀಡುತ್ತಿದ್ದ ಕಾರಣ, ತಾನೇ ಈ ಕೊಲೆ ಮಾಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮೂಲಕ ತಪ್ಪೊಪ್ಪಿಕೊಂಡಿದ್ದಾನೆ.

ನರಸಾಪುರ ನಿವಾಸಿ ಸಂತೋಷ್ ಅವರ ಪುತ್ರ ಬಿಂದು ಕುಮಾರ್ ಎಂಬಾತನೇ ಈ ಕೊಲೆ ಮಾಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮೂಲಕ ಬಹಿರಂಗ ಹೇಳಿಕೆ ನೀಡಿದ್ದಾನೆ. ʼಯಲ್ಲೇಶ್‌ನ ಕೊಲೆ ಮಾಡಿದ್ದು ನಾನೇ. ನನ್ನೊಂದಿಗೆ ಅಕ್ಷಯ್ ಮತ್ತು ಅಕ್ಷಯ್ ಅವರ ಸಹೋದರ ಕೂಡ ಇದ್ದರುʼ ಎಂದು ಬಿಂದು ಕುಮಾರ್ ಹೇಳಿಕೊಂಡಿದ್ದಾನೆ.

ತಂದೆ ಭಾಗಿಯಾಗಿಲ್ಲವೆಂದು ಸ್ಪಷ್ಟನೆ:

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಕೊಲೆ ಪ್ರಕರಣಕ್ಕೂ ತನ್ನ ತಂದೆ ಸಂತೋಷ್ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ ಬಿಂದು ಕುಮಾರ್, ʼನನ್ನ ತಂದೆ ಸಂತೋಷ್ ಕಳೆದ ಎಂಟು ವರ್ಷಗಳಿಂದ ಮನೆ ಬಿಟ್ಟು ದೂರವಾಗಿದ್ದಾರೆ. ಈ ಘಟನೆಯಲ್ಲಿ ಅವರು ಭಾಗಿಯಾಗಿಲ್ಲʼ ಎಂದು ಹೇಳಿದ್ದಾನೆ.

ತಪ್ಪೊಪ್ಪಿಗೆಯಲ್ಲಿ ಆರೋಪಿ ಬಿಂದು ಕುಮಾರ್ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾನೆ. ʼಯಲ್ಲೇಶ್ ನನ್ನ ತಂಗಿಯ ಬಗ್ಗೆ ಅತ್ಯಂತ ಕೆಟ್ಟ ಹಾಗೂ ಅವಾಚ್ಯವಾಗಿ ಮಾತನಾಡುತ್ತಿದ್ದ. ಇದಕ್ಕೆ ಸಂಬಂಧಿಸಿದ ಆಡಿಯೋ ದಾಖಲೆಗಳು ನಮ್ಮ ಬಳಿ ಇವೆ. ಈ ವಿಷಯವಾಗಿ ಐದು ಬಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಲಿಲ್ಲʼ ಎಂದು ಆರೋಪಿಸಿದ್ದಾನೆ.

ಇದಲ್ಲದೆ, ʼಯಲ್ಲೇಶ್ ನನ್ನ ಮೇಲೆ ಹಲ್ಲೆ ಮಾಡಿಸಿದ್ದ. ನಮ್ಮನ್ನು ಕೊಲೆ ಮಾಡುವುದಾಗಿ ಬೆದರಿಕೆ ಕೂಡ ನೀಡಿದ್ದ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿಯೇ ಆತ ಬೆದರಿಕೆ ಹಾಕಿದ್ದಾನೆ. ನಮ್ಮ ಜೀವಕ್ಕೆ ಅಪಾಯವಿದೆ ಎಂಬ ಮಾಹಿತಿ ನನಗೆ ಮುಂಚಿತವಾಗಿಯೇ ಲಭಿಸಿತ್ತುʼ ಎಂದು ಬಿಂದು ಕುಮಾರ್ ಹೇಳಿದ್ದಾನೆ.

ಕೊಲೆ ಮಾಡಿದ್ದು ಇದಕ್ಕಂತೆ!

ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ, “ನನ್ನನ್ನು ಮತ್ತು ನನ್ನ ಕುಟುಂಬವನ್ನು ರಕ್ಷಿಸಿಕೊಳ್ಳಲು ನಾನು ಮೊದಲು ಕ್ರಮ ಕೈಗೊಳ್ಳಬೇಕಾಯಿತು. ಅದಕ್ಕಾಗಿ ಕೊಲೆ ಮಾಡಲು ತೀರ್ಮಾನಿಸಿದೆ” ಎಂದು ಆತ ಹೇಳಿಕೊಂಡಿದ್ದಾನೆ. ಜೊತೆಗೆ, ಯಲ್ಲೇಶ್‌ನನ್ನು ಕಲ್ಲಿನಿಂದ ಅಲ್ಲ, ಮಚ್ಚಿನಿಂದ ಕೊಲೆ ಮಾಡಲಾಗಿದೆ. ಮಚ್ಚಿನೊಂದಿಗೆ ನಾವೇ ನ್ಯಾಯಾಲಯದ ಎದುರು ಶರಣಾಗುತ್ತೇವೆ ಎಂದು ಸಾಮಾಜಿಕ ಜಾಲತಾಣದ ಮೂಲಕ ಘೋಷಣೆ ಮಾಡಿದ್ದಾನೆ.

ಇದನ್ನೂ ಓದಿ: ಕೋಲಾರ | ಅಜ್ಜಪ್ಪನಹಳ್ಳಿ ಡೇರಿ ಚುನಾವಣೆ: ಅಧ್ಯಕ್ಷನಾಗಿ ಕಾಂಗ್ರೆಸ್ ಬೆಂಬಲಿತ, ಉಪಾಧ್ಯಕ್ಷನಾಗಿ ಬಿಜೆಪಿ ಬೆಂಬಲಿತ ಆಯ್ಕೆ

ಇನ್ನೊಂದು ಮಹತ್ವದ ಅಂಶವೆಂದರೆ, ಯಲ್ಲೇಶ್, ಶಂಕಿತ ಆರೋಪಿ ಸಂತೋಷ್ ಅವರ ಪತ್ನಿಯನ್ನು ಪ್ರೀತಿಸಿ ಮದುವೆಯಾಗಿದ್ದನೆಂಬ ಮಾಹಿತಿ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿಯೇ ಕುಟುಂಬದೊಳಗಿನ ವೈಷಮ್ಯ ಮತ್ತು ದ್ವೇಷ ಈ ಭೀಕರ ಕೊಲೆಗೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ.

ಮೊದಲು ಯಲ್ಲೇಶ್ ಕೊಲೆ ಮಾಡಿಲ್ಲ ಎಂದು ತಂದೆ ಸಂತೋಷ್ ಸ್ಪಷ್ಟನೆ ನೀಡಿದ ನಂತರವೇ, ಅವರ ಪುತ್ರ ಬಿಂದು ಕುಮಾರ್ ಸ್ವತಃ ಮುಂದೆ ಬಂದು ಕೊಲೆ ಆರೋಪವನ್ನು ಒಪ್ಪಿಕೊಂಡಿರುವುದು ಪ್ರಕರಣವನ್ನು ಇನ್ನಷ್ಟು ಗಂಭೀರಗೊಳಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ತಪ್ಪೊಪ್ಪಿಗೆ ವೀಡಿಯೋವನ್ನು ಪರಿಶೀಲಿಸುತ್ತಿದ್ದು, ಆರೋಪಿಗಳ ಪತ್ತೆ ಹಾಗೂ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕೋಲಾರ ಜಿಲ್ಲೆಯಲ್ಲಿ ಈ ಘಟನೆ ಭಾರೀ ಆತಂಕ ಮತ್ತು ಚರ್ಚೆಗೆ ಕಾರಣವಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇರಾನ್ ಯುದ್ದ ನಿಲ್ಲಿಸುವಂತೆ ಯು ಬಸವರಾಜ್ ಒತ್ತಾಯ.

ಕೋಲಾರ: ಇರಾನ್ ದೇಶದಲ್ಲಿರುವ ತೈಲ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆಯುವ ದುರುದ್ದೇಶದಿಂದ ಆ...

ಟೊಮೆಟೊ ಬೆಲೆ ಕುಸಿತ: ಅವಿಭಜಿತ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ರೈತರಿಗೆ ಸಂಕಷ್ಟ

ಪ್ರತಿದಿನ ಟೊಮೆಟೊ ಬೆಲೆ ಕುಸಿಯುತ್ತಿರುವ ಕಾರಣ ರೈತರು ನಿರಾಶೆಗೆ ಒಳಗಾಗಿದ್ದಾರೆ. ಕೋಲಾರ...

ಕಾರು ಅಪಘಾತ ಪ್ರಾಂತ ರೈತ ಸಂಘದ ಟಿ.ಎಂ ವೆಂಕಟೇಶ್ ದುರ್ಮರಣ

ಕೋಲಾರ: ಸಿಪಿಐಎಂ ಪಕ್ಷದ ತಾಲೂಕು ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಪ್ರಾಂತ...

ನಿಶಾಂತ್ ಕುಮಾರ್ ಜೆಡಿಯುಗೆ ಸೇರ್ಪಡೆ ಸ್ವಾಗತಿಸಿದ ಕಲ್ಲಂಡೂರು ನಾಗರಾಜ್

ಕೋಲಾರ: ಬಿಹಾರ ರಾಜ್ಯದ ಮುಖ್ಯಮಂತ್ರಿ ಹಾಗೂ ಜೆಡಿಯು ಪಕ್ಷದ ರಾಷ್ಟ್ರೀಯ ಅಧ್ಯಕ್ಷ...