ರೈತರು ಬೆಳೆದಂಥ ಬೆಳೆಗಳಿಗೆ ಸೂಕ್ತ ಬೆಲೆ ನೀಡಿ ಮುಂದೆ ಕಟಾವು ತಡವಾದರೆ ಬೆಳೆಯುವ ಕಬ್ಬು ಸರಿಯಾಗಿ ಬೆಳವಣಿಗೆಯಾಗುವುದಿಲ್ಲ, ನಷ್ಟವಾಗುತ್ತದೆ. ಕಾರ್ಖಾನೆಗಳು ಉಳಿಯಬೇಕೆಂದರೆ ಸಂಕಷ್ಟದಲ್ಲಿರುವ ರೈತರ ಕಬ್ಬಿನ ಬೆಳೆಗಳಿಗೆ ಶೀಘ್ರದಲ್ಲಿ ದರ ನಿಗದಿಪಡಿಸಬೇಕು ಎಂದು ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಸರ್ಕಾರಕ್ಕೆ ಒತ್ತಾಯಿಸಿದರು.
ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ಮಾಜಿ ಸಚಿವ ನೇತೃತ್ವದಲ್ಲಿ ದ್ಯಾಮವ್ವ ದೇವಿ ದೇವಸ್ಥಾನದಿಂದ ತಾಲೂಕು ದಂಡಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮೂಲಕ ಆಗಮಿಸಿ ತಾಲೂಕು ದಂಡಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯವರಿಗೆ ಮನವಿ ಸಲ್ಲಿಸಿ ಮಾತನಾಡಿದವರು.
“ಮಳೆ ಹಾನಿಗೆ ಸಿಲುಕಿರುವ ಬೆಳೆಗಳ ಪರಿಹಾರವನ್ನು ಶೀಘ್ರವೇ ನೀಡಬೇಕು. ಕಬ್ಬಿಗೆ ₹3,500ರಂತೆ ಸೂಕ್ತ ಬೆಂಬಲ ಬೆಲೆ ನೀಡಲು ಆದೇಶಿಸಬೇಕು. ರೈತರ ಬೇಡಿಕೆಯಾಗಿರುವ ಸೂಕ್ತ ಬೆಲೆಯನ್ನು ನಿಗದಿಪಡಿಸಿ, ಇಲ್ಲವಾದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ತೀವ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ ಜಿಲ್ಲಾದ್ಯಂತ ರೈತರ ಹೋರಾಟ ಚುರುಕು: ಪ್ರತಿಭಟನಾಕಾರರ ಮೇಲೆ ಲಘು ಲಾಠಿಪ್ರಹಾರ
ಈ ವೇಳೆಯಲ್ಲಿ ವಿರೂಪಾಕ್ಷ ಕೂಲಕಾರ, ಪುಂಡಲಿಕ್ ಬಾಟಿ, ಪ್ರಶಾಂತ್ ಪವಾರ್, ಶ್ರೀಶೈಲ ಗೌಡ್ ಬಿರಾದರ್, ಶಿವಪ್ಪ ಹಂಗರಗಿ, ಅಶೋಕ್ ಗಿಡ್ಡಪ್ಪಗೋಳ, ಶಿವಪುತ್ರ ಮೇಟಿ, ಸಂಗಮೇಶ್ ಬಾಟಿ, ಬಸವರಾಜ್ ಗಬ್ಬಸಾವಳಗಿ, ಅಭಿಷೇಕ್ ಹೆಬ್ಬಾಳ್, ಸಂಗಪ್ಪ ಕೊರ್ತಿ, ಶರಣಗೌಡ ಪಾಟೀಲ್ ವಿವಿಧ ಗ್ರಾಮಗಳ ರೈತರು ಇದ್ದರು.





