ಧರ್ಮಸ್ಥಳ ಪ್ರಕರಣ | ಎದೆ ಮುಟ್ಟಿ ನೋಡಿ ಹೇಳಿ ನೀವಲ್ಲವೇ ಕೊಂದವರನ್ನು ಬೆಂಬಲಿಸಿದವರು? – ಮಲ್ಲಿಗೆ ಸಿರಿಮನೆ

Date:

“ನಿಮ್ಮ ಆತ್ಮಸಾಕ್ಷಿಗಳಲ್ಲಿ ಹುಳುಕಿರಬೇಕು. ನಿಮ್ಮ ಎದೆಗಳನ್ನು ಮುಟ್ಟಿ ನೋಡಿಕೊಳ್ಳಿ, ಮುಟ್ಟಿ ನೋಡಿ ಹೇಳಿ ನೀವಲ್ಲವೇ ಕೊಂದವರು? ಅಥವಾ ನೀವಲ್ಲವೇ ಕೊಂದವರನ್ನು ಬೆಂಬಲಿಸಿದವರು? ನಿಮ್ಮ ಆತ್ಮಸಾಕ್ಷಿಯನ್ನು ಮುಟ್ಟಿ ನೋಡಿಕೊಳ್ಳಿ” ಎಂದು ಸಾಮಾಜಿಕ ಹೋರಾಟಗಾರ್ತಿ ಮಲ್ಲಿಗೆ ಸಿರಿಮನೆ ಹೇಳಿದರು.

ನಿರ್ಭಯ ಪ್ರಕರಣ ನಡೆದ ದಿನವಾದ ಇಂದು (ಡಿಸೆಂಬರ್ 16) ಕರ್ನಾಟಕದಲ್ಲೂ ಮಹಿಳೆಯರ ಮೇಲಿನ ಹಿಂಸಾಚಾರ ಕೊನೆಗೊಂಡು, ಎಲ್ಲ ಶೋಷಿತ, ದಮನಿತ ಮಹಿಳೆಯರಿಗೂ ನ್ಯಾಯ ಮತ್ತು ಘನತೆಯ ಬದುಕು ಖಾತ್ರಿಗೊಳ್ಳಬೇಕೆಂದು ಒತ್ತಾಯಿಸಿ ಧರ್ಮಸ್ಥಳದ ಬೆಳ್ತಂಗಡಿಯಲ್ಲಿ ‘ಮಹಿಳೆಯರ ಮೌನ ಮೆರವಣಿಗೆ ಹಾಗೂ ಮಹಿಳಾ ನ್ಯಾಯ ಸಮಾವೇಶ’ಗಳು ನಡೆದಿವೆ.

ಇದನ್ನು ಓದಿದ್ದೀರಾ? ಕೊಂದವರು ಯಾರು ಆಂದೋಲನದ ನಿಯೋಗದಿಂದ ಮುಖ್ಯಮಂತ್ರಿಗಳ ಭೇಟಿ, ಹಕ್ಕೊತ್ತಾಯ ಪತ್ರ ಸಲ್ಲಿಕೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮಹಿಳಾ ಸಮಾವೇಶದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಹಿಳಾಪರ ಹೋರಾಟಗಾರ್ತಿ ಮಲ್ಲಿಗೆ ಸಿರಿಮನೆ, “ನಾವು ಬೇರೆ ಬೇರೆ ಊರುಗಳಿಂದ ಬಂದಿದ್ದೇವೆ. ಆದರೆ ನಮ್ಮೆಲ್ಲರ ಆಗ್ರಹ ಒಂದೇ. ಹೆಣ್ಣು ಮಕ್ಕಳಿಗೆ ನ್ಯಾಯ ಸಿಗಬೇಕು ಮತ್ತು ಹೆಣ್ಣು ಮಕ್ಕಳು ಘನತೆಯಿಂದ ಬದುಕುವಂತಾಗಬೇಕು. ಸಂವಿಧಾನ ನಮಗೆ ನೀಡಿದ ಸಮಾನತೆ ನಿಜ ಜೀವನದಲ್ಲೂ ಜಾರಿಯಾಗಬೇಕು” ಎಂದು ಹೇಳಿದರು. ಹಾಗೆಯೇ “ಸಮಾನತೆ ನಮ್ಮ ಹಕ್ಕು ಭಿಕ್ಷೆಯಲ್ಲ” ಎಂದು ಘೋಷಣೆ ಕೂಗಿದರು.

mallige sirimane1
ಮಹಿಳಾಪರ ಹೋರಾಟಗಾರ್ತಿ ಮಲ್ಲಿಗೆ ಸಿರಿಮನೆ

“ಇದು ಒಂದು ಊರಿನ ಒಂದು ಪ್ರಕರಣಕ್ಕೆ ಸಂಬಂಧಪಟ್ಟ ಹೋರಾಟವಲ್ಲ. ನಾವು ಬೆಳ್ತಂಗಡಿಯಲ್ಲಿ ಕೊಂದವರು ಯಾರು ಸಮಾವೇಶ ನಡೆಸಲು ಮುಂದಾದಾಗ ಹಲವು ಪ್ರಶ್ನೆಗಳನ್ನು ನಮಗೆ ಕೇಳಲಾಯಿತು. ಇವೆಲ್ಲವುದಕ್ಕೂ ನಮ್ಮ ಹಕ್ಕೊತ್ತಾಯಗಳು ಉತ್ತರ ನೀಡುತ್ತದೆ. ನಾವು ಕೇವಲ ಬೆಳ್ತಂಗಡಿಗೆ ಬಂದವರಲ್ಲ, ಇಲ್ಲಿಗೆ ಬಂದು ನಮ್ಮ ಹೋರಾಟ ಮುಗಿಯುವುದೂ ಇಲ್ಲ. ಮಹಿಳಾ ಚಳವಳಿಯ ಈ ಪ್ರಯಾಣ ನೂರಾರು ವರ್ಷಗಳ ಹಿಂದೆಯೇ ಆರಂಭವಾಗಿದೆ” ಎಂದು ಹೇಳಿದರು.

“ಬಿಜಾಪುರ ದಲಿತ ಬಾಲಕಿ ಅತ್ಯಾಚಾರ ಪ್ರಕರಣ, ಹಾಸನ ಪ್ರಕರಣದಲ್ಲಿಯೂ ಧ್ವನಿ ಎತ್ತಿದ್ದೇವೆ. ಎಲ್ಲೇ ಮಹಿಳೆಯರಿಗೆ ಅನ್ಯಾಯವಾದಾಗ ನಾವು ಧ್ವನಿ ಎತ್ತಿದ್ದೇವೆ. ಈಗ ಬೆಳ್ತಂಗಡಿಗೆ ಯಾಕೆ ಬರಬಾರದು? ಯಾರು ಇಲ್ಲಿ ಮಹಿಳೆಯರನ್ನು ಕೊಂದವರು ಎಂಬ ಪ್ರಶ್ನೆಯನ್ನು ನಾವು ಯಾಕೆ ಕೇಳಬಾರದು? ಯಾರು ನಮ್ಮನ್ನು ತಡೆಯುವವರು? ಯಾಕೆ ನಮ್ಮನ್ನು ತಡೆಯುತ್ತೀರಿ” ಎಂದು ಮಲ್ಲಿಗೆ ಪ್ರಶ್ನಿಸಿದರು.

oath
ಮಹಿಳಾ ನ್ಯಾಯ ಸಮಾವೇಶದಲ್ಲಿ ಸಂವಿಧಾನದ ಪೀಠಿಕೆ ಓದಿದ ಮಹಿಳೆಯರು

“ಸರ್ಕಾರ, ಸಿಎಂ, ಸಚಿವರುಗಳು ಯಾರನ್ನು ಬೆಂಬಲಿಸಬೇಕಾಗಿತ್ತು, ಯಾರನ್ನು ಬೆಂಬಲಿಸುತ್ತಿದ್ದೀರಿ ಎಂದು ಒಮ್ಮೆ ಆತ್ಮಸಾಕ್ಷಿಯನ್ನು ಮುಟ್ಟಿ ಆಲೋಚಿಸಿ. ನಾವು ನೊಂದ ಹೆಣ್ಣು ಮಕ್ಕಳು, ಕುಟುಂಬದ ಕುಡಿಗಳನ್ನು ಕಳೆದುಕೊಂಡ ತಾಯಂದಿರು ನಾವು ಇಲ್ಲೇ ಇದ್ದೇವೆ. ನಮಗೆ ನ್ಯಾಯ ಕೊಡುವವರು ಯಾರು? ನಮಗೆ ನ್ಯಾಯ ದೊರಕಿಸುವುದು ನಿಮ್ಮ ಜವಾಬ್ದಾರಿಯಲ್ಲವೇ” ಎಂದೂ ಕೇಳಿದರು.

ಇದನ್ನು ಓದಿದ್ದೀರಾ? ಕೊಂದವರು ಯಾರು? | ಒಂಟಿ ಮಹಿಳೆ ಹೋರಾಡಿದರೆ ಕಥೆ, ಮಹಿಳೆಯರೆಲ್ಲ ಕೂಡಿ ಹೋರಾಡಿದರೆ ಕ್ರಾಂತಿ: ಡಾ. ನಾಗಲಕ್ಷ್ಮೀ ಚೌಧರಿ

ಇನ್ನು ಈ ಕಾರ್ಯಕ್ರಮದಲ್ಲೇ ಮಾತನಾಡಿದ ರೈತ ಹೋರಾಟಗಾರ್ತಿ ಅನಸೂಯಮ್ಮ ಮಾತನಾಡಿ, “ಎಲ್ಲಿ ಅನ್ಯಾಯ ನಡೆದರೂ ಅದರ ವಿರುದ್ಧ ಹೋರಾಡದಿದ್ದರೆ ಆ ಅನ್ಯಾಯದಲ್ಲಿ ನಾವು ಭಾಗಿಯಾದಂತೆ ಎಂದು ಲೋಹಿಯಾ ಹೇಳುತ್ತಾರೆ. ದೇವರ ವಿಗ್ರಹ ಪೂಜಿಸುತ್ತಾರೆ, ಬದುಕಿರುವ ಜೀವಗಳನ್ನು ನಲುಗಿಸುತ್ತಾರೆ. ಇವರಿಗೆ ಮನುಷ್ಯತ್ವ ಇದೆಯೇ? ಸಂವಿಧಾನ ನಮಗೆಲ್ಲರಿಗೂ ಒಂದೇ ಹಕ್ಕು ನೀಡಿದೆ. ದೇವಾನುದೇವತೆಗಳನ್ನು ಪೂಜಿಸುತ್ತಾರೆ, ಹೆಣ್ಣು ಮಕ್ಕಳನ್ನು ಹಿಸುಕಿಹಾಕುತ್ತಾರೆ. ಇವರು ಮನುಷ್ಯರಾ? ನಮಗೆ ಸಮಾನವಾದ ಹಕ್ಕುಗಳಿವೆಯೇ ಎಂಬುದನ್ನು ಅರ್ಥ ಮಾಡಿಕೊಳ್ಳಿ” ಎಂದು ಹೇಳಿದರು.

anusuyamma
ರೈತ ಹೋರಾಟಗಾರ್ತಿ ಅನಸೂಯಮ್ಮ

“ಅಂಬೇಡ್ಕರ್ ಸಂವಿಧಾನ ರಚಿಸಿದಾಗ ಸಮಾನವಾದ ಹಕ್ಕು ಬೇಕೆಂಬ ಕಾರಣಕ್ಕೆ ಮನುಸ್ಮೃತಿಯನ್ನು ಸುಟ್ಟರು” ಎಂಬುದನ್ನೂ ನೆನಪಿಸಿಕೊಂಡರು. “ಹೆಣ್ಣು ಗಂಡು ಜತೆಯಾಗಿದ್ದರೆ ಸಹಿಸಲ್ಲ, ಹಬ್ಬ ಆಚರಿಸಿದರೆ ಸಹಿಸಲ್ಲ. ಆದರೆ ಒಬ್ಬಳು ಹೆಣ್ಣುಮಗಳನ್ನು ಗಂಡಸು ಅತ್ಯಾಚಾರ ಮಾಡಿದಾಗ ನೋಡಿಯೂ ಸುಮ್ಮನಿದ್ದೀರಲ್ಲಾ” ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹಾಗೆಯೇ ನಮ್ಮ ಹೆಣ್ಣುಮಕ್ಕಳು ದುರ್ಗೆ, ಚಾಮುಂಡಿಗಳಾಗಬೇಕು. ಅವರನ್ನು ಅವರು ಕಾಪಾಡಿಕೊಳ್ಳುವ ಶಕ್ತಿ ಬೆಳೆಸಿಕೊಳ್ಳಬೇಕು” ಎಂದು ಕರೆ ನೀಡಿದರು.

“ನಮ್ಮ ಹೆಣ್ಣು ಮಕ್ಕಳ ಮೇಲೆ ಹೇರುತ್ತಿರುವ ಭಯ ‘ಆತಂಕವಾದ’. ಯಾಕೆಂದರೆ ಈ ಆತಂಕವೇ ನಮ್ಮನ್ನು ಮೌನಗೊಳಿಸುವುದು. ನಮ್ಮನ್ನು ಬೈಯುವುದು, ಹೊಡೆಯುವುದು, ಅಶ್ಲೀಲವಾಗಿ ನಿಂದಿಸುವುದು ಆತಂಕವಾದವೇ ಆಗಿದೆ. ಇವೆಲ್ಲವೂ ನಮ್ಮ ಹೆಣ್ಣು ಮಕ್ಕಳನ್ನು ನಿಯಂತ್ರಿಸಲು ಬಳಸುವ ಸಾಧನ. ಇವೆಲ್ಲವೂ ನಮ್ಮ ಸ್ವಾತಂತ್ರ್ಯದ ಹರಣ. ಭಯರಹಿತ ಸಮಾಜದ ನಿರ್ಮಾಣ ನಮ್ಮೆಲ್ಲರ ಕನಸು. ಅದಕ್ಕಾಗಿ ಅಂಬೇಡ್ಕರ್ ಹಾಕಿಕೊಟ್ಟ ದಾರಿಯಲ್ಲಿ ನಾವು ಸಾಗಬೇಕು” ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಪ್ರೊ. ಆರ್. ಸುನಂದಮ್ಮ ಹೇಳಿದರು.

sunandamma
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಪ್ರೊ. ಆರ್. ಸುನಂದಮ್ಮ

“ಕತ್ತಲಿರುವ ಜಾಗವನ್ನು ಬೆಳಕು ಮಾಡುವುದು ಆಡಳಿತಗಾರರ ಕರ್ತವ್ಯ. ಬೆಳಕಿಲ್ಲದ ಸಮಯದಲ್ಲಿ ನಾವು ಸುರಕ್ಷಿತರಾಗಿದ್ದೆವು. ಬೆಳಕು ಬಂದ ಮೇಲೆ ಯಾಕೆ ನಮ್ಮ ಮೇಲೆ ಇಷ್ಟೊಂದು ನಿಯಂತ್ರಣ? ನಮ್ಮ ಬಟ್ಟೆ ಮೇಲೆ, ಭಾಷೆ, ನಡವಳಿಕೆ ಮೇಲೆ ಬೊಟ್ಟು ಮಾಡಿ ನಮ್ಮನ್ನು ನಿಯಂತ್ರಿಸಲಾಗುತ್ತಿದೆ. ಗಂಡು ಮಕ್ಕಳು ಓಡಾಡುವಾಗ, ನಮ್ಮನ್ನು ಯಾಕೆ ಶೀಲದ ಪ್ರಶ್ನೆ ಮುಂದಿಟ್ಟು ಕಟ್ಟಿಹಾಕುತ್ತೀರಿ” ಎಂದು ಪ್ರಶ್ನಿಸಿದರು.

saraswati
ನಾಟಕ ಪ್ರದರ್ಶಿಸಿದ ರಂಗಕರ್ಮಿ, ಲೇಖಕಿ ದು. ಸರಸ್ವತಿ

ಇನ್ನು ಇದೇ ವೇದಿಕೆಯಲ್ಲಿ ರಂಗಕರ್ಮಿ, ಲೇಖಕಿ, ಕವಯತ್ರಿ ಮತ್ತು ದಲಿತ-ಮಹಿಳಾ ಹೋರಾಟಗಾರ್ತಿ ದು. ಸರಸ್ವತಿ ನಾಟಕ ಪ್ರದರ್ಶಿಸಿದರು. ಬೆಳ್ತಂಗಡಿ ತಾಲೂಕು ತಹಸೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯಗಳನ್ನು ಸಲ್ಲಿಸಲಾಯಿತು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...