ರಾಜ್ಯದ ಎಲ್ಲ ಚರ್ಚ್‌ಗಳಲ್ಲಿಯೂ ಕೊಂಕಣಿ ಗುಂಪುಗಳ ಅಧಿಪತ್ಯ: ಕನ್ನಡ ಭಾಷೆ ಕಡೆಗಣಿಸುತ್ತಿರುವುದಾಗಿ ಆರೋಪ

Date:

ರಾಜ್ಯದಲ್ಲಿರುವ ಚರ್ಚ್‌ಗಳಲ್ಲಿ ಕೊಂಕಣಿ ಗುಂಪುಗಳು ಅಧಿಕಾರವನ್ನು ಏಕಪಕ್ಷೀಯವಾಗಿ ಹಿಡಿದುಕೊಂಡು ಕನ್ನಡ ಕ್ರೈಸ್ತರನ್ನು ಕ್ರಮಬದ್ಧವಾಗಿ ಹತೋಟಿಗೆ ಒಳಪಡಿಸುತ್ತಿವೆ ಮತ್ತು ಕನ್ನಡ ಭಾಷೆಯನ್ನು ಕಡೆಗಣಿಸುತ್ತಿವೆ ಎಂದು ಅಖಿಲ ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತರ ಕನ್ನಡ ಸಂಘದ ಅಧ್ಯಕ್ಷ ಎ ಐಸಾಕ್ ಆರೋಪ ಮಾಡಿದ್ದಾರೆ.

ಬೆಂಗಳೂರು ನಗರದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, “ರಾಜ್ಯದಲ್ಲಿ ಒಟ್ಟು 14 ಧರ್ಮ ಕ್ಷೇತ್ರಗಳಿದ್ದರೂ, ಚಿಕ್ಕಮಗಳೂರು ಹೊರತುಪಡಿಸಿ ಇತರೆ ಯಾವುದೇ ಚರ್ಚ್‌ನಲ್ಲೂ ಒಬ್ಬರೂ ಕನ್ನಡಿಗ ಬಿಷಪ್ ಇಲ್ಲ. ಕರಾವಳಿ ಮೂಲದ ಬಲವಾದ ಮತದಾನ ಪ್ರಭಾವದಿಂದ ಕನ್ನಡಿಗ ಬಿಷಪ್‌ಗಳನ್ನು ಬೆಳಸದಂತೆ ತಡೆಯಲಾಗುತ್ತಿದೆ” ಎಂದರು.

ಬೆಂಗಳೂರು ಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷ ಪೀಟರ್ ಮಚಾಡೊ ಮತ್ತು ಮಾಜಿ ಮಹಾಧರ್ಮಾಧ್ಯಕ್ಷ ಬರ್ನಾರ್ಡ್ ಮೋರಾಸ್ ಇಬ್ಬರೂ ಕನ್ನಡ ಕ್ರೈಸ್ತರ ನ್ಯಾಯಬದ್ಧ ಬೇಡಿಕೆಗಳನ್ನು ನಿರ್ಲಕ್ಷಿಸಿದ್ದಾರೆ. ಮುಖ್ಯ ಚರ್ಚ್ ಹುದ್ದೆಗಳು ಧರ್ಮಕ್ಷೇತ್ರ ಆಡಳಿತ, ಆಯೋಗಗಳು, ಸೆಮಿನರಿ ತರಬೇತಿ ಸಂಸ್ಥೆಗಳು, ಪ್ರಮುಖ ಸಂಸ್ಥೆಗಳು ಎಲ್ಲವೂ ಕರಾವಳಿ ಕೊಂಕಣಿ ವಲಯದ ಹಿಡಿತದಲ್ಲಿದ್ದು, ಕನ್ನಡ ಕ್ರೈಸ್ತರನ್ನು ತಮ್ಮದೇ ನೆಲದಲ್ಲಿ ಗೊಂಬೆಯ ಪ್ರೇಕ್ಷಕರನ್ನಾಗಿಸಿದೆ” ಎಂದು ಐಸಾಕ್ ಬೇಸರ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇತ್ತೀಚೆಗೆ ಮಂಗಳೂರಿನ ರಾಯ್ ಕಾಸ್ಟೆಲಿನೊ ಅವರ ಸಾರ್ವಜನಿಕ ಹೇಳಿಕೆ ವಿವಾದ ಹೆಚ್ಚಿಸಿದ್ದು, ಅವರ ಹಸ್ತಕ್ಷೇಪ ಅನಧಿಕೃತ ಮತ್ತು ಕನ್ನಡ ಕ್ರೈಸ್ತರ ಭಾವನೆಗಳಿಗೆ ಅವಮಾನಕಾರಿಯಾಗಿದೆ. ಮಹಾಧರ್ಮಾಧ್ಯಕ್ಷರು ಈ ಕೂಡಲೇ 3/1983ರ ಸುತ್ತೋಲೆಯನ್ನು ರಾಜ್ಯದ ಎಲ್ಲೆಡೆ ಅನುಷ್ಠಾನಗೊಳಿಸಬೇಕು. ಕರಾವಳಿ ಏಕಾಧಿಕಾರಕ್ಕೆ ಅಂತ್ಯಹಾಡಿ, ತಮಿಳುನಾಡು, ತೆಲಂಗಾಣ ರಾಜ್ಯದ ಚರ್ಚ್‌ಗಳಲ್ಲಿ ಸ್ಥಳೀಯ ಬಿಷಪ್‌ಗಳಿಗೆ ಆದ್ಯತೆ ನೀಡಿದಂತೆ, ರಾಜ್ಯದಲ್ಲಿಯೂ ಕನ್ನಡಿಗ ಪಾದ್ರಿಗಳಿಗೆ ಸೂಕ್ತ ಪ್ರತಿನಿಧಿತ್ವ ಮತ್ತು ಕನ್ನಡಕ್ಕೆ ಯೋಗ್ಯ ಸ್ಥಾನ ನೀಡಬೇಕು” ಎಂದು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ? ಮುದ್ದೇಬಿಹಾಳ | ಅಂಗನವಾಡಿ ಕಾರ್ಯಕರ್ತೆ ವಿರುದ್ಧ ಜಾತಿನಿಂದನೆ ಆರೋಪ; ಕ್ರಮಕ್ಕೆ ಆಗ್ರಹ

“ರಾಜ್ಯದ ಎಲ್ಲ ಚರ್ಚ್‌ಗಳಲ್ಲಿಯೂ ಕನ್ನಡಕ್ಕೆ ಆದ್ಯತೆ ನೀಡಿ ಕನ್ನಡದಲ್ಲಿಯೇ ಪೂಜೆಗಳಾಗಬೇಕು. ಆಧ್ಯಾತ್ಮಿಕವಾಗಿ ಮುನ್ನಡೆಸಲು ಇರುವಂತಹ ಧರ್ಮಾಧ್ಯಕ್ಷರುಗಳನ್ನು ಕನ್ನಡ ಯಾಜಕರ ಬಳಗದಿಂದಲೇ ಆಯ್ಕೆ ಮಾಡಬೇಕು. ನಮ್ಮ ನೆಲದಲ್ಲಿರುವ ಸಂತ ಪೇತ್ರರ ಗುರುಮಠ ಕರ್ನಾಟಕ ಪ್ರಾಂತೀಯ ಗುರುಮಠವಾಗಬೇಕು” ಎಂದು ಐಸಾಕ್ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಅಂತೋಣಿ ರಾಜು ಸಿ, ಖಜಾಂಚಿ ಜಾರ್ಜ್ ಕುಮಾರ್ ವೈ, ಕನ್ನಡ ಹೋರಾಟಗಾರರಾದ ಚಂದ್ರಶೇಖರ್, ಚನ್ನೇಗೌಡ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...