ಕೊಪ್ಪಳದ ಕುಷ್ಟಗಿ ತಾಲೂಕಿನ ಗ್ರಾಮವೊಂದರಲ್ಲಿ 17 ವರ್ಷದ ಬಾಲಕಿಯ ಮೇಲೆ ಗ್ರಾಮ ಪಂಚಾಯತಿ ನೌಕರ ಅತ್ಯಾವೆಸಗಿದ ಘಟನೆ ನಡೆದಿದೆ.
ಗ್ರಾಮ ಪಂಚಾಯತಿ ಕರವಸೂಲಿಗಾರ ಬೀರಪ್ಪ ಇಲಕಲ್ (27) ಎಂಬಾತ ಅತ್ಯಾಚಾರವೆಸಗಿರುವ ಕುರಿತು ಬಾಲಕಿಯ ತಾಯಿ ಕುಷ್ಟಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಕೊಪ್ಪಳ | ವಿದ್ಯಾರ್ಥಿ ಯಲ್ಲಾಲಿಂಗ ಕೊಲೆ ಪ್ರಕರಣ; ಎಲ್ಲ 9 ಆರೋಪಿಗಳು ಖುಲಾಸೆ
ಬಾಲಕಿಯನ್ನು ಹೊಲದಲ್ಲಿ ಬಲವಂತವಾಗಿ ಹೊತ್ತೊಯ್ದು ಹಲ್ಲೆ ನಡೆಸಿ ಅತ್ಯಾಚಾರವೆಸಗಿದ್ದಾನೆ. ಈ ಕುರಿತು ಪೋಕ್ಸೋ ಕಾನೂನಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.





