ಕೊಪ್ಪಳದ ಸುತ್ತಮುತ್ತ ತಲೆಯೆತ್ತಿರುವ ಕಾರ್ಖಾನೆಗಳ ವಿರುದ್ಧ, ಬಲ್ಡೋಟಾ ವಿಸ್ತರಣೆಯನ್ನು ವಿರೋಧಿಸಲು ಹಾಗೂ ಹೊಸ ಕಂಪನಿಗಳನ್ನು ಜಿಲ್ಲೆಯಲ್ಲಿ ಸ್ಥಾಪನೆಯಾಗದಂತೆ ತಡೆಯಲು ಗವಿ ಶ್ರೀಗಳು ದೃಢ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿಯಾಗಿ ಮನವಿ ಮಾಡಿವೆ.
ಬಲ್ಡೋಟಾ ವಿಸ್ತರಣೆ ಹಾಗೂ ಮುಕುಂದ ಸುಮಿ ಹೊಸ ಕಾರ್ಖಾನೆಗಳ ಸ್ಥಾಪನೆ ವಿರೋಧಿಸಿ ಅನಿರ್ಧಿಷ್ಟಾವಧಿ ಸತ್ಯಾಗ್ರಹವನ್ನು ಅ.31ರಿಂದ ನಗರಸಭೆಯ ಆವರಣದಲ್ಲಿ ಹಮ್ಮಿಕೊಂಡಿದ್ದು, ಧರಣಿಯನ್ನು ಗವಿ ಶ್ರೀಗಳು ಬೆಂಬಲಿಸಿ ಹೋರಾಟದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
“ಬಲ್ಡೋಟ, ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ ಸುಮಿ, ಎಕ್ಷಿಂಡಿಯಾ ಮುಂತಾದ ಈ ಕಾರ್ಖಾನೆಗಳು 20 ಹಳ್ಳಿಗಳ ಸುತ್ತ ಸ್ಪಾಂಜ್ ಐರನ್, ಪಲ್ಲೆಟ್, ಉಕ್ಕು, ಸಿಮೆಂಟ್, ಕಾಸ್ಟಿಂಗ್, ವಿಷ ರಸಾಯನ, ಕೆಮಿಕಲ್ ಗೊಬ್ಬರ, ಸುಣ್ಣ, ಸಿಮೆಂಟ್, ಇಂಡಸ್ಟ್ರೀಯಲ್ ಗ್ಯಾಸ್, ಕಲ್ಲಿದ್ದಲು ಉರಿಸಿ ವಿದ್ಯುತ್, ಹಾಲಿನ ಪದಾರ್ಥ ಉತ್ಪಾದನೆ, ಮಾಡುತ್ತಾ ಪರಿಸರ ಹಾನಿ ಮಾಡುತ್ತಿವೆ. ಇವುಗಳ ವಿಸ್ತರಣೆ, ಹೊಸ ಕಂಪನಿಗಳ ಸ್ಥಾಪನೆಯಾಗದಂತೆ ತಡೆಯಲು ತಾವು ಮುಂದಾಳತ್ವ ವಹಿಸಬೇಕು” ಎಂದು ಗವಿ ಶ್ರೀಗಳಿಗೆ ವಿನಂತಿಸಲಾಯಿತು.

ಫೆಬ್ರುವರಿ 24ರಂದು ತಮ್ಮ ಮುಂದಾಳತ್ವದಲ್ಲಿ ಸಾವಿರಾರು ಜನರ ಕಾರ್ಖಾನೆಗಳ ತೊಲಗಿಸಲು ಬೃಹತ್ ಪ್ರತಿಭಟನೆ ನಡೆಸಲಾಯಿತು. ಬಿಎಸ್‌ಪಿಎಲ್ ವಿಸ್ತರಣೆ ನಿಲ್ಲಿಸಲು ಹಾಗೂ ಸರಕಾರದಿಂದ ಆದೇಶ ಪ್ರತಿ ತರುವಂತೆ ಬೇಡಿಕೆಗಳನ್ನು ಜನಪ್ರತಿನಿಧಿಗಳಿಗೆ ಆದೇಶದ ಜೊತೆ ಜವಾಬ್ದಾರಿಯನ್ನೂ ವಹಿಸಿದ್ದರಿ. ಇದಕ್ಕೆ ಒಪ್ಪಿಕೊಂಡ ಜನಪ್ರತಿನಿದಿನಗಳು ಆ ಕೆಲಸ ಮಾಡಿಲ್ಲ. ಆದ್ದರಿಂದ ಜನಪ್ರತಿನಿಧಿಗಳನ್ನು ತಮ್ಮಲ್ಲಿಗೆ ಕರೆಯಿಸಿಕೊಂಡು ತಾವು ಜಿಲ್ಲೆಯ ಜನರ ಪರವಾಗಿ ಕಂಪನಿ ವಿಸ್ತರಣೆ ಶಾಶ್ವತವಾಗಿ ರದ್ದುಗೊಳಿಸುವ ಆದೇಶ ತರಬೇಕೆಂದು ಜನಪ್ರತಿನಿಧಿಗಳು ಮತ್ತೊಮ್ಮೆ ಆಗ್ರಹಿಸಬೇಕು ಎಂದರು.
ಇದನ್ನೂ ಓದಿ: ಕೊಪ್ಪಳ | ತುಂಗಭದ್ರಾ ಕಾಲುವೆಯಲ್ಲಿ ಈಜಲು ಹೋದ ಯುವಕ ನಾಪತ್ತೆ
ಈ ವೇಳೆ ಅಲ್ಲಮಪ್ರಭು ಬೆಟ್ಟದೂರು, ಕೆ ಬಿ ಗೋನಾಳ, ಗಾಳೆಪ್ಪ ಮುಳಗಿ, ಮಂಜುನಾಥ ಗೊಂಡಬಾಳ, ಮುದಕಪ್ಪ ಹೊಸಮನಿ, ಶರಣು ಗಡ್ಡಿ, ಸರಣು ಪಾಟೀಲ್, ಮಂಗಳೇಶ ರಾಠೋಡ, ಮಹಂತೇಶ ಎಮ್ ಕೆ ಸಾಹೇಬ್, ಶಿವಪ್ಪ ಹಡಪದ, ಎಸ್ ಎ ಗಫಾರ್ ಹಾಗೂ ಇತರರು ಉಪಸ್ಥಿತರಿದ್ದರು.





