ಕೊಪ್ಪಳ | ಒಳಮೀಸಲಾತಿ ನ್ಯಾ. ನಾಗಮೋಹನದಾಸ್‌ ವರದಿ ಯಥಾವತ್ ಜಾರಿಗಾಗಿ ಅರೆಬೆತ್ತಲೆ ಪ್ರತಿಭಟನೆ

Date:

ಆಗಸ್ಟ್ 19ರಂದು ನಡೆಯುವ ವಿಶೇಷ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಜಾರಿ ಮಾಡಲು ಮತ್ತು ಸುಪ್ರೀಂ ಕೋರ್ಟ್‌ ಆದೇಶವನ್ನು ಪಾಲನೆ ಮಾಡಿ ಅಂಗೀಕರಿಸಲು ಸದನದಲ್ಲಿ ಮಂಡನೆ ಮಾಡಬೇಕು. ಅಂದು ನಾಗಮೋಹನ ದಾಸ್‌ ಅವರ ಒಳಮೀಸಲಾತಿ ವರದಿ ಯಥಾವತ್ ಜಾರಿಯಾಗದಿದ್ದರೆ ರಕ್ತಪಾತದದ ಹೋರಾಟ ನಡೆಯುತ್ತದೆ ಎಂದು ಮಾದಿಗ ಜಾತಿ ಉಪಜಾತಿ ಸಂಘಟನೆಗಳ ಜಿಲ್ಲಾ ಪ್ರಧಾನ ಸಂಚಾಲಕ ಣೇಶ ಹೊರತಟ್ನಾಳ ಎಚ್ಚರಿಸಿದರು.

ನಾಗಮೋಹನ ದಾಸ್ ಅವರ ವೈಜ್ಞಾನಿಕ ಒಳಮೀಸಲಾತಿ ಯಥಾವತ್ ಜಾರಿಗೊಳಿಸಲು ಚರ್ಚಿಸುವಂತೆ ಒತ್ತಾಯಿಸಿ ಜಾತಿ ಉಪಜಾತಿ ಸಂಘಟನೆಗಳ ಕೊಪ್ಪಳ ಜಿಲ್ಲಾ ಒಕ್ಕೂಟ ಹಾಗೂ ಮಾದಿಗ ಮಹಾಸಭಾದ ಕಾರ್ಯಕರ್ತರು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು. ಬಳಿಕ ನಗರದ ಅಶೋಕ ವೃತ್ತದಿಂದ ಶಾಸಕ ರಾಘವೇಂದ್ರ ಹಿಟ್ನಾಳ ಅವರ ನಿವಾಸದವರೆಗೂ ತಮಟೆ ಭಾರಿಸುವುದರ ಮೂಲಕ ತೆರಳಿ ಶಾಸಕರ ಅನುಪಸ್ಥಿತಿಯಲ್ಲಿ ಸಹೋದರ ಸಂಸದ ರಾಜಶೇಖರ ಹಿಟ್ನಾಳ ಅವರಿಗೆ ಮನವಿ ಸಲ್ಲಿಸಿದರು.

“ನಾಗಮೋಹನದಾಸ್‌ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೆ ತರುವಂತೆ ಸಂಪುಟ ಸಭೆಯಲ್ಲಿ ಚರ್ಚೆ ನೆಡೆಸಿ ಶಿಫಾರಸು ಮಾಡಲು ಒತ್ತಾಯಿಸಬೇಕು” ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ರಾಮಣ್ಣ ಚೌಡ್ಕಿ ಮಾತನಾಡಿ, “ಆಗಸ್ಟ್‌ 4ರಂದು ನ್ಯಾ. ಎಚ್‌ ಎನ್‌ ನಾಗಮೋಹನದಾಸ್‌ ಆಯೋಗವು ವರದಿ ನೀಡಿದೆ. ಅದಾದ 3 ದಿನಗಳಲ್ಲಿ ಸಂಪುಟ ಸಭೆಯಲ್ಲಿ ವರದಿ ಅಂಗೀಕರಿಸಿದ ಸರ್ಕಾರವು ವರದಿಯನ್ನು ಸಚಿವರುಗಳಿಗೆ ಅಧ್ಯಯನ ಮಾಡಿ ಸ್ಪಷ್ಟ ಅಭಿಪ್ರಾಯವನ್ನು ತಿಳಿಸಲು ಸಲಹೆ ನೀಡಿದೆ. ಆಗಸ್ಟ್ 19ರಂದು ದಾಸ್ ಆಯೋಗದ ವರದಿ ಯಥಾವತ್ತಾಗಿ ಜಾರಿಗೆ ತರುವುದರ ಕುರಿತು ವಿಶೇಷ ಸಂಪುಟ ಸಭೆ ನಡೆಸುತ್ತಿದೆ. ಶಾಸಕ ಸ್ಥಾನದಲ್ಲಿರುವ ತಾವು ಈ ಸಂದರ್ಬದಲ್ಲಿ ಸಂಪುಟ ಸಭೆಯಲ್ಲಿ ಖುದ್ದಾಗಿ ಮಾತನಾಡಿ ನ್ಯಾ.ನಾಗಮೋಹನ ದಾಸ್‌ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೆ ತರುವುದರ ಬಗ್ಗೆ ನಿಗಾ ವಹಿಸಬೇಕು” ಎಂದು ಒತ್ತಾಯಿಸಿದರು.

“ಒಂದೊಮ್ಮೆ ಒಳಮೀಸಲಾತಿ ಜಾರಿಗೆ ಕೆಲವು ಸಚಿವರು ವಿರೋಧ ಮಾಡಿದರೆ ತಾವುಗಳು ಪ್ರಸ್ತುತ ವರದಿಯಲ್ಲಿ 5 ಗುಂಪುಗಳಿಗೆ ನೀಡಿದ ಮೀಸಲಾತಿ ಶಿಫಾರಸಿನಲ್ಲಿ ಮಾದಿಗ ಜಾತಿ ಉಪಜಾತಿಗಳಿಗೆ ಶೇ.6ರಷ್ಟು ಮೀಸಲಾತಿಯನ್ನು ಪ್ರತ್ಯೇಕವಾಗಿ ಘೋಷಿಸಲು ಸರ್ಕಾರಕ್ಕೆ ಒತ್ತಾಯಿಸಬೇಕು” ಎಂದರು.

ಈ ವೇಳೆ ಮಲ್ಲಿಕಾರ್ಜುನ ಪೂಜಾರ ಮಾತನಾಡಿ, “ಸರಕಾರವು ಕೆಲವು ಶಾಸಕರ ಒತ್ತಡಕ್ಕೊಳಗಾಗಿ ವಿನಾಕಾರಣ ವಿಳಂಬನೀತಿ ಅನುಸರಿಸುತ್ತಿದೆ. ತಾಂತ್ರಿಕ ದೋಷದ ಹೆಸರಲ್ಲಿ ಈ ವರದಿ ಅಧ್ಯಯನ ಮಾಡುವುದಕ್ಕೆ ಮತ್ತೊಮ್ಮೆ ಕೈ ಹಾಕಿ ಸಂಪುಟ ಉಪಸಮಿತಿ ನೇಮಿಸಲು ಸರ್ಕಾರವು ಮುಂದಾದರೆ ತಾವು ಗಟ್ಟಿಯಾಗಿ ನ್ಯಾಯಬದ್ಧವಾಗಿ ಮಾದಿಗ ಜಾತಿ ಉಪಜಾತಿಗಳಿಗೆ ಸಂಬಂಧಿಸಿದ‌ ಒಳಮೀಸಲಾತಿಯನ್ನು ತಮಿಳುನಾಡು ಮಾದರಿಯಂತೆ ಆದ್ಯತಾ ಮೀಸಲಾತಿ ಜಾರಿಗೆ ತರುವಂತೆ ಮಾತನಾಡಬೇಕು” ಎಂದು ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ? ಧಾರವಾಡ | ಮೊರಾರ್ಜಿ ದೇಸಾಯಿ ವಸತಿ ಕಾಲೇಜಿಗೆ ಪ್ರಥಮ ಪಿಯುಸಿ ದಾಖಲಾತಿಗೆ ಅರ್ಜಿ ಆಹ್ವಾನ

“ಕಾಲಹರಣ ಮಾಡುವ ಮೂಲಕ ಈಗಾಗಲೇ ನೆನೆಗುದಿಗೆ ಬಿದ್ದಿರುವ ನೇಮಕಾತಿಗಳಿಗೆ ಇನ್ನಷ್ಟು ವಿಳಂಬಕ್ಕೆ ಅವಕಾಶ ಕೊಟ್ಟು ಸಾರ್ವಜನಿಕರಲ್ಲಿ ತಪ್ಪು ಸಂದೇಶವನ್ನು ಸರ್ಕಾರವೇ ರವಾನಿಸಿದಂತಾಗುತ್ತದೆ. ನಾವುಗಳು ಸರ್ಕಾರಕ್ಕೆ ಅಸಹಕಾರ ಚಳವಳಿ ಮೂಲಕ ಹೋರಾಟವನ್ನು ತೀವ್ರಗೊಳಿಸುತ್ತೇವೆ” ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳು, ಪ್ರಗತಿಪರರು 29 ಉಪಜಾತಿಗಳ ಮುಖಂಡರು ಭಾಗಿಯಾಗಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...