ಕೊಪ್ಪಳ | ಮಹಿಳೆಯರ ಮೇಲಿನ ದೌರ್ಜನ್ಯ ನಿರ್ಮೂಲನ ಕಾನೂನು ಅರಿವು ಅತ್ಯಗತ್ಯ: ಅನ್ನಪೂರ್ಣ

Date:

ಇತ್ತೀಚೆಗೆ ಮಹಿಳೆಯರು ಹಾಗೂ ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ವಾಗುತ್ತಿವೆ. ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಸಮುದಾಯದಲ್ಲಿ ಹೆಚ್ಚು ಜಾಗೃತಿ ಮೂಡಿಸುವುದು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ನಿರ್ಮೂಲನ ಕಾನೂನು ಅರಿವು ಅಗತ್ಯವಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾಧಿಕಾರಿ ಅನ್ನಪೂರ್ಣ ಹೇಳಿದರು.

ಕೊಪ್ಪಳದ ಕೃಷಿ ವಿಸ್ತರಣಾ ಕೇಂದ್ರದಲ್ಲಿ ಸಖಿ ಒನ್ ಸ್ಟಾಫ್ ಸೆಂಟರ್ ಘಟಕ, ಪೊಲೀಸ್ ಹಾಗೂ ವಿವಿಧ ಇಲಾಖೆಯ ಸಹಯೋಗದೊಂದಿಗೆ ಮಕ್ಕಳ ರಕ್ಷಣಾ ಕಾನೂನುಗಳು ಮತ್ತು ಅಂತರ್ಜಾಲದ ಶೋಷಣೆಯನ್ನು ತಡೆಗಟ್ಟುವ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಗಾರ, ಕಾನೂನು ಅರಿವು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

“ಅಂತಾರಾಷ್ಟ್ರೀಯ ಮಹಿಳೆಯರ ಮೇಲಿನ ದೌರ್ಜನ್ಯ ನಿರ್ಮೂಲನೆಗಾಗಿ‌ ಇಲಾಖೆಯ ಅಡಿಯಲ್ಲಿನ ಸಖಿ ಒನ್ ಸ್ಟಾಫ್‌ ಸೆಂಟರ್, ಮತ್ತು ಸಾಂತ್ವನ ಕೇಂದ್ರಗಳು ಹಾಗೂ ಮಹಿಳಾ ಸಬಲೀಕರಣ ಘಟಕ, ಕೌಟುಂಬಿಕ ಸೇವಾ ಕೇಂದ್ರಗಳು ಕಾರ್ಯನಿರ್ವಹಣೆಯನ್ನು ಅಚ್ಚುಕಟ್ಟಾಗಿ ಮಾಡುತ್ತಿವೆ. ಪೋಕ್ಸೊ ಪ್ರಕರಣಗಳ ಕುರಿತು ಶಾಲಾ ಕಾಲೇಜುಗಳಲ್ಲಿ ಹದಿಹರೆಯದ ಮಕ್ಕಳಿಗೆ ಜಾಗೃತಿ ಮಾಹಿತಿ ನೀಡುವಲ್ಲಿ ನಾವೆಲ್ಲ ಸದಾ ಕಾರ್ಯನಿರತರಾಗಬೇಕು” ಎಂದು ತಿಳಿವಳಿಕೆ ನೀಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸೈಬರ್ ಕ್ರೈಂ ವಿಭಾಗದ ಪಿಎಸ್ಐ ಆಂಜನೇಯ ಮಾತನಾಡಿ, “ಅಂತರ್ಜಾಲದ ಶೋಷಣೆಯನ್ನು ತಡೆಯಲು ಬಲವಾದ ಪಾಸ್‌ವರ್ಡ್‌ಗಳನ್ನು ಬಳಸಿ ಸಾಫ್ಟ್‌ವೇರ್‌ ನವೀಕರಿಸಿ ಫೈರ್‌ವಾಲ್ ಸ್ಥಾಪಿಸಿ, ನಂಬಲರ್ಹ ವಯಸ್ಕರೊಂದಿಗೆ ಸಂವಹನ ನಡೆಸಬೇಕು. ಮಕ್ಕಳನ್ನು ಸುರಕ್ಷಿತವಾಗಿರಿಸಲು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಖಾಸಗಿಯಾಗಿಡಿ ಮತ್ತು ಅಪರಿಚಿತರೊಂದಿಗೆ ಸಂವಾದ ನಡೆಸುವಾಗ ಎಚ್ಚರಿಕೆ ವಹಿಸಲು ಅವರಿಗೆ ಕಲಿಸಬೇಕು. ಶೋಷಣೆ ನಡೆದಾಗ ಸುರಕ್ಷಿತವಾಗಿ ವರದಿ ಮಾಡಲು ಸೂಕ್ತವಾದ ಮಾರ್ಗಗಳನ್ನು ಒದಗಿಸುವುದೂ ಕೂಡಾ ಅತ್ಯಗತ್ಯ” ಎಂದು ಸಾಕಷ್ಟು ನೈಜ‌ ಉದಾಹರಣೆ ಮತ್ತು ವಿಡಿಯೋ ಪ್ರದರ್ಶನದ ಮೂಲಕ ಮಾಹಿತಿ ತಿಳಿಸಿದರು.

ವಕೀಲ ಹನುಮಂತರಾವ್ ಮಾತನಾಡಿ, “ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಲ್ಲಿ 2012ರ ಡಿಸೆಂಬರ್ 29ರಂದು ನಡೆದ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣವೆಂದು ವ್ಯಾಪಕವಾಗಿ ಕರೆಯಲ್ಪಡುವ ಈ ಘಟನೆಯು ಭಾರತದ ಅತ್ಯಂತ ಶಕ್ತಿಶಾಲಿ ಸಾಮೂಹಿಕ ಚಳವಳಿಗಳಲ್ಲಿ ಒಂದನ್ನು ಹುಟ್ಟುಹಾಕಿತು. ನ್ಯಾಯ, ಕಾನೂನು ಸುಧಾರಣೆ ಮತ್ತು ಲಿಂಗಾಧಾರಿತ ಹಿಂಸಾಚಾರವನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿ ಎಲ್ಲ ಹಂತಗಳ ಜನರು ಬೀದಿಗಿಳಿದರು. ಈ ಆಕ್ರೋಶವು ಕೇವಲ ಭಾವನಾತ್ಮಕವಾಗಿರಲಿಲ್ಲ, ಪರಿವರ್ತನಾತ್ಮಕವಾಗಿತ್ತು. ಇದು ಕಾನೂನು ವ್ಯವಸ್ಥೆಯನ್ನು ಅದರ ವೈಫಲ್ಯಗಳನ್ನು ಪರೀಕ್ಷಿಸಲು ಒತ್ತಾಯಿಸಿತು. ಇತ್ತೀಚಿನ ಭಾರತೀಯ ಇತಿಹಾಸದಲ್ಲಿ ಅತ್ಯಂತ ಮಹತ್ವದ ಕಾನೂನು ಪರಿಷ್ಕರಣೆಗೆ ಕಾರಣವಾಯಿತು” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಜಮಖಂಡಿ | ಆರ್‌ಎಸ್‌ಎಸ್ ಕಾನೂನು ಬಾಹಿರ ನಡೆ ವಿರುದ್ಧ ಸರ್ಕಾರ ಕೂಡಲೇ ಕ್ರಮ ಜರುಗಿಸಬೇಕು: ದಸಂಸ

ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯಿದೆ 2005 ಹಾಗೂ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಕಾಯಿದೆ, 2013, ಒದಗಿಸುತ್ತದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ, 2012 ತಡೆಗಟ್ಟುವಲ್ಲಿ ಮೊದಲು ಮಹಿಳೆಯರು ಕಾನೂನನ್ನು ಅರಿತು ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಿಸಲು ಮುಂದಾಗಬೇಕು. ಸಂಕಷ್ಟಕ್ಕೆ ಒಳಗಾದ ಮಕ್ಕಳು ಮತ್ತು ಮಹಿಳೆಯರ ಅತ್ಯಾಚಾರ ಲೈಂಗಿಕ ಕಿರುಕುಳ, ಕುಟುಂಬದಲ್ಲಿ ದೈಹಿಕ ಮತ್ತು ಮಾನಸಿಕ ಹಿಂಸೆ, ವರದಕ್ಷಿಣೆ ಕಿರುಕುಳ, ಆಸಿಡ್ ದಾಳಿ, ಕ್ರೈಂ ಸೈಬರ್ ಅಪರಾಧಗಳ ಅಥವಾ ಪ್ರಕರಣಗಳಿಗೆ ಸಂಬಂದಿಸಿದ ಮಕ್ಕಳು ಅಥವಾ ಮಹಿಳೆಯರಿಗೆ ಸುರಕ್ಷತೆ ಭದ್ರತೆಯ ಸಹಕಾರ ನೀಡುವಲ್ಲಿ ವೈದ್ಯಕೀಯ ಚಿಕಿತ್ಸೆ, ಕಾನೂನು ನೆರವು, ಆಪ್ತ ಸಮಾಲೋಚನೆಯ ಮನೋಸ್ಥೈರ್ಯ ಹಾಗೂ ತಾತ್ಕಾಲಿಕ ಆಶ್ರಯವನ್ನು ಸಖಿ ಘಟಕದಲ್ಲಿ ಕಲ್ಪಿಸುವುದು” ಎಂದು ತಿಳಿಸಿದರು.

ಗಾಯಿತ್ರಿ, ಕಾರ್ಮಿಕ ಬಸವರಾಜ್, ಸೈಲಾನ್ ಬಾಷಾ, ಬಲರಾಮ್, ಸಕಿ ಘಟಕದ ವಕೀಲರು ಪುಷ್ಪ, ಶ್ರೀದೇವಿ ಗಡ್ಡದ್, ಫಾತಿಮಾ, ಸ್ನೇಹಸಂಸ್ಥೆ ಅಧಿಕಾರಿಗಳಾದ ಕು.ಶಕುಂತಲಾ, ಮಹಾಲಕ್ಷ್ಮಿ, ಗಾಯತ್ರಿ, ಆಶಾ ಕಾರ್ಯಕರ್ತರು, ಕೊಪ್ಪಳ‌ ತಾಲೂಕಿನ ಅಂಗನವಾಡಿ ಶಿಕ್ಷಕರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...