ಕೊಪ್ಪಳ | ಗಣೇಶ ವಿಸರ್ಜನೆ ದಿನ ಡಿಜೆ ಬಳಸಿದರೂ ಎಸ್‌ಪಿ ಮೌನ: ಸಾರ್ವಜನಿಕರ ಆಕ್ರೋಶ

Date:

ಗಣೇಶ ಚತುರ್ಥಿ ಪ್ರತಿಷ್ಠಾಪನೆ ದಿನ ಹಾಗೂ ವಿಸರ್ಜನೆ ದಿನ ಡಿಜೆ ಬಳಕೆಗೆ ಸುಪ್ರೀಂ ಕೋರ್ಟ್ ನಿಷೇಧದ ಆದೇಶ ಹೊರಡಿಸಿದ್ದರೂ ಕೊಪ್ಪಳದ ಹೊಸಪೇಟೆಯ ಬೈಪಾಸ್ ಹೆದ್ದಾರಿಯಲ್ಲಿ ಗಣೇಶ ವಿಸರ್ಜನೆ ದಿನ(ನಿನ್ನೆ ರಾತ್ರಿ 11-30ರವರೆಗೂ) ಡಿಜೆ ಬಳಕೆ ಮಾಡಿದ್ದರೂ ಎಸ್‌ಪಿ ಮೌನ ವಹಿಸಿರುವುದು ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಪೊಲೀಸರೇ ಸಾರ್ವಜನಿಕ ಶಾಂತಿ ಸಭೆ ಕರೆದು ಡಿಜೆ ಕುರಿತು ಸುಪ್ರೀಂಕೋರ್ಟ್ ಆದೇಶದ ಬಗ್ಗೆ ತಿಳಿ ಹೇಳಿದ್ದಾರೆ ಹಾಗೂ ಅದನ್ನು ಬಳಸಿ ಸಾರ್ವಜನಿಕರಿಗೆ ಕರ್ಕಶವಾದ ತೊಂದರೆಯಾಗಬಾರದೆಂದು ಹೇಳಿದ್ದಾರೆ. ಈಗ ಗಣೇಶ ವಿಸರ್ಜನೆ ದಿನ ಡಿಜೆ ಬಳಸಿದರೂ ಕೂಡ ಹತ್ತಿರದಲ್ಲೇ ಇರುವ ಗ್ರಾಮೀಣ ಹಾಗೂ ನಗರ ಪೊಲೀಸ್ ಠಾಣೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಮೌನವಹಿಸಿರುವುದಬನ್ನು ಸಾರ್ವಜನಿಕರು ಖಂಡಿಸಿದ್ದಾರೆ.

ಕೆಲವು ದಿನಗಳ ಹಿಂದೆಯೂ ಕೊಪ್ಪಳ ತಾಲೂಕಿನ ಭಾಗ್ಯನಗರದಲ್ಲಿ ಶನಿವಾರ ಸಂಜೆ 6:30ರಿಂದ ಆರಂಭವಾದ ಡಿಜೆ ಶಬ್ಧ ರಾತ್ರಿ 12:15ರವರೆಗೂ ಬಳಕೆ ಮಾಡಲಾಗಿತ್ತು. ಈ ಕುರಿತು ‘ಈ ದಿನ.ಕಾಮ್’ನಲ್ಲಿ ವರದಿಯಾಗಿತ್ತು. ಪೊಲೀಸರು ಸಂಘಟನೆಗಳ ಹಾಗೂ ಜನಪ್ರತಿನಿಧಿಗಳ ಒತ್ತಡದ ಒಲೈಕೆಗೊಳಗಾದರೇ? ಎಂಬುದನ್ನು ಕೊಪ್ಪಳ ಹಿರಿಯ ನಾಗರಿಕರು ಸಂಶಯವನ್ನು ವ್ಯಕ್ತಪಡಿಸಿತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಧಾರ್ಮಿಕ ಮುಖಂಡರ ಹಾಗೂ ಎಲ್ಲ ಧಾರ್ಮಿಕ ಸಂಘಟನೆಗಳಿಗೆ ಶಾಂತಿ ಸಭೆ ಕರೆದು ಡಿಜೆ ಸಿಸ್ಟಮ್‌ಗಳನ್ನು ಬಳಸುವಂತಿಲ್ಲವೆಂದು ಕಡ್ಡಾಯವಾಗಿ ಸೂಚನೆ ನೀಡಿದ್ದರು. ಆದರೂ ನಗರದಲ್ಲಿ ಡಿಜೆ ಸಿಸ್ಟಮ್‌ನ ಕರ್ಕಶ ಶಬ್ದಕ್ಕೆ ಹೃದ್ರೋಗ ಪೀಡಿತರು, ಗರ್ಭಿಣಿಯರು, ಹಸುಗೂಸುಗಳು ಭಯಗೊಳ್ಳುವಂತ ವಾತಾವರಣ ಸೃಷ್ಟಿಯಾಗಿತ್ತು” ಎಂದು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬಂಟ್ವಾಳ | ಲಂಚ ಸ್ವೀಕಾರ ಪ್ರಕರಣ: ಲೋಕಾಯುಕ್ತ ಬಲೆಗೆ ಪೆರುವಾಯಿ ಗ್ರಾ.ಪಂ ಅಧ್ಯಕ್ಷೆ, ಬಿಲ್ ಕಲೆಕ್ಟರ್‌

“ಡಿಜೆಯ ಅತಿಯಾದ ಶಬ್ದಕ್ಕೆ ಮನೆಯೊಳಗಿನ ಪರಿಕರಗಳು ಅಲುಗಾಡುತ್ತಿದ್ದವು. ಮನೆಯ ಅಂಗಳಗಳಲ್ಲಿ ನಡುಗುವಂತಹ ಶಬ್ದ ಮಾಡುತ್ತಿದ್ದವು. ನ್ಯಾಯಾಲಯದ ನಿಷೇಧದ ಆದೇಶವಿದ್ದರೂ ಪೊಲೀಸ್ ಮೌನವಹಿಸಿದ್ಯಾಕೆ? ಇದಕ್ಕೆ ಜಿಲ್ಲಾ ವರಿಷ್ಠಾಧಿಕಾರಿ ಡಾ. ರಾಮ್ ಎಲ್ ಅರಸಿದ್ದಿಯವರ ಗಮನಕ್ಕೆ ಬಂದಿಲ್ಲವೇ ಅಥವಾ ಸುಪ್ರೀಂಕೋರ್ಟ್‌ನ ಆದೇಶ ಸರಿಯಾಗಿ ಓದಿಲ್ಲವೆ” ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...