ಜಿಲ್ಲಾಡಳಿತ ಭವನದ ಹಿಂಬಾಗ ಇರುವ ಪರಿಶಿಷ್ಟ ಜಾತಿ ವಸತಿ ನಿಲಯದ ಅವ್ಯವಸ್ಥೆ ಹಾಗೂ ಮೂಲಭೂತ ಸೌಕರ್ಯವೊದಗಿಸುವಂತೆ ವಸತಿ ನಿಲಯದ ವಿದ್ಯಾರ್ಥಿಗಳಿಂದ ಕೊಪ್ಪಳ ಜಿಲ್ಲಾಡಳಿತ ಭವನದ ಮುಂದೆ ದಿಢೀರ ಪ್ರತಿಭಟನೆ ನಡೆಸಿದರು.
ನಗರದ ಎಸ್‌ಟಿ/ಎಸ್‌ಸಿ ವಸತಿ ನಿಲಯ ವಿದ್ಯಾರ್ಥಿಗಳು ಶೌಚಾಲಯ, ಕುಡಿಯುವ ನಿರಿನ ಸಮಸ್ಯೆ ಹಾಗೂ ಊಟದ ಸಮಸ್ಯೆ ಸೇರೀದಂತೆ ಮೂಲಭೂತ ಸೌಕರ್ಯಗಳ ಕೊರತೆ ಕುರಿತು ರಾತ್ರಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ವಿದ್ಯಾರ್ಥಿಗಳ ದಿಢೀರ ಪ್ರತಿಭಟನೆ ಮಾಹಿತಿ ತಿಳಿದಿ ಅಪಾರ ಜಿಲ್ಲಾಧಿಕಾರಿ ಭೇಟಿ ಸಮಸ್ಯೆಗಳನ್ನು ಆಲಿಸಿ ತಾವೇ ಖುದ್ದಾಗಿ ಭೇಟಿ ನೀಡಿ ಸಮಸ್ಯೆ ಪರಿಹರಿಸಲಾಗುವುದೆಂದು ಭರವಸೆ ನೀಡಿದ ಮೇಲೆ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು.
ಶಿವಮೂರ್ತಿ, ಶರಣು ಪಾಟೀಲ್, ಹೊನ್ನೂರು, ಖಾಸಿಂ, ಹನುಮೇಶ, ಕಲ್ಲೇಶ್, ರಾಕೇಶ್ ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳು ಇದ್ದರು.





