ಡಾ. ಬಿ ಆರ್ ಅಂಬೇಡ್ಕರ್ ಪರಿನಿಬ್ಬಾಣದ ದಿನದ ಅಂಗವಾಗಿ ತಾವರಗೇರಾದಲ್ಲಿ ಕರ್ನಾಟಕ ಪ್ರತಿಭಾ ಅಕಡೆಮಿಯು ಕೊಪ್ಪಳ ಜಿಲ್ಲೆಯ ಎಸ್‌ಸಿ/ಎಸ್‌ಟಿ ಹಾಗೂ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕುಷ್ಟಗಿ ತಾಲೂಕಿನ ತಾವರಗೇರಾ ಗ್ರಾಮದಲ್ಲಿ ಕೊಪ್ಪಳ ಜಿಲ್ಲಾ ಪ್ರಗತಿಪರ ಸಂಘಟನೆಗಳು, ಮಾನವ ಬಂಧುತ್ವ ವೇದಿಕೆ, ವಿ ಎಚ್ ತಳವಾರ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ಹಾಗೂ ಬಸಮ್ಮ ಮರಿಯಪ್ಪ ತಾಳಕೇರಿ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ಸಹಯೋಗದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭ-2025 ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ.ಎ ಬಿ ರಾಮಚಮದ್ರಪ್ಪ ಮಾತನಾಡಿ, “ನಮ್ಮ ಜನ, ಶ್ರೀಮಂತರು ಗುಡಿ ಕಟ್ಟುವವರಿಗೆ ದುಡ್ಡು ಕೊಡುತ್ತಾರೆ, ಅದರೆ, ಶಾಲೆ, ಗ್ರಂಥಾಲಯ ಕಟ್ಟಿಸುವುದಕ್ಕೆ ದುಡ್ಡು ಕೊಡುವುದಿಲ್ಲ. ಅದರೆ, ಸತೀಶ್ ಜಾರಕಿಹೊಳಿ ಅವರನ್ನು ಗುಡಿ ಕಟ್ಟುವುದಕ್ಕೆ ಹಣ ಕೇಳಿದರೆ ಯಾರಿಗೂ ಕೊಡುವುದಿಲ್ಲ, ಬೈದು ಕಳಿಸುತ್ತಾರೆ. ಅಂದರೆ, ದಲಿತ, ಹಿಂದುಳಿದ ಹಾಗೂ ಶೋಷಿತ ಸಮುದಾಯ ಮಕ್ಕಳು ಶೈಕ್ಷಣಿಕವಾಗಿ ಜಾಗೃತವಾಗಬೇಕು. ಅವರು ಶಿಕ್ಷಣದಲ್ಲಿ ಪ್ರಗತಿ ಹೊಂದಿ ಆರ್ಥಿಕವಾಗಿಯೂ ಸಬಲರಾಗಬೇಕು. ಅಂಬೇಡ್ಕರ್ ಅವರನ್ನು ಹೆಚ್ಚು ತಿಳಿಯಬೇಕು. ಸಂವಿಧಾನದ ಮಹತ್ವ ತಿಳಿಯಬೇ ಎಂಬುದು ಸತೀಶ್ ಜಾರಕಿಹೊಳಿ ಅವರ ಆಶಯವಾಗಿದೆ” ಎಂದರು.
“ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಕರೆದರೆ ಅದಕ್ಕೆ ಉಚಿತ ತರಬೇತಿ ಕೊಡಲು ತಾವರಗೇರಾ ಗ್ರಾಮದ ಬುದ್ಧ ವಿಹಾರದಲ್ಲಿ ಉಚಿತ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ‘ಸನಾತನ ಧರ್ಮ ಅಪಾಯದಲ್ಲಿದೆ ಕಾಪಾಡಬೇಕಾಗಿದೆ’ ಎಂದು ಹೆಳುತ್ತಾರೆ. ಆದರೆ, ಒಬ್ಬ ಶೂದ್ರ ವ್ಯಕ್ತಿ ಪ್ರದಾನಿಯಾಗಿದ್ದಾರೆಂದರೆ ಅದು ಅಂಬೇಡ್ಕರ್ ರಚಿಸಿದ ಸಂವಿಧಾನ ಕಾರಣ, ಸನಾತನ ಧರ್ಮ ಅಲ್ಲ ಎಂಬುದನ್ನೇ ಮರೆತಿದ್ದಾರೆ” ಎಂದರು.
ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, “ಸನಾತನ ಧರ್ಮ ಬೆಂಬಲಿಸುವುದೆಂದರೆ ಮತ್ತೆ ನಾವು ಹಿಂದಕ್ಕೆ ಹೋಗುವುದು ಎಂದರ್ಥ. ಅಂಬೇಡ್ಕರ್ ಅವರ ಸಂವಿಧಾನ ಇರುವುದರಿಂದಲೇ ನಾವೆಲ್ಲ ಸಮಾನವಾಗಿರಲು ಸಾದ್ಯವಾಗಿದೆ. ಗಾಂಧಿ ಮತ್ತು ಅಂಬೇಡ್ಕರ್ ಮಧ್ಯ ವೈರುದ್ಯ ಹಾಗೂ ಧ್ವೇಷ ಹುಟ್ಟಿಸುವಂತ ಕೆಲಸ ಮಾಡುತ್ತಿದ್ದಾರೆ. ಇದು ದೊಡ್ಡ ದುರಂತ. ಹೋರಾಟದ ಮೂಲಕ ನಮಗೆ ಅಂಬೇಡ್ಕರ್ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಯಿತು. ತಮ್ಮ ಆರೋಗ್ಯವನ್ನು ಬಲಿಕೊಟ್ಟು ಸಂವಿಧಾನ ರಚಿಸಿದವರು ಬಾಬಾ ಸಾಹೇಬ್‌ರು. ಸಂವಿಧಾನಕ್ಕೆ ನಮಸ್ಕರಿಸುವ ಮೋದಿ ಅವರು ಸಂವಿಧಾನ ಪ್ರತಿ ದೆಹಲಿಯಲ್ಲಿ ಸುಡುತ್ತಾರೆ. ಅಂತರವರ ಮೇಲೆ ಕ್ರಮ ತೆಗೆದುಕೊಳ್ಳದ ಪ್ರಧಾನಿ ನರೇಂದ್ರ ಮೋದಿ ಇಬ್ಬದಿತನ ನೀತಿ ಗೊತ್ತಾಗುತ್ತದೆ” ಎಂದರು.
“ಹೆತ್ತವರನ್ನು ಪ್ರೀತಿ ಗೌರವದಿಂದ ಕಾಣಬೇಕು. ಅವರ ಪಾದಕ್ಕೆ ನಮಸ್ಕರಿಸುವುದರಿಂದ ಯಾವುದೇ ಪ್ರಯೋಜನ ಇಲ್ಲ. ಮೀಸಲಾತಿಯನ್ನು ಮಾಡಿರುವುದು ತಳ ಸಮುದಾಯಗಳಿಗೆ ಶೈಕ್ಷಣಿಕ ಪ್ರೋತ್ಸಾಹ ನೀಡುವುದಾಗಿದೆ. ಸಮಾನತೆಯ ವ್ಯಕ್ತಿಯ ಮಧೆ ಸ್ಪರ್ಧೆ ಏರ್ಪಡಬೇಕು. ಅಸಮಾನತೆಯಿಂದ ಇರುವವರ ಜತೆ ಸ್ಪರ್ಧ ಏರ್ಪಡಬಾರದು. ಬ್ರಿಟಿಷರು ಸಾರ್ವತ್ರಿಕ ಶಿಕ್ಷಣ ಒದಗಿಸಿಕೊಟ್ಟಿದ್ದನ್ನು ಪ್ರಧಾನಿಗಳು ಮರೆತಿದ್ದಾರೆ. ಕ್ರೈಸ್ತ ಮಿಶನರಿಗಳು ಇಲ್ಲದಿದ್ದರೆ ಶೋಷಿತರು ಶೀಕ್ಷಣದಿಂದ ಬಹುದೂರ ಇರುತ್ತಿದ್ದರು. ಯುದ್ಧದಿಂದ ನಾಶವೇ ಹೊರತು ಯಾವ ಪ್ರತಿಫಲವಿಲ್ಲ. ಫೇಸ್‌ಬುಕ್ ಮೂಲಕ ದ್ವೇಷ, ಹಿಂಸೆ ಹರಡುವವರು ಗೊಬೆಲ್ಸ್‌ನ ಆರಾಧಕರು ಯಾವತ್ತೂ ಸುಳ್ಳನ್ನು ಹರಡುತ್ತಾರೆ” ಎಂದು ವಿಷಾದ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ರೈತರು ಸಮಗ್ರ ಕೃಷಿ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡಬೇಕು: ಸಿಎಂ ಸಿದ್ದರಾಮಯ್ಯ
ರಾಮಣ್ಣ ಬೇರಗಿ, ಭೀಮಣ್ಣ ಹಾವಳ, ಸಾವಿತ್ರಿ ಮುಜುಮದಾರ, ಶುಕರಾಜ ತಾಳಕೇರಿ, ಲಿಂಗರಾಜ ನವಲಿ, ರವೀಂದ್ರ ನಾಯಕರ, ರವಿ ಪಾಟೀಲ್, ಆದೇಶ ನಾಯಕ, ಡಾ.ಲಿಂಗಣ್ಣ ಜಂಗಮರಹಳ್ಳಿ, ಮಲ್ಲಿಕಾರ್ಜುನ ಗೋನಾಳ, ಮೀನಾಕ್ಷಿ ಎಸ್ ಎಚ್, ಬೆಟ್ಟಪ್ಪ ಯತ್ನಟ್ಟಿ, ಬಸವಪ್ಪ ಚವ್ಹಾಣ, ಈಶಪ್ಪ ದೊಡ್ಡಮನಿ, ರಣದಪ್ಪ ಸಂಕಣ್ಣವರ ಹಾಗೂ ನೂರಾರು ವಿದ್ಯಾರ್ಥಿಗಳು, ಗ್ರಾಮಸ್ಥರು ಇದ್ದರು.





