ಕೊಪ್ಪಳ | ಮಠಾಧೀಶರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು:  ತೋಂಟದಾರ್ಯ ಸ್ವಾಮಿಜಿ

Date:

“ಮಠದ ಸ್ವಾಮಿಗಳಾದವರು ತಮ್ಮನ್ನು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳದಿದ್ದಲ್ಲಿ ಅವರ ಬದುಕು ನಿಷ್ಪಲವಾಗಲಿದೆ. ಹಾಗಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು” ಎಂದು ಗದುಗಿನ ತೋಂಟದಾರ್ಯ ಸ್ವಾಮಿಗಳು ಅಭಿಮತ ವ್ಯಕ್ತಪಡಿಸಿದರು.

ಕೊಪ್ಪಳ ನಗರವನ್ನು ಸುತ್ತುವರಿದಿರುವ ಕಾರ್ಖಾನೆ ವಿಸ್ತರಣೆ  ಹಾಗೂ ನೂತನ ಕಾರ್ಖನೆಗಳ ವಿರೋಧಿ ಜಂಟಿ ಕ್ರಿಯಾ ವೇದಿಕೆಯ ಅನಿರ್ಧಿಷ್ಟಾವಧಿ ಧರಣಿಯ 18ನೇ ದಿನದಂದು ಗದಗಿನ ಶ್ರೀ ತೋಂಟದಾರ್ಯ ಶ್ರೀಗಳು ಧರಣಿ ಸ್ಥಳಕ್ಕೆ ಭೇಟಿ ಕೊಟ್ಟು ಬೆಂಬಲ ನೀಡಿದರು.

ಕಾರ್ಖಾನೆಗಳಿಂದ ಸೂಸುವ ಹೊಗೆ ಹಾಗೂ ಧೂಳಿನಿಂದ ನರಕಯಾತನೆ ಅನುಭವಿಸುತ್ತಿರುವ ಗ್ರಾಮಗಳಿಗೆ ಸ್ವಾಮಿಜಿಯವರು ಭೇಟಿ ನೀಡಿ ಜನರೊಂದಿಗೆ ಸಂವಾದ ನಡೆಸಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಜನರ ಉಸಿರಾಟಕ್ಕ ಬಹುಮುಖ್ಯವಾಗಿ ಮನುಷ್ಯನಿಗೆ ಬೇಕಾದುದ್ದು, ಪರಿಶುದ್ಧವಾದ ಗಾಳಿ, ನೀರು. ಇದು ಇದ್ದರೆ ಮಾತ್ರ ಆರೋಗ್ಯಕರವಾಗಿರಲು ಸಾದ್ಯ. ಕೊಪ್ಪಳ ಜಿಲ್ಲೆ ಕಾರ್ಖಾನೆಗಳಿಂದ ಆವರಿಸಿರುವುದರಿಂದ ಎಲ್ಲವೂ ಅಶುದ್ಧವಾಗಿದೆ. ಹಿರೇಬಗನಾಳ, ಚಿಕ್ಕ ಬಗನಾಳ, ಕಾಸನಕಿಂಡಿ, ಅಲ್ಲನಗರ ಹಾಗೂ ಗಿಣಿಗೇರಾ ಮುಂತಾದ ಹಳ್ಳಿಗಳಿಗೆ ಹೋಗಿ ಬಂದೆ, ಅಲ್ಲಿಯ ವಾತಾವರಣ ಗಮನಿಸಿದಾಗ ನನಗೆ ಭಯವಾಯ್ತ. ಬೇರೆ ಬೇರೆ ಮಾರಕ ರೋಗಗಳಿಗೆ ತುತ್ತಾದ ಜನರನ್ನೂ ಮಾತಾಡುಸಿದಾಗ ಅವರ ನೋವು, ಸಂಕಟ ವ್ಯಕ್ತವಾದದ್ದು ಭಯವೆನಿಸಿತು” ಎಂದು ಅತಂಕ ವ್ಯಕ್ತಪಡಿಸಿದರು.

“ಕಾರ್ಖಾನೆ ವಾಹನಗಳ ದಟ್ಟನೆಯಿಂದ ಜನ ಕಂಗೆಟ್ಟಿದ್ದಾರೆ. ಜನಪ್ರತಿನಿಧಿಗಳು ಬಂಡವಾಳಶಾಹಿಗಳ ಹಿಡಿತದಲ್ಲಿದ್ದಾರೆ. ಮಠಾದೀಶರು ಇಂತಹ ಜನರ ಬದುಕಿಗಾಗಿ ಹೋರಾಟದ ಮುನ್ನಲೆಗೆ ಬಂದರೆ ‘ಅವರಿಗ್ಯಾಕೆ ಬೇಕು ಇದೆಲ್ಲ?’ ಎಂದು ವ್ಯಂಗ ಮಾಡುತ್ತಾರೆ. ಆದರೆ, ನಾವೂ ಕೂಡ ಇದೆ ಅಶುದ್ಧ ಗಾಳಿಯನ್ನೇ ಸೇವಿಸುತ್ತುದ್ದೆವೆ ಎಂಬುದನ್ನು ಮರಿಬಾರದು” ಎಂದರು.

“ಕೊಪ್ಪಳ ಪರಿಶುದ್ಧ ಗಾಳಿಯನ್ನು ಸೂಸುವಲ್ಲಿ 4ನೇ ಸ್ಥಾನ’ದಲ್ಲಿದೆ ಎಂದು ಪತ್ರಿಕೆಯಲ್ಲಿ ಸುದ್ಧಿ ಬಂದಿದೆ; ಆದರೆ, ರಾಷ್ಟ್ರೀಯ ಮಾದ್ಯಮಗಳು ಬಾಧಿತ ಗ್ರಾಮಗಳಿಗೆ  ಹೋಗಿಲ್ಲ; ಗೋಗಿದ್ದರೆ ಇಂತಹ ಸುದ್ಧಿ ಪ್ರಕಟಿಸುತ್ತಿರಲಿಲ್ಲ. ಈ ಹೋರಾಟ ಜನಾಂದೋಲನವಾಗಿ ಹೋರಾಟವಾಗಬೇಕು” ಎಂದರು.

“ಜಿಲ್ಲೆಯ ನಾಗರಿಕರ ಹಿತಕ್ಕಾಗಿ, ಆರೋಗ್ಯಕ್ಕಾಗಿ ನಡೆಯುತ್ತಿರುವ ಈ ಹೋರಾಟವನ್ನು ವ್ಯಾಪಕವಾಗಿ ಮಾದ್ಯಮಗಳು ಸುದ್ಧಿ ಮಾಡಬೇಕು. ಇದರಿಂದ ಮಾಧ್ಯಮಗಳು ಜನರಪರ ಮಾಧ್ಯಮವಾಗುತ್ತವೆ. ಪರಿಸರದ ಬಗ್ಗೆ ಕಾಳಜಿವುಳ್ಳವರು ಸಾತ್ವಿಕ ಶಕ್ತಿಯಾಗಿ, ಜೀವರಪರ ಕಾಳಜಿ ಹಾಗೂ ಪರಿಸರ ಕಾಳಜಿವುಳ್ಳವರು ಒಟ್ಟಾಗಿ ಜನಾಂದಾಲೋನ ಹೋರಾಟವನ್ನಾಗಿ ಬೃಹತಾಗಿ ಕಟ್ಟಬೇಕು” ಎಂದರು

“ಗವಿ ಶ್ರೀಗಳನ್ನು ಭೇಟಿಯಾಗಿ ಹೊಗೆ ಸೂಸುವ ಕಾರ್ಖಾನೆಗಳ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ಮತ್ತೊಮ್ಮ ಹಮ್ಮಿಕೊಳ್ಳಲು ಆಹ್ವಾನ ನೀಡೋಣ ಅವರ ಮುಂದಾಳತ್ವದಲ್ಲಿಯೇ ಈ ಹೋರಾಟ ಸಜ್ಜುಗೊಳಿಸೋಣ. ಎಲ್ಲ ಮಠಾದೀಶರನ್ನು ಕರೆದುಕೊಂಡು ಬರುವ ಕೆಲಸ ಮಾಡೋಣ. ಅದರ ಜವಾಬ್ದಾರಿ ನಾನೂ ವಹಿಸಿಕೊಳ್ಳುತ್ತೇನೆ. ಶಾಲಾ-ಕಾಲೇಜ್ ವಿದ್ಯಾರ್ಥಿಗಳು ಭಾಗವಹಿಸಬೇಕು. ಹೊರಾಟಗಾರರನ್ನ ಕಂಪನಿಗಳ ಗುಂಡಾಗಳು ಹತ್ತಿಕ್ಕುವ ಕೆಲಸ ಮಾಡುತ್ತಿವೆ; ಒಬ್ಬ ರೈತನ ಕಾಲು ಮುರಿದಿರುವ ಘಟನೆ ಕೇಳಿದೆ ಇದರಿಂದ ಕುಗ್ಗ ಬೇಡಿ. ಹೋರಾಟಗಾರರಿಗೆ ಆತ್ಮ ಸ್ಥೈರ್ಯ ತುಂಬಿ, ಬೃಹತ್ ಹೋರಾಟಕ್ಕೆ ಸಿದ್ಧಗೊಳಿಸಿ ನಾನು ಮಠಾದೀಶರನ್ನ ಕರೆದುಕೊಂಡು ಬರ‌್ತೇನಿ” ಎಂದು ಭರವಸೆ ನಿಡಿದರು.

ಅಲ್ಲಮಪ್ರಭು ಬೆಟ್ಟದೂರು, ಜ್ಯೋತಿ ಗೊಂಡಬಾಳ, ಮಂಜುನಾಥ ಗೊಂಡಬಾಳ, ಕೆ.ಬಿ.ಗೋನಾಳ, ಗಾಳೆಪ್ಪ ಮುಳಗಿ, ಶಿವಪ್ಪ ಹಡಪದ, ಬಸವರಾಜ್ ಶೀಲವಂತರ, ಮಂಗಳೇಶ ರಾಠೋಡ್, ಮೆಹಬೂಬ್ ರಾಯಚೂರು, ಮಾದೇವಪ್ಪ, ಶರಣು ಗಡ್ಡಿ, ಶರಣು ಪಾಟೀಲ್, ವಿಜಯ ಲಕ್ಷ್ಮೀ, ಹಾಗೂ ಇತರರು.

WhatsApp Image 2024 10 05 at 15.43.57 586b60ff min e1728123396595
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...