ಯಲಬುರ್ಗ ತಾಲೂಕಿನ ಮಲಕಸಮುದ್ರ ಗ್ರಾಮದ ಕೆರೆಯಲ್ಲಿ ಮೀನು ಹಿಡಿಯಲು ತೆಪ್ಪದಲ್ಲಿ ತೆರಳಿದ್ದ ಮೀನುಗಾರರು ಜೋರಾದ ಗಾಳಿ ಬೀಸಿದ ಪರಿಣಾಮ ನೀರಿನಲ್ಲಿ ಮುಳುಗಿ 4 ಜನರಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಮೀನು ಹಿಡಿಯಲು ಹೋದ ಸಂದರ್ಭದಲ್ಲಿ ಜೋರಾದ ಗಾಳಿ ಬೀಸಿದ್ದರಿಂದ ತೆಪ್ಪ ಮಗುಚಿ ಬಿದ್ದಿದ್ದು 4ಜನರಲ್ಲಿ ಇಬ್ಬರು ಇಜಿ ದಡ ಸೇರಿದ್ದಾರೆ. ವಜ್ರಬಂಡಿ ಗ್ರಾಮದ ಫಕೀರಸಾಬ ಖಾಜಾಸಾಬ ಮುಜಾವರ (40) ಹಾಗೂ ಗೂತ್ತೂರು ಗ್ರಾಮದ ಶರಣಪ್ಪ ಹೇಮಪ್ಪ ಎಮ್ಮಿಯವರ (32) ನೀರುಪಾಲಾಗಿ ಮೃತಪಟ್ಟಿದವರು ಎಂದು ಹೇಳಲಾಗಿದೆ.
ಸ್ಥಳಕ್ಕೆ ಪೋಲಿಸ್ ವರಿಷ್ಠಾಧಿಕಾರಿ ಡಾ.ರಮ ಎಲ್ ಅರಸಿದ್ಧಿ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಪರಿಶೀಲಿಸಿದಾಗ ಶವಗಳು ಪತ್ತೆಯಾಗಿವೆ.





