ಬುಲೆರೋ ವಾಹನ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಗಂಗಾವತಿ ತಾಲ್ಲೂಕು ಇಂದರಗಿ ಗ್ರಾಮದ ಬಳಿ ನಡೆದಿದೆ.
ಮೃತಪಟ್ಟಿರುವ ರಾಜಾಹುಸೇನ್ (18) ಗಂಗಾವತಿ ತಾಲ್ಲೂಕು ಶ್ರೀರಾಮನಗರ, ಕೊಪ್ಪಳ ತಾಲೂಕಿನ ಹೊಸಹಳ್ಳಿ, ವಾಜಿದ್ (17) ಮತ್ತು ಆಶಿಫ್ (18) ಎಂದು ಗುರುತಿಸಲಾಗಿದೆ.
ಮೂವರು ಯುವಕರು ದ್ವಿಚಕ್ರ ವಾಹನದ ಮೂಲಕ ಶ್ರೀರಾಮನಗರದಿಂದ ಹೊಸಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆಯಲ್ಲಿ ಗಂಗಾವತಿ – ಕೊಪ್ಪಳ ಹೆದ್ದಾರಿಯ ಮಾರ್ಗದ ಇಂದರಗಿ ಗ್ರಾಮದ ಬಳಿ ಬುಲೆರೋ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಘಟನೆ ಸಂಭವಿಸಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮನರೇಗಾ ಹೆಸರು ಬದಲಾವಣೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ
ಘಟನೆ ನಂತರ ಬುಲೆರೋ ವಾಹನ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಮುನಿರಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





