ಕೊಪ್ಪಳ | ಸಂವಿಧಾನ ಬದಲಿಸಬೇಕೆನ್ನುವ ಮನುವಾದಿಗಳ ವಿರುದ್ಧ ಹೋರಾಟ ಅಗತ್ಯ: ಕಾಮ್ರೆಡ್ ಭಾರದ್ವಾಜ್

Date:

ಡಾ. ಬಿ ಆರ್‌ ಅಂಬೇಡ್ಕರ್‌ ಅವರು ರಚಿಸಿರುವ ಸಂವಿಧಾನವನ್ನೇ ಬದಲಿಸಬೇಕು ಎಂದು ಬಹಿರಂಗವಾಗಿ ಹೇಳಿಕೆ ಕೊಡುವ ಮನುವಾದಿಗಳ ವಿರುದ್ಧ ನಾವು ಹೋರಾಟ ಮಾಡುವುದು ಪ್ರಸ್ತುತ ಅತ್ಯಗತ್ಯವಾಗಿದೆ ಎಂದು ಹಿರಿಯ ಹೋರಾಟಗಾರ ಕಾಮ್ರೆಡ್‌ ಭಾರದ್ವಾಜ್ ಅಭಿಪ್ರಾಯಪಟ್ಟರು.

ಗಂಗಾವತಿಯಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಅಂಬೇಡ್ಕರ್ ಸರ್ಕಲ್‌ನಲ್ಲಿ ಎದ್ದೇಳು ಕರ್ನಾಟಕ ಹಾಗೂ ಸಂವಿಧಾನ ಸಂರಕ್ಷಣಾ ಪಡೆ ವತಿಯಿಂದ ನಡೆದ ʼಸಂವಿಧಾನ ಯಾನʼಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, “ಈ ದೇಶಕ್ಕೆ ಸಂವಿಧಾನ ಬರುವ ಪೂರ್ವದಲ್ಲಿ ದಲಿತ, ಶೋಷಿತ ಸಮುದಾಯಗಳ ಧ್ವನಿಯನ್ನು, ಸಮಾನತೆಯನ್ನ ಹಾಗೂ ಪ್ರಶ್ನಿಸುವ ಹಕ್ಕನ್ನು ಕಿತ್ತುಕೊಳ್ಳಲಾಗಿತ್ತು. ಇವತ್ತು ಸಂವಿಧಾನ ನಮಗೆ ಸಮಾನತೆಯ ಜೊತೆಗೆ ಸಾಮಾಜಿಕವಾಗಿ, ನ್ಯಾಯಕ್ಕಾಗಿ ಹೋರಾಡುವ ಹಕ್ಕನ್ನು ಕೊಟ್ಟಿದೆ. ಸಂವಿಧಾನ ಬದಲಿಸಲು ಸಂಚು ನಡೆದಿರುವುದು ಇಂದು ನಿನ್ನೆಯದಲ್ಲ. ಜಾರಿ ಬಂದ ದಿನದಿಂದಲೇ ನಡೆದಿದೆ. ಇಂತಹ ಕುತಂತ್ರಗಳ ವಿರುದ್ಧ ಒಗ್ಗಾಟಾಗಿ ಹೋರಾಟ ಮಾಡಬೇಕು” ಎಂದು ಕರೆ ನೀಡಿದರು.

ಎದ್ದೇಳು ಕರ್ನಾಟಕ ಸಂಘಟನೆಯ ಜಿಲ್ಲಾ ಸಂಚಾಲಕ ಸಿರಾಜ್ ಅಹ್ಮದ್ ಮಾತನಾಡಿ, “ಭಾರತದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ. ಸಂವಿಧಾನ, ರೈತ, ಸೈನಿಕ, ದೇಶದ ಸುರಕ್ಷತೆ ಹೆಸರಿನಲ್ಲಿ ಅಧಿಕಾರಕ್ಕೆ ಬಂದ‌ ಕೇಂದ್ರ ಸರ್ಕಾರದ ಸಚಿವರು, ಪಕ್ಷದ ನಾಯಕರು ಬಹಿರಂಗವಾಗಿ ಸಂವಿಧಾನ ಬದಲಿಸುವುದಕ್ಕೆ ನಾವು ಬಂದಿರುವುದು ಎಂದು ಹೇಳಿಕೆ ಕೊಡುತ್ತಿವೆ. ಇವರ ಮನುವಾದ ಕಾನೂನು ಜಾರಿಗೆ ತಂದು ಈ ದೇಶದ ಮೂಲ ನಿವಾಸಿಗಳನ್ನ ಗುಲಾಮರನ್ನಾಗಿ ಮಾಡುವುದು ಅವರ ಸ್ಪಷ್ಟ ಉದ್ದೇಶವಾಗಿದೆ. ಹಾಗಾಗಿ ನಾವು ಇಂದಿನ ಸಂವಿಧಾನ ವಿರೋಧಿಗಳ ವಿರುದ್ಧ ಬೀದಿಗೆ ಬಂದು ಹೋರಾಡಲು ಸಿದ್ಧವಾಗಬೇಕು” ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ರೈತ ಮುಖಂಡ ಶಂಕರ್ ಪಾಟೀಲ್ ಮಾತನಾಡಿ, “ಸಂವಿಧಾನ ನಮಗೆ ಶಿಕ್ಷಣದ ಹಕ್ಕು, ಸಂಘಟಿಸುವ ಹಕ್ಕು, ಹೋರಾಟದ ಹಕ್ಕೂ ಕೊಟ್ಟಿದೆ. ಅದು ಅಂಬೇಡ್ಕರ್ ಅವರ ಶ್ರಮದ ಫಲ. ನಮ್ಮ ಹಕ್ಕಿಗಾಗಿ ಹೋರಾಡುವ ರೈತರನ್ನ ದೇಶದ್ರೋಹಿಗಳು, ಖಲಿಸ್ತಾನಿಗಳು ಎಂದು ಕರೆದು ಅನ್ನದಾತನಿಗೆ ಕೇಂದ್ರ ದ್ರೋಹ ಬಗೆಯುತ್ತಿದೆ. ಅವೈಜ್ಞಾನಿಕ ಕಾನೂನು ಜಾರಿಗೆ ತರುವುದರ ಮೂಲಕ ಸಂವಿಧಾನಕ್ಕೆ ಅನ್ಯಾಯ ಮಾಡಿದೆ. ನಿರಂತರ ಸಂವಿಧಾನ ಒಪ್ಪಿಗೆ ಇಲ್ಲ ಅಂತ ಹೇಳುವ ಮೂಲಕ ಸಮಾನತೆ ಕೊಟ್ಟ ಸಂವಿಧಾನದ ಪ್ರತಿ ಸುಡುತ್ತಿದ್ದಾರೆ. ಎಲ್ಲರೂ ಎಚ್ವರಗೊಳ್ಳುವ ಕಾಲ ಇದು” ಎಂದರು.

WhatsApp Image 2025 01 27 at 10.09.13 AM

ಜಮಾ ಅತೆಯ ಎಮ್ ಆರ್ ರಾಜಾ ಸಾಬ್ ಮಾತನಾಡಿ, “ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚಿಸುವಾಗ ಯಾವುದೇ ಒಂದು ಸಮುದಾಯ, ಜಾತಿ, ಧರ್ಮದ ಉದ್ಧಾರಕ್ಕೆ ರಚನೆ ಮಾಡಲಿಲ್ಲ. ಎಲ್ಲರನ್ನೊಳಗೊಂಡು ಸಮಾನ ಹಕ್ಕು ಕೊಟ್ಟರು. ಅಂಬೇಡ್ಕರ್ ಸಂವಿಧಾನ ‘ಸತ್ತವರ ಚರಿತ್ರೆಯಲ್ಲ, ಬದುಕಿದವರ ಬದುಕು’ ಎಂದರು. ಮೂಲ ನಿವಾಸಿಗಳ ಬದುಕನ್ನೇ ತುಳಿಯುವ ಮತಾಂಧರಿಂದ ಸಂವಿಧಾನ ರಕ್ಷಿಸಬೇಕಿದೆ. ಸಂವಿಧಾನದಲ್ಲಿ ಕೇವಲ ಅಕ್ಷರಗಳಿಲ್ಲ, ಭಾಷೆಯಿಲ್ಲ ಭಾರತದ ಮೂಲ ನಿವಾಸಿಗಳ ಬದುಕು, ಉಸಿರು ಇದೆ” ಎಂದು ಹೇಳಿದರು.

ಜನಶಕ್ತಿ ರಾಜ್ಯ ಸಂಚಾಲಕ ರಾಜನಾಯ್ಕ್ ಕುಷ್ಟಗಿ ಮಾತನಾಡಿ, “ಸಂವಿಧಾನದ ಮೂಲ ಆಶಯ, ಉದ್ದೇಶವನ್ನು ಎದ್ದೇಳು ಕರ್ನಾಟಕದ ಮೂಲಕ ಹಳ್ಳಿಯ ಮುಗ್ದ ಜನರವರೆಗೂ ತಲುಪಿಸಬೇಕು. ಸಂವಿಧಾನ ಸಂರಕ್ಷಣೆ ಮಾಡಿಕೊಳ್ಳುವಲ್ಲಿ ಯುವಕರನ್ನ ಸಂಘಟಿಸಿ ನಮ್ಮ ಹಕ್ಕುಗಳಿಗಾಗಿ ನಾವು ಹೋರಾಡುವ ಅಗತ್ಯ ಇದೆ. ಸಂವಿಧಾನ ಮೂಲ ಆಶಯ ಕಿತ್ತೊಗೆದರೆ ಭಾರತ ಸಂಪೂರ್ಣ ಸಂಕಷ್ಟದಲ್ಲಿ ಸಿಲುಕಲಿದೆ ಎಂಬುದನ್ನು ಮನದಟ್ಟು ಮಾಡಬೇಕು” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ?: ಕೊಪ್ಪಳ | ಶಾದಿ ಮಹಲ್ ಬಾಡಿಗೆ ಕಡಿಮೆ ಮಾಡಿ; ಸಚಿವ ಜಮೀರ್ ಅಹ್ಮದ್‌ಗೆ ಮನವಿ

ಈ ವೇಳೆ ದುರ್ಗೇಶ ಬರಗೂರು, ಯುಮನೂರು ಇಳೆಗನೂರು, ಲಕ್ಷ್ಮೀ ಹೊಸಕೇರಿ, ಯಮುನಾ ಚೇಳೂರು, ಚೈತ್ರ ಗಬ್ಬೂರ, ಮಾರುತಿ, ಸುನೀಲ್, ಶೋಭಾ ರಾಂಪೂರ, ಜಾಂಭವಿ ರಾಂಪೂರ, ಕಾ ವಿಜಯ, ಅನುಪಮ್, ಶರಣು, ಶ್ರೀದೇವಿ ಬರಗೂರು, ಮುಂತಾದವರು ಇದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...