ಕೊಪ್ಪಳ | ಬರಪೀಡಿತ ಪ್ರದೇಶ ಘೋಷಣೆಗೆ ರೈತ ಸಂಘ ಆಗ್ರಹ

Date:

ಪ್ರಸ್ತುತ ವರ್ಷ ಮುಂಗಾರು ಪ್ರಾರಂಭದ ಮಳೆಗೆ ಜಿಲ್ಲೆಯ ಒಣ ಬೇಸಾಯದಲ್ಲಿ ಸಂಪೂರ್ಣ ಬಿತ್ತನೆಯಾಗಿದೆ. ಈ ಭಾಗದ ಒಣ ಬೇಸಾಯದ ಮಸಾರಿ ಬೆಳೆಗಳಾದ ಮೆಕ್ಕಜೋಳ, ಸಜ್ಜೆ, ಶೇಂಗಾ ಎಳ್ಳು, ತೊಗರಿ ಇತ್ಯಾದಿ ಬೆಳೆಗಳು, ಎರೆ ಭೂಮಿಯಲ್ಲಿ ಮುಂಗಾರು ಹೆಸರು ಹಾಗು ಇನ್ನಿತರ ಬೆಳೆಗಳು ಸಕಾಲಕ್ಕೆ ಮಳೆಯಾಗದೆ ಸಂಪೂರ್ಣ ಒಣಗಿ ಹೋಗಿವೆ ಎಂದರು.

ಕೊಪ್ಬಳ ಜಿಲ್ಲೆ ಬರಗಾಲ ಪೀಡಿತ ಪ್ರದೇಶ ಘೋಷಣೆಗೆ ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

“ಜಿಲ್ಲೆಯಲ್ಲಿ ಮಳೆಗಾಲ ಪ್ರಾರಂಭದಿಂದ ಈವರೆಗೆ ಮಳೆ ಕೊರತೆಯ ಉಂಟಾಗಿರುವುದರಿಂದ ಭೀಕರ ಬರಗಾಲ ಆವರಿಸಿದ್ದು, ಜಾನುವಾರುಗಳ ಮೇವಿನ ಕೊರತೆ, ಅಂತರ್ಜಲ ಕುಸಿತ, ಪ್ರಾರಂಭದಲ್ಲಿ ಬಿದ್ದ ಮಳೆಗೆ ಬಿತ್ತಿದ ಬೆಳೆಗಳು ಸಂಪೂರ್ಣ ಒಣಗಿ ಹೋಗಿದ್ದು, ರೈತರು ಸಾವು ನೋವು ಅನುಭವಿಸವಂತಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ರಾಸಾಯನಿಕ ಗೊಬ್ಬರ, ಬೀಜ, ಕೃಷಿ ಉಪಕರಣ, ಕೂಲಿ ವೆಚ್ಚ ಹೆಚ್ಚಾಗಿದ್ದು, ಮೆಕ್ಕಜೋಳಕ್ಕೆ ₹25,000, ಸಜ್ಜೆಗೆ ₹15,000, ಶೇಂಗಾಕ್ಕೆ ₹35,000 ಖರ್ಚು ಸೇರಿದಂತೆ ಇನ್ನಿತರ ಬೆಲೆಗಳೂ ಹೆಚ್ಚಾಗಿವೆ. ಈ ವರ್ಷ ಅತಿ ಬರಗಾಲ ಉಂಟಾಗಿದೆ. ಅಳಿದು ಉಳಿದಿರುವ ಬೆಳೆಗಳನ್ನು ಕುರಿ ದನ ಬಿಟ್ಟು ಮೇಯಿಸಿ ನಾಶಪಡಿಸಿದ್ದಾರೆ. ಹಿಂಗಾರು ಬೆಳೆ ಬೆಳೆಯಬೇಕೆಂದರೆ, ಮಳೆಗಾಲ ಮುಗಿಯುವ ಹಂತದಲ್ಲಿದೆ. ಹೀಗಾಗಿ ಮಸಾರಿ ಆಗಿರುವುದರಿಂದ ಹಿಂಗಾರು ಬೆಳೆಯೂ ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು” ಎಂದು ಆಗ್ರಹಿಸಿದರು.

“ಜಿಲ್ಲೆಯ ರೈತರಿಗೆ ಆರ್ಥಿಕ ಸಂಕಷ್ಟದಿಂದ ಬ್ಯಾಂಕಿನ ಬೆಳೆ ಸಾಲ ತೀರಿಸುವ ಚಿಂತೆಯಾಗಿದೆ. ಬ್ಯಾಂಕುಗಳು ಬೆಳೆ ಸಾಲ ಮರುಪಾವತಿಗೆ ನೊಟೀಸ್ ಕಳುಹಿಸುತ್ತಿದ್ದು, ಬೆಳೆ ಕೈಕೊಟ್ಟಿದ್ದರಿಂದ ಸಾಲ ಮರುಪಾವತಿ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಸರ್ಕಾರ ಇಂತಹ ತುರ್ತು ಪರಿಸ್ಥಿತಿಯಲ್ಲಿ ರೈತರ ಎಲ್ಲ ಸಾಲವನ್ನೂ ಮನ್ನಾ ಮಾಡಬೇಕು” ಎಂದು ಒತ್ತಾಯಿಸಿದರು.

“ಪ್ರತಿ ರೈತರಿಗೆ ಬೆಳೆ ನಷ್ಟದ ಪರಿಹಾರವಾಗಿ ಆಂಧ್ರ ಪ್ರದೇಶದ ಮಾದರಿಯಲ್ಲಿ ₹15 ಸಾವಿರ ಘೋಷಣೆ ಮಾಡಿದಂತೆ ನಮ್ಮ ರಾಜ್ಯದಲ್ಲಿಯೂ ಸರ್ಕಾರ ಈಗಿನ ಕೃಷಿ ವೆಚ್ಚಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರದಿಂದಲೇ ಪ್ರತಿ ರೈತ ಕುಟುಂಬಕ್ಕೆ ಬೆಳೆ ನಷ್ಟದ ಪರಿಹಾರವಾಗಿ ₹30 ಸಾವಿರ ಹೆಚ್ಚಿಸಿ ಪರಿಹಾರ ಘೋಷಣೆ ಮಾಡಬೇಕು” ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

“ಜಿಲ್ಲಾ ಕೇಂದ್ರದಿಂದ ಸಮೀಪದಲ್ಲಿರುವ ತುಂಗಭದ್ರಾ ಜಲಾಶಯದಿಂದ ತಾಲೂಕಿನ ಎಲ್ಲ ಗ್ರಾಮಗಳ ಏತ ನೀರಾವರಿ ಮಾಡಿ, ಊರಿಗೊಂದು ಕರೆ ನಿರ್ಮಿಸಿ ಉಳಿದ ನೀರಿನಿಂದ ಕೆರೆ ತುಂಬಿಸುವ ಯೋಜನೆ ಜಾರಿಗೊಳಿಸಬೇಕು. ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಕಳಪೆ ಬೀಜ ಸರಬರಾಜು ಮಾಡುತ್ತಿದ್ದು, ಕಾರಂಜಿ ಮತ್ತು ಇತರೆ ಯಂತ್ರಗಳು ಕಳಪೆ ಗುಣಮಟ್ಟ ಹೊಂದಿವೆ. ಹಾಗಾಗಿ ಗುಣಮಟ್ಟದ ಯಂತ್ರಗಳು ಮತ್ತು ಉತ್ತಮ ಬೀಜಗಳನ್ನು ಸರಬರಾಜು ಮಾಡಬೇಕು ಎಂದು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ತುಂಗಭದ್ರಾ ಜಲಾಶಯದ ಎಡದಂಡೆ ನಾಲೆಗಳಿಗೆ ನೀರು ಹರಿಸುವಂತೆ ಸೂಚನೆ

ತೋಟಗಾರಿಕೆ ಇಲಾಖೆಯಲ್ಲಿ ಶೇ90ರಷ್ಟು ರಿಯಾಯತಿ ದರದಲ್ಲಿ ನೀಡುತ್ತಿದ್ದ ಕಾರಂಜಿಗಳು ರೈತರಿಗೆ ದೊರಕದೆ ಕೆಲ ರಾಜಕಾರಣಿಗಳಿಗೆ ದೊರಕುತ್ತಿದ್ದ ತಪ್ಪನ್ನು ಸರಿಪಡಿಸಿ ಅರ್ಹ ರೈತರಿಗೆ ಅನುದಾನದ ಮೂಲಕ ಕಲ್ಪಿಸಬೇಕು” ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಭೀಮಸೇನ ಕಲಕೇರಿ, ಕನಕಪ್ಪ ಪೂಜಾರ, ನಾಗರಾಜ ಇರಕಲಗಡ, ಮಂಜುನಾಥ ಸೇರಿದಂತೆ ಇತರರು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊಪ್ಪಳ | 3 ತಿಂಗಳ ಮಗುವಿನೊಂದಿಗೆ ಭಿಕ್ಷಾಟನೆ: ಪೊಲೀಸರಿಂದ ಮಗು ರಕ್ಷಣೆ

ಕೊಪ್ಪಳ ನಗರದ ಅಶೋಕ್ ಸರ್ಕಲ್ ಪ್ರದೇಶದಲ್ಲಿ 3 ತಿಂಗಳ ಮಗುವಿನೊಂದಿಗೆ ಭಿಕ್ಷಾಟನೆ...

ಕೊಪ್ಪಳ | ಅಶ್ಲೀಲ ಪದ ಬಳಸಿ ಸೂಚನಾ ಫಲಕ; ಸಾರ್ವಜನಿಕರಿಂದ ತೀವ್ರ ಆಕ್ರೋಶ

ಕೊಪ್ಪಳ ನಗರದ ಬನ್ನಿಕಟ್ಟೆ ಬಡಾವಣೆಯ ಹತ್ತಿರದ ಪದಕಿ ಲೇಔಟ್‌ನಲ್ಲಿ ಕೊಪ್ಪಳ ನಗರಸಭೆ...

ಕೊಪ್ಪಳ | ಚಾಕೊಲೇಟ್ ಆಸೆ ತೋರಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ; ಆರೋಪಿ ಬಂಧನ

ಮತ್ತು ಬರುವ ಚಾಕೊಲೇಟ್ ಕೊಡಿಸಿ 13 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ...