ಕಿತ್ತುಕೊಂಡು ಹೋದ ತುಂಗಭದ್ರಾ ಜಲಾಶಯದ ಗೇಟ್‌; 60 ಟಿಎಂಸಿ ನೀರು ಖಾಲಿ ಮಾಡಬೇಕಾದ ಅನಿವಾರ್ಯತೆ

Date:

ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ ಬಳಿ ಇರುವ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ ಗೇಟ್‌ನ ಚೈನ್ ತುಂಡಾಗಿದೆ. ಪರಿಣಾಮ, ಗೇಟ್ ಕಿತ್ತುಕೊಂಡು ಹೋಗಿದ್ದು, ಭಾರೀ ಪ್ರಮಾಣದ ನೀರು ಹರಿದು ಹೋಗುತ್ತಿದೆ. ಒಟ್ಟು 105 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿರುವ ಅಣೆಕಟ್ಟೆಯಿಂದ ಈಗ 60 ಟಿಎಂಸಿ ನೀರನ್ನು ನದಿಗೆ ಹರಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ವರದಿಯಾಗಿದೆ.

1953ರಲ್ಲಿ ನಿರ್ಮಾಣವಾಗಿದ್ದ ತುಂಗಭದ್ರಾ ಜಲಾಶಯದಲ್ಲಿ ಇದೇ ಮೊದಲ ಬಾರಿಗೆ ಚೈನ್​ ಕಟ್ಟಾಗಿದ್ದು, ಗೇಟ್‌ ಕಿತ್ತುಕೊಂಡು ಹೋಗಿದೆ. ತುಂಗಭದ್ರಾ ಜಲಾಶಯವು ದೇಶದ ಅತಿದೊಡ್ಡ ಕಲ್ಲಿನ ಅಣೆಕಟ್ಟು ಎಂಬ ಖ್ಯಾತಿಯನ್ನು ಪಡೆದಿದೆ. ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳು ಹಾಗೂ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಿಗೆ ನೀರೊದಗಿರುವ ನೀರಿನ ಮೂಲವಾಗಿದೆ.

ತುಂಡಾಗಿರುವ ಚೈನ್​ ರಿಪೇರಿ ಮಾಡಲು, ಗೇಟ್‌ನ ತಳಮಟ್ಟದವರೆಗೆ ಇರುವ ನೀರು ಖಾಲಿಯಾಗಬೇಕಿದೆ. ಆ ವೇಳೆಗೆ ಕನಿಷ್ಠ 60 ಟಿಎಂಸಿ ನೀರು ಖಾಲಿಯಾಗಲಿದೆ. ಪ್ರತಿದಿನ 2 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊಪ್ಪಳ | ಸರಾಯಿ ಕುಡಿದು ಇಬ್ಬರು ಯುವಕರು ಸಾವು

ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದ ಹೊಲವೊಂದರಲ್ಲಿ ಸರಾಯಿ (ಸ್ಪಿರಿಟ್) ಕುಡಿದು ಇಬ್ಬರು...

ಕೊಪ್ಪಳ | ಕೌಟುಂಬಿಕ ಕಲಹ ಬಗೆಹರಿಸಲು ಹೋದ ಯುವಕನ ಮೇಲೆ ಗುಂಪು ಹಲ್ಲೆ; ನಾಲ್ವರ ಬಂಧನ

ಪಕ್ಕದ ಮನೆಯ ಕೌಟುಂಬಿಕ ಕಲಹವನ್ನು ಬಗೆಹರಿಸಲು ಯತ್ನಿಸಿದ ಯುವಕನ ಮೇಲೆ ಪುಂಡರ...

‘ಈ ಕೆಲಸಕ್ಕಿಂತ ಎಗ್ ರೈಸ್ ಮಾರೋದೇ ಬೆಟರ್’: ಪೇದೆ ವಾಟ್ಸಾಪ್ ಸ್ಟೇಟಸ್ ವೈರಲ್

ತನ್ನ ವೃತ್ತಿಯ ಇಲಾಖೆ ವಿರುದ್ದವೇ ಪೊಲೀಸ್ ಪೇದೆಯೋರ್ವ ವಾಟ್ಸಾಪ್ ಸ್ಟೇಟಸ್ ಮೂಲಕ...

ಕೊಪ್ಪಳ | ಕಿಮ್ಸ್ ಆಡಳಿತಾಧಿಕಾರಿ ಬಿ ಕಲ್ಲೇಶ ಮನೆ ಮೇಲೆ ಲೋಕಾಯುಕ್ತ ದಾಳಿ

ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಆಡಳಿತಾಧಿಕಾರಿ ಬಿ. ಕಲ್ಲೇಶ ಅವರು...