ಮಂಡ್ಯ ಜಿಲ್ಲೆ, ಕೃಷ್ಣರಾಜಪೇಟೆ ತಾಲೂಕಿನ ಬಣ್ಣೇನಹಳ್ಳಿ ಗ್ರಾಮದಲ್ಲಿರುವ ಫೆವರಿಚ್ ಗ್ರೂಪ್‌ನ ಮೆಗಾ ಫುಡ್‌ಪಾರ್ಕ್‌ನಲ್ಲಿ ರೋಟರಿ ಬೆಂಗಳೂರು, ಮಹಾಲಕ್ಷ್ಮಿ ಸೆಂಟ್ರಲ್ ಸಹಯೋಗದಲ್ಲಿ ಆವರಣದಲ್ಲಿರುವ ಉದ್ಯಮಗಳ ನೌಕರರು, ಕುಟುಂಬ ಸದಸ್ಯರಿಗೆ ಏರ್ಪಡಿಸಿದ್ದ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಫೆವರಿಚ್ ಗ್ರೂಪ್‌ನ ಉಪಾಧ್ಯಕ್ಷ ಆರ್. ದಯಾನಂದಕುಮಾರ್ ನೌಕರರು ಆರೋಗ್ಯ ಸ್ವಾಸ್ಥ್ಯವನ್ನು ಕಾಪಾಡಿಕೊಂಡು, ಉದ್ಯಮಗಳ ಬೆಳವಣಿಗೆಗೆ ಕೊಡುಗೆ ನೀಡುವ ಮೂಲಕ ದೇಶದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಹೇಳಿದರು.
ಫೆವರಿಚ್ ಗ್ರೂಪ್‌ಗೆ 40 ವರ್ಷದ ಅನುಭವವಿದೆ. ಸಣ್ಣ ಉದ್ಯಮದಿಂದ ದೊಡ್ಡ ಉದ್ಯಮವಾಗಿ ಗ್ರೂಪ್ ನ ಅಧ್ಯಕ್ಷ ಜಯದೇವ ಬೆಳಸಿದ್ದಾರೆ. ಮೊದಲಿಗೆ ಕೃಷಿ ಸರಕು ವ್ಯಾಪಾರ, ಆಮದು, ರಫ್ತು ಹಾಗೂ ತಯಾರಿಕಾ ಕ್ಷೇತ್ರಗಳಿಗೆ ವಿಸ್ತರಣೆ ಆಗಿದೆ. ಈಗ ಕೃಷಿ ಹಾಗೂ ಆಹಾರ ಸಂಬಂಧಿತ ಉದ್ಯಮಕ್ಕೂ ಪಾದರ್ಪಣೆ ಮಾಡಿದೆ. ಗ್ರೂಪ್ ದೇಶದಲ್ಲಿ ಸ್ನ್ಯಾಕ್ ಆಹಾರ ಕಚ್ಚಾ ವಸ್ತುಗಳ ತಯಾರಿಕೆ ಹಾಗೂ ಪೂರೈಕೆ ಮಾಡುತ್ತಿದ್ದಾರೆ. ಪೆಪ್ಸಿಕೋ, ಪಾರ್ಲೆ, ಐಟಿಸಿ ಸೇರಿದಂತೆ ಹಲವು ಜಾಗತಿಕ ಸಂಸ್ಥೆಗಳಿಗೆ ಪೂರೈಸುತ್ತಿದೆ ಎಂದು ಹೇಳಿದರು.
2014 ರಲ್ಲಿ ಹೊಸ ತಂತ್ರಜ್ಞಾನದಿಂದ ಮೂಲ ಸೌಕರ್ಯ ಕ್ಷೇತ್ರಕ್ಕೆ ಪ್ರವೇಶಿಸಿ, ಮೆಗಾ ಫುಡ್ ಪಾರ್ಕ್ ಮತ್ತು ಇಂಡಸ್ಟ್ರಿಯಲ್ ಪಾರ್ಕ್ ನಿರ್ಮಿಸಲಾಗಿದ್ದು, ಉದ್ಯಮಿಗಳಿಗೆ ಸುಗಮ ಹಾಗೂ ತೊಂದರೆ ರಹಿತ ವಾತಾವರಣ ಒದಗಿಸುವುದು, ಭೂಮಿ ಹಂಚಿಕೆ, ಹೂಡಿಕೆ ಬೆಂಬಲ, ಮೂಲಭೂತ ಹಾಗೂ ಅಗತ್ಯ ಸೌಲಭ್ಯಗಳು ಹಾಗೂ ಕಾನೂನು ಅನುಮತಿಗಳ ಸಹಾಯ, ಫುಡ್ ಪಾರ್ಕ್‌ನಲ್ಲಿರುವ ಕೈಗಾರಿಕೆಗಳು ರೈತರಿಂದ ನೇರವಾಗಿ ಕಚ್ಚಾ ವಸ್ತುಗಳನ್ನು ಖರೀದಿಸುವ ಮೂಲಕ ಮಧ್ಯವರ್ತಿಗಳ ನಿವಾರಿಸಿ ರೈತರ ಆದಾಯವನ್ನು ದ್ವಿಗುಣಗೊಳಿಸುವುದು, ಗ್ರಾಮೀಣ ಯುವಕರಿಗೆ ಸ್ಮಳೀಯವಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ, ಜನಸಂದಣಿಯ ನಗರಗಳಿಗೆ ವಲಸೆ ಹೋಗುವದನ್ನು ತಡೆಯಲಾಗುತ್ತಿದೆ ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಡಿ.17 ರಿಂದ 21ರವರೆಗೆ ‘ನಿರಂತರ ರಂಗ ಉತ್ಸವ-2025’
ರೋಟರಿ ಸಂಸ್ಥೆಯ ಪಿಡಿಜಿ ಡಾ. ನಾಗೇಂದ್ರ, ಬೆಂಗಳೂರಿನ ಮಹಾಲಕ್ಷ್ಮಿ ಸೆಂಟರಲ್ ರೋಟರಿ ಅಧ್ಯಕ್ಷ ಪ್ರಶಾಂತ್ ರಾವ್, ಸಂಸ್ಥೆಯ ನಿರ್ದೇಶಕ ವಿಶಾಲ್ ನಾಯಡು, ಸಂಸ್ಥೆಯ ಅಧ್ಯಕ್ಷ ಜಯದೇವ್, ಕಾರ್ಯದರ್ಶಿ ಚಿರುದೀಪ್ ಶಿಬಿರದಲ್ಲಿ ಇದ್ದರು.





