ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕೊಡಮಾಡುವ ಪ್ರತಿಷ್ಠಿತ ಗೌರಮ್ಮ ದತ್ತಿ ಪ್ರಶಸ್ತಿಗೆ ಸಾಹಿತಿ ಪೂಜಾರಿರ ಕೃಪಾ ದೇವರಾಜ್ ಭಾಜನರಾಗಿದ್ದಾರೆ.
ಗೌರಮ್ಮರವರ ಪುತ್ರ ಬಿ.ಜಿ. ವಸಂತ ಕೊಡಗಿನ ಮಹಿಳಾ ಲೇಖಕಿಯರು ಪ್ರಕಟ ಪಡಿಸಿದ ಉತ್ತಮ ಕೃತಿಗೆ ಪ್ರಶಸ್ತಿ ನೀಡುವ ಸಲುವಾಗಿ ಗೌರಮ್ಮ ದತ್ತಿ ಪ್ರಶಸ್ತಿ ಸ್ಥಾಪಿಸಲಾಗಿದೆ. ಇಲ್ಲಿಯವರೆಗೆ 22 ಲೇಖಕಿಯರಿಗೆ ಈ ಪ್ರಶಸ್ತಿ ನೀಡಲಾಗಿದ್ದು, 2025-26ನೇ ಪ್ರಸಕ್ತ ಸಾಲಿನ 23ನೇ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಿದಾಗ 10 ಲೇಖಕಿಯರು ತಮ್ಮ ಕೃತಿಗಳನ್ನು ಪ್ರಶಸ್ತಿಗಾಗಿ ಪ್ರಸ್ತುತ ಪಡಿಸಿದ್ದರು. ಜಿಲ್ಲೆಯ ಹಿರಿಯ ಮೂರು ಸಾಹಿತಿಗಳನ್ನು ತೀರ್ಪುಗಾರರನ್ನಾಗಿಸಿ, ಎಲ್ಲಾ ಪುಸ್ತಕಗಳನ್ನು ಪರಮರ್ಶಿಸಿ ಸಾಹಿತಿ ಪೂಜಾರಿರ ಕೃಪಾ ದೇವರಾಜ್ ರಚಿಸಿದ ‘ಮಂತ್ರ ಪುಷ್ಪ-ಕಥೆಗಳ ಕ್ಯಾನ್ವಾಸ್’ ಕೃತಿಗೆ ಪ್ರಶಸ್ತಿ ಲಭ್ಯವಾಗಿದೆ ಎಂದು ಕಸಾಪ ಕೊಡಗು ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕುಶಾಲನಗರ | ಸ್ವಾಮಿ ವಿವೇಕಾನಂದರ ಆದರ್ಶಗಳು ಯುವ ಜನಾಂಗಕ್ಕೆ ಸ್ಫೂರ್ತಿ: ಟಿ ಜಿ ಪ್ರೇಮ್ ಕುಮಾರ್
ಸಾಹಿತಿ ಮತ್ತು ಕವಿಯತ್ರಿಯಾಗಿರುವ ಪೂಜಾರಿರ ಕೃಪಾ ದೇವರಾಜ್ ರ ‘ಭಾವದ ಕದತಟ್ಟಿ’ ಕವನ ಸಂಕಲನ, ‘ಮರ್ಮರ’ ಕಥಾ ಸಂಕಲನಕ್ಕೆ ಆಜೂರ ಪ್ರತಿಷ್ಠಾನದ ಪ್ರತಿಷ್ಠಿತ ರಾಜ್ಯ ಮಟ್ಟದ ‘ಆಜೂರ’ ಪ್ರಶಸ್ತಿ ದೊರಕಿದೆ. ಚೌಚೌ ಬಾತ್ ಲಲಿತ ಪ್ರಬಂಧಗಳ ಸಂಕಲನ, ಕಾರ್ಪಣ್ಯದ ಹೂವು ಕವನ ಸಂಕಲನ, ಮಂತ್ರ ಪುಷ್ಪ ಕಥಾ ಸಂಕಲನ ಸೇರಿ 5 ಕೃತಿಗಳನ್ನು ರಚಿಸಿರುತ್ತಾರೆ. ಹಲವಾರು ಕವಿತೆಗಳನ್ನು ಕವಿಗೋಷ್ಠಿಗಳಲ್ಲಿ ವಾಚಿಸಿ, ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳಿಸಿದ್ದಾರೆ ಎಂದು ಮಾಹಿತಿ ನೀಡಿದರು.





