ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ವೈದ್ಯಕೀಯ ಪರೀಕ್ಷೆಯ ವೇಳೆ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾದ ಘಟನೆ ಕೆಲವು ದಿನಗಳ ಹಿಂದೆ ಕುಮಟಾದಲ್ಲಿ ನಡೆದಿತ್ತು. ಇದೀಗ ಆ ಆರೋಪಿಯನ್ನು ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಪೊಲೀಸ್ ಬಂಧಿಸಿದ್ದಾರೆ.
ಆರೋಪಿಯನ್ನು ವಶಕ್ಕೆ ಪಡೆಯಲು ಕುಮಟಾ ಪೊಲೀಸರು ಸತತ ಮೂರು ದಿನಗಳ ಕಾಲ ತನಿಖೆ ಮುಂದುವರೆಸಿ. ಆರೋಪಿಯು ಮದ್ದೂರು ಪ್ರದೇಶದಲ್ಲಿ ಅಡಗಿಕೊಂಡಿರುವ ಕುರಿತು ಖಚಿತ ಮಾಹಿತಿಯನ್ನು ಆಧರಿಸಿದ ಪೊಲೀಸರು ತಕ್ಷಣವೇ ತಂಡವನ್ನು ಅಲ್ಲಿಗೆ ಕಳುಹಿಸಿ. ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸದ್ಯ ಆರೋಪಿಯನ್ನು ಕುಮಟಾಕ್ಕೆ ಕರೆತರಲಾಗಿದ್ದು, ಕಳ್ಳತನ ಪ್ರಕರಣ ಹಾಗೂ ಕರ್ತವ್ಯ ನಿರತ ಪೊಲೀಸರ ಕೈಯಿಂದ ತಪ್ಪಿಸಿಕೊಂಡ ಘಟನೆ ಕುರಿತು ವಿಚಾರಣೆ ಮುಂದುವರಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಸುದ್ದಿ ಓದಿದ್ದೀರಾ? ಶಿರಸಿ | ಕೆಡಿಸಿಸಿ ಬ್ಯಾಂಕ್ ಚುನಾವಣೆ: ನಾಮಪತ್ರ ಸಲ್ಲಿಕೆ ಆರಂಭ
ಪ್ರಕರಣದ ಹಿನ್ನೆಲೆ : ಗಿಬ್ ಸರ್ಕಲ್ ಬಳಿಯ ಬ್ಯಾಟರಿ ಅಂಗಡಿಯಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಕಳೆದ ಶುಕ್ರವಾರ ಬಂಧಿಸಲಾಗಿತ್ತು. ನಂತರ ವೈದ್ಯಕೀಯ ಪರೀಕ್ಷೆಗೆ ಇವರನ್ನು ಕುಮಟಾ ತಾಲ್ಲೂಕು ಆಸ್ಪತ್ರೆಗೆ ಕರೆತಂದಿದ್ದರು. ಪರೀಕ್ಷೆ ಮುಗಿದ ನಂತರ ವಾಪಸ್ಸಾಗುವ ವೇಳೆ, ಆರೋಪಿಗಳ ಪೈಕಿ ಒಬ್ಬನು ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಕಾಂಪೌಂಡ್ ಹಾರಿ ಕತ್ತಲಿನಲ್ಲಿ ಪರಾರಿಯಾಗಿದ್ದ. ಈ ಘಟನೆ ಬಳಿಕ ಪೊಲೀಸರು ತಕ್ಷಣವೇ ಆರೋಪಿಯ ಹುಡುಕಾಟ ನಡೆಸಿ ಮೂರು ದಿನಗಳ ನಂತರ ಆರೋಪಿಯನ್ನು ಬಂಧಿಸಿವುಲ್ಲಿ ಯಶಸ್ವಿಯಾಗಿದ್ದಾರೆ.





