ಉಡುಪಿ | ಅಭಿವೃದ್ಧಿ ಇಲ್ಲದೆ ಸಮಸ್ಯೆಗಳಲ್ಲಿ ಮುಳುಗಿದ ಕುಂದಾಪುರ ಪುರಸಭೆ !

Date:

ಕರಾವಳಿ ಕರ್ನಾಟಕದಲ್ಲಿ ಮಾದರಿ ಪಟ್ಟಣವೆಂದು ಖ್ಯಾತಿ ಪಡೆದಿದ್ದ ಕುಂದಾಪುರ ಇಂದು ಮೂಲಸೌಕರ್ಯಗಳ ಕೊರತೆಯಿಂದ ನರಳುತ್ತಿದೆ. ಕಳೆದ ಹಲವಾರು ವರ್ಷಗಳಿಂದ ಬಿಜೆಪಿ ಪುರಸಭೆ ಆಡಳಿತದಲ್ಲಿದ್ದರೂ ಅಭಿವೃದ್ಧಿಯ ಬದಲಿಗೆ ಅವ್ಯವಸ್ಥೆ, ನಿರ್ಲಕ್ಷ್ಯ ಹಾಗೂ ಅನೇಕ ಅಪೂರ್ಣ ಯೋಜನೆಗಳ ನಡುವೆ ಕುಂದಾಪುರ ನಗರ ಸಿಲುಕಿದೆ. ಜನರ ತೆರಿಗೆ ಹಣ ಖರ್ಚಾಗುತ್ತಿದ್ದರೂ ನೈಜ ಅಭಿವೃದ್ಧಿ ಅಷ್ಟಾಗಿ ಗೋಚರಿಸುತ್ತಿಲ್ಲ ಎಂಬು ಸ್ಥಳಿಯರು ಆರೋಪಿಸುತ್ತಿದ್ದಾರೆ.

ಕುಂದಾಪುರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಲವಾರು ಬಹುಮಹಡಿ ಕಟ್ಟಡಗಳು, ವಸತಿ ಪ್ಲಾಟುಗಳು, ವ್ಯಾಪಾರ ಕೇಂದ್ರಗಳು ನಿರ್ಮಾಣಗೊಂಡಿವೆ. ನಗರವು ವಿಸ್ತಾರವಾಗುತ್ತಿದ್ದರೂ ಪುರಸಭೆಯ ಮೂಲಸೌಕರ್ಯ ಯೋಜನೆಗಳು ಅದಕ್ಕೆ ತಕ್ಕಂತೆ ನಿರ್ಮಾಣವಾಗಲಿಲ್ಲ. ಪ್ರಮುಖ ಸಮಸ್ಯೆಗಳಲ್ಲಿ ಒಳಚರಂಡಿ ಯೋಜನೆ, ತ್ಯಾಜ್ಯ ವಿಲೇವಾರಿ, ರಸ್ತೆ ದುರಸ್ತಿ, ಪಾರ್ಕಿಂಗ್ ವ್ಯವಸ್ಥೆ, ಶೌಚಾಲಯಗಳ ಕೊರತೆ, ನೀರಿನ ನಿರ್ವಹಣೆ, ವಲಸೆ ಕಾರ್ಮಿಕರ ವಸತಿ ಇತ್ಯಾದಿ ಪ್ರಮುಖವಾಗಿವೆ.

WhatsApp Image 2025 11 12 at 9.35.43 AM 1

2013ರಲ್ಲಿ ನಗರಕ್ಕೆ ಶಾಶ್ವತ ಪರಿಹಾರವೆಂದು ಘೋಷಿಸಲಾದ ಒಳಚರಂಡಿ ಯೋಜನೆಗೆ ಸುಮಾರು ₹48 ಕೋಟಿ ವೆಚ್ಚ ಮಾಡಲಾಗಿದೆ. ಆದರೆ ಕಾಮಗಾರಿಯ ಅವೈಜ್ಞಾನಿಕ ನಿರ್ವಹಣೆ ಹಾಗೂ ತಾಂತ್ರಿಕ ದೌರ್ಬಲ್ಯಗಳಿಂದ ಯೋಜನೆ ಅಪೂರ್ಣವಾಗಿ ನಿಂತು ಇಂದು ಅವ್ಯವಸ್ಥೆಯ ಸಂಕೇತವಾಗಿದೆ. ರಸ್ತೆಗಳಲ್ಲಿ ಕೊಳಚೆ ನೀರು ಹರಿಯುವ, ಪೈಪ್‌ಗಳು ಬ್ಲಾಕ್ ಆಗುವ, ಮನೆಗಳ ಮುಂಭಾಗದಲ್ಲಿ ದುರ್ವಾಸನೆ ಹರಡುವಂತಹ ಪರಿಸ್ಥಿತಿ ಉಂಟಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
WhatsApp Image 2025 11 12 at 9.34.21 AM

ವಾರಾಹಿ ನದಿಯಿಂದ ಕುಡಿಯುವ ನೀರು ಪೂರೈಸುವ ಯೋಜನೆ ಸಿಪಿಐ(ಎಂ) ಹಾಗೂ ಜನತಾದಳ ಆಡಳಿತ ಕಾಲದಲ್ಲಿ ರೂಪುಗೊಂಡಿತು. ಆದರೆ ಈಗ ಪುರಸಭೆ ಈ ಯೋಜನೆಯ ನಿರ್ವಹಣೆಯನ್ನು ಖಾಸಗೀ ಕಂಪನಿಗೆ ವಹಿಸಿ ವರ್ಷಕ್ಕೆ ₹1.5 ಕೋಟಿ ನೀಡುತ್ತಿದೆ. ಪುರಸಭೆಯೇ ನಿರ್ವಹಿಸಬಹುದಾದ ವ್ಯವಸ್ಥೆಗೆ ಖಾಸಗೀಕರಣ ನೀಡಿರುವುದು ಸಾರ್ವಜನಿಕ ಹಣವನ್ನು ಖಾಸಗೀ ಕಂಪನಿಯ ಜೇಬಿಗೆ ತುಂಬುವ ಕ್ರಮ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ನಗರದ ಬಹುತೇಕ ರಸ್ತೆಗಳು ಹೊಂಡಗಳಿಂದ ತುಂಬಿದ್ದು, ಮಳೆಗಾಲದಲ್ಲಿ ಅವು ಚರಂಡಿಯಂತಾಗುತ್ತವೆ. ವಾಹನ ಸವಾರರು, ಪಾದಚಾರಿಗಳು ದಿನನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಅದ್ಧೂರಿಯಾಗಿ ಪ್ರಾರಂಭಗೊಂಡ ರಿಂಗ್ ರಸ್ತೆ ಯೋಜನೆ ಕಾಗದದಲ್ಲೇ ಉಳಿದಿದೆ. ಪುರಸಭೆಯ ಆಡಳಿತಾತ್ಮಕ ಶಾಖೆಗಳು ದುರ್ಬಲಗೊಂಡಿದ್ದು ನಾಗರಿಕರ ಅಹವಾಲುಗಳಿಗೆ ತಕ್ಷಣದ ಪರಿಹಾರ ದೊರೆಯುತ್ತಿಲ್ಲ.

WhatsApp Image 2025 11 12 at 9.34.17 AM

ಈ ಬಗ್ಗೆ ಈ ದಿನ.ಕಾಮ್‌ ಜೊತೆ ಮಾತನಾಡಿದ ಸಿಪಿಐ(ಎಂ) ಕುಂದಾಪುರ ತಾಲೂಕು ಕಾರ್ಯದರ್ಶಿ ಚಂದ್ರಶೇಖರ ವಿ, 13 ವರ್ಷಗಳಾದರೂ ಯೋಜನೆ ಪೂರ್ಣಗೊಳ್ಳದೇ 48 ಕೋಟಿ ರೂಪಾಯಿಯ ಹಣ ವ್ಯರ್ಥವಾಗಿದೆ. ಮಳೆ ನೀರು ಹೋಗುವ ಚರಂಡಿ ತ್ಯಾಜ್ಯದಿಂದ ತುಂಬಿ ಕೊಳಚೆಯ ಹರಿವಿಗೆ ಮಾರ್ಗವಾಗಿದೆ. ಇದು ಆಡಳಿತಾತ್ಮಕ ದೌರ್ಬಲ್ಯದ ಸ್ಪಷ್ಟ ಉದಾಹರಣೆ. ಜನರ ತೆರಿಗೆ ಹಣದಿಂದ ಜನರೇ ನರಕ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.

ಸುಮಾರು 25 ವರ್ಷಗಳ ಹಿಂದೆ ಖಾಸಗಿಯ ಸಹಭಾಗಿತ್ವದಲ್ಲಿ ನಿರ್ಮಿಸಿದ ತಾತ್ಕಾಲಿಕ ಪೈಪ್ ವ್ಯವಸ್ಥೆಯೇ ಇಂದು ತ್ಯಾಜ್ಯ ವಿಲೇವಾರಿಯ ಮೂಲ. ನಗರದ ಹೊಸ ಬಸ್ ಸ್ಟ್ಯಾಂಡ್, ಹೋಟೆಲ್‌ಗಳು, ಶಾಪಿಂಗ್ ಕಾಂಪ್ಲೆಕ್ಸ್‌ಗಳು, ಫ್ಲಾಟ್‌ಗಳೆಲ್ಲ ಅದೇ ಹಳೆಯ ಪೈಪ್‌ಗೆ ಸಂಪರ್ಕಗೊಂಡಿವೆ. ಈ ಪೈಪ್‌ಗಳು ನಾಶವಾಗಿದ್ದು, ಕೊಳಚೆ ನೀರು ರಸ್ತೆಗಿಳಿಯುತ್ತಿದೆ. ನಗರವೆಲ್ಲ ಗಬ್ಬಿನಿಂದ ಕಂಗೆಟ್ಟಿದೆ ಎಂದು ಅಸಮದಾನ ವ್ಯಕ್ತಪಡಿಸಿದರು.

WhatsApp Image 2025 11 12 at 9.34.17 AM 2

ಈದಿನ.ಕಾಮ್‌ ಜೊತೆ ಮಾತನಾಡಿದ ಮಾಜಿ ಪುರಸಭೆ ಸದಸ್ಯ ಹಾಗೂ ಹೋರಾಟಗಾರ ನರಸಿಂಹ, ಕುಂದಾಪುರ ವೇಗವಾಗಿ ಬೆಳೆಯುತ್ತಿರುವ ನಗರ, ಆದರೆ ಪಾರ್ಕಿಂಗ್ ವ್ಯವಸ್ಥೆ ಶಿಸ್ತುಬದ್ಧವಲ್ಲ. ಆಟೋ, ಟ್ಯಾಕ್ಸಿ ನಿಲ್ದಾಣಗಳನ್ನು ಅಧಿಕೃತಗೊಳಿಸದೇ ಇರುವುದರಿಂದ ವಾಹನ ಸವಾರರು ಪರದಾಡುತ್ತಿದ್ದಾರೆ. ವಲಸೆ ಕಾರ್ಮಿಕರಿಗೆ ತಂಗುವ ಸ್ಥಳವಿಲ್ಲ, ಅವರು ರಾತ್ರಿ ಪ್ಲೈಓವರ್ ಕೆಳಗೆ ಮಲಗುವಂತಾಗಿದೆ. ಅವರಿಗೆ ವಸತಿ ಹಾಗೂ ಶೌಚಾಲಯ ಸೌಲಭ್ಯ ನೀಡುವುದು ಪುರಸಭೆಯ ನೈತಿಕ ಹೊಣೆಗಾರಿಕೆಯಾಗಿದೆ. ಉತ್ತರ ಕರ್ನಾಟಕ ಹಾಗೂ ಇತರ ಜಿಲ್ಲೆಗಳಿಂದ ಬಂದ ವಲಸೆ ಕಾರ್ಮಿಕರು ಕುಂದಾಪುರದ ನಿರ್ಮಾಣ, ತ್ಯಾಜ್ಯ ಸಂಗ್ರಹಣೆ, ಕಟ್ಟಡ ಕಾಮಗಾರಿಗಳಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಆದರೆ ಅವರಿಗೆ ವಿಶ್ರಾಂತಿ, ಮಲಗುವ ಸ್ಥಳ ಅಥವಾ ಶೌಚಾಲಯದ ವ್ಯವಸ್ಥೆಯಿಲ್ಲ. ಪೋಲೀಸರು ಅವರನ್ನು ರಸ್ತೆಗಳಿಂದ ಓಡಿಸುತ್ತಿದ್ದರೆ, ಆಡಳಿತ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.

WhatsApp Image 2025 11 12 at 9.34.17 AM 1

ಈ ದಿನ.ಕಾಮ್‌ ಜೊತೆ ಮಾತನಾಡಿದ ಜನವಾದಿ ಸಂಘಟನೆಯ ಉಡುಪಿ ಜಿಲ್ಲಾ ಕಾರ್ಯದರ್ಶಿ ಶೀಲಾವತಿ, ಅವರು ಬೇಡಿಕೆಗಳನ್ನು ವಿವರಿಸಿ ಹೇಳಿದರು ಒಳಚರಂಡಿ ಯೋಜನೆ ತಕ್ಷಣ ಪೂರ್ಣಗೊಳಿಸಬೇಕು. ಬಹುಮಹಡಿ ಕಟ್ಟಡಗಳ ತ್ಯಾಜ್ಯ ನಿರ್ವಹಣೆಗೆ ವೈಜ್ಞಾನಿಕ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿನ ನಿರ್ವಹಣೆ ಖಾಸಗಿಯವರ ಕೈಯಲ್ಲಿರಬಾರದು; ಪುರಸಭೆಯೇ ನೋಡಿಕೊಳ್ಳಬೇಕು. ರಿಂಗ್ ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ, ಎಲ್ಲಾ ರಸ್ತೆಗಳನ್ನು ದುರಸ್ಥಿಗೊಳಿಸಬೇಕು. ಆಸ್ತಿ ತೆರಿಗೆ ಕಡಿಮೆ ಮಾಡಿ, ಆಟೋ-ಟ್ಯಾಕ್ಸಿ ನಿಲ್ದಾಣಗಳನ್ನು ಅಧಿಕೃತಗೊಳಿಸಿ, ಪಾರ್ಕಿಂಗ್ ವ್ಯವಸ್ಥೆ ಸುಧಾರಿಸಬೇಕು. ವಲಸೆ ಕಾರ್ಮಿಕರಿಗೆ ತಂಗುವ ಸ್ಥಳ ಹಾಗೂ ಶೌಚಾಲಯ ನಿರ್ಮಿಸಬೇಕು. ಮಳೆನೀರು ನದಿ ಸೇರುವಂತೆ ತೋಡುಗಳನ್ನು ಶಾಶ್ವತವಾಗಿ ಅಭಿವೃದ್ಧಿಪಡಿಸಬೇಕು. ದಾರಿ ದೀಪಗಳ ನಿರ್ವಹಣೆ ಉತ್ತಮವಾಗಿರಲಿ ಮತ್ತು ಪುರಸಭೆ ಆಡಳಿತ ಪಾರದರ್ಶಕವಾಗಿರಲಿ ಎಂದು ಹೇಳೀದರು.

ಪುರಸಭೆ ಇತ್ತೀಚೆಗೆ ಆಸ್ತಿ ತೆರಿಗೆಗಳಲ್ಲಿ ಗಣನೀಯ ಏರಿಕೆ ಮಾಡಿದ್ದರೂ ನಾಗರಿಕರಿಗೆ ಸ್ಪಷ್ಟವಾದ ಸೇವಾ ಸುಧಾರಣೆ ಕಾಣುತ್ತಿಲ್ಲ. ಅನೇಕರು ತಮ್ಮ ಹಣಕ್ಕೆ ಪ್ರತಿಯಾಗಿ ಕೊಳಚೆಯ ನಗರ, ಹಾಳಾದ ರಸ್ತೆ, ನೀರಿನ ಕೊರತೆ ಪಡೆಯುತ್ತಿರುವುದಾಗಿ ಕಟುವಾಗಿ ಟೀಕಿಸಿದ್ದಾರೆ. ಆಡಳಿತ ಬದಲಾದರೂ ನಗರ ಸಮಸ್ಯೆಗಳು ಬದಲಾಗಿಲ್ಲ. ಎಲ್ಲೆಡೆ ಅವ್ಯವಸ್ಥೆ, ಅಭಿವೃದ್ಧಿಯ ಹೆಸರಿನಲ್ಲಿ ಕಂಠಕಗಳು. ಹೊಸ ಕಟ್ಟಡಗಳಿಗೆ ಅನುಮತಿ ಕೊಡುವ ಪುರಸಭೆ, ರಸ್ತೆ ಅಥವಾ ಚರಂಡಿ ನಿರ್ವಹಣೆಗೆ ಬಾಯಿ ಮುಚ್ಚಿದೆ. ಕುಂದಾಪುರದ ಬೆಳವಣಿಗೆಗೆ ಯೋಜಿತ ದೃಷ್ಟಿಕೋನ ಅಗತ್ಯವಾಗಿದೆ. ನಗರದ ಸಮಸ್ಯೆಗಳಿಗೆ ತಾತ್ಕಾಲಿಕ ಬಟ್ಟೆ ಹಾಕುವ ಕ್ರಮವಲ್ಲ, ಶಾಶ್ವತ ಪರಿಹಾರ ಬೇಕಾಗಿದೆ. ಪುರಸಭೆಯ ಆಡಳಿತ ವ್ಯವಸ್ಥೆ ಬಲಪಡಿಸಿ, ನಾಗರಿಕರ ವಿಶ್ವಾಸ ಮರಳಿ ಗೆಲ್ಲುವುದು ಆಡಳಿತದ ಮುಂದಿನ ದೊಡ್ಡ ಸವಾಲಾಗಿದೆ.

WhatsApp Image 2025 11 12 at 9.34.18 AM
WhatsApp Image 2023 08 22 at 3.23.15 PM
ಶಾರೂಕ್ ತೀರ್ಥಹಳ್ಳಿ
+ posts

ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಶಾರೂಕ್ ತೀರ್ಥಹಳ್ಳಿ
ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...