ಕನಕಪುರ | ಕನ್ನಡದ ವೈಶಿಷ್ಟ್ಯ, ವೈಜ್ಞಾನಿಕತೆ ಹಿನ್ನೆಲೆಯ ಮಹತ್ವ ಅರಿತು ನುಡಿ ಕಲಿಯಿರಿ: ಕುಮಾರಸ್ವಾಮಿ

Date:

ಕನ್ನಡದ ವೈಶಿಷ್ಟ್ಯ, ವೈಜ್ಞಾನಿಕತೆ ಹಿನ್ನಲೆಯ ಮಹತ್ವ ಅರಿತು ನುಡಿ ಕಲಿಯಿರಿ. ಒಕ್ಕೂಟ ಮತ್ತು ರಾಜ್ಯ ಸರ್ಕಾರದ ಉದ್ದಿಮೆ ಹಾಗೂ ಸಂಸ್ಥೆಗಳು ಕನ್ನಡಕ್ಕೆ ಪ್ರಾಧಾನ್ಯತೆ ನೀಡಿದರಷ್ಟೇ ಜನರಿಗೆ ಉತ್ತಮ ಸೇವೆ ನೀಡಿದ ಸಾರ್ಥಕತೆ ಲಭಿಸುತ್ತದೆ ಎಂದು ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ರಾಮನಗರ ಜಿಲ್ಲೆಯ ಕನಕಪುರದ ಭಾರತೀಯ ವಿಮಾ ನಿಗಮದ ಕಚೇರಿಯಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

“ಒಕ್ಕೂಟ ಸರ್ಕಾರದ ಅಧೀನ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಇತರ ರಾಜ್ಯದ ಅಧಿಕಾರಿಗಳು ಕನ್ನಡವು ಸ್ಥಳೀಯ ಭಾಷೆ ಕೆಲಸಕ್ಕಾಗಿ ಅನಿವಾರ್ಯ ಎನ್ನದೆ ಕಲಿಯಿರಿ. ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಿಂದಿ ಹೇರಿಕೆ ಮಿತಿ ಮೀರಿದೆ. ಕನ್ನಡಿಗರು ಅಂತಹ ಹೇರಿಕೆಯ ವಿರುದ್ದ ನಿರಂತರ ಹೋರಾಡುತ್ತಿದ್ದಾರೆ. ಹೋರಾಟಗಾರರ ಹೋರಾಟದ ಫಲವಾಗಿಯೇ ನಾವು ಇಂದು ಮಾಲುಗಳಾದಿಯಾಗಿ ಕನ್ನಡದ ಫಲಕವನ್ನು ಕಾಣುವಂತಾಗಿದೆ. ಇನ್ನೂ ಕೆಲವು ಬ್ಯಾಂಕ್‌ಗಳು ಕನ್ನಡದ ಬಗ್ಗೆ ಅಸಡ್ಡೆ ತೋರುತ್ತಿದ್ದಾರೆ. ಅವರಿಗೂ ಪಾಠ ಕಲಿಸುವ ಕಾಲ ದೂರವಿಲ್ಲ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ರೈಲ್ವೆ ನೇಮಕಾತಿಯಲ್ಲಿ ಕನ್ನಡಗರಿಗೆ ವಂಚನೆಯಾಗುತ್ತಿತ್ತು, ಕನ್ನಡಿಗರೇ ರೈಲ್ವೆ ಮಂತ್ರಿಗಳಾಗಿದ್ದರೂ ಕನ್ನಡಕ್ಕೆ ಪ್ರಾಶಸ್ತ್ಯ ಗಳಿಸಿಕೊಡಲಾಗಿರಲಿಲ್ಲ. ಇದಕ್ಕಾಗಿ ಬಹಳಷ್ಟು ಹೋರಾಟ ನಡೆದವು. ಕನ್ನಡಿಗ ವಿ ಸೋಮಣ್ಣ ಪ್ರಧಾನಿಗಳಿಗೆ ಕನ್ನಡಿಗರಿಗಾದ ಅನ್ಯಾಯವನ್ನು ಅರ್ಥ ಮಾಡಿಸಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ್ದಾರೆ. ಅವರನ್ನು ಇಂತಹ ಸಂದರ್ಭಗಳಲ್ಲಿ ಸ್ಮರಿಸಲೇಬೇಕಿದೆ” ಎಂದು ಹೇಳಿದರು.

IMG 20241202 WA0004 1

ಭಾರತೀಯ ವಿಮಾ ನಿಗಮದ ಶಾಖಾಧಿಕಾರಿ ಆದಿತ್ಯಕುಮಾರ್ ಮಾತನಾಡಿ, “ಭಾರತೀಯ ವಿಮಾ ನಿಗಮವು ಒಕ್ಕೂಟ ಸರ್ಕಾರದ ಸಂಸ್ಥೆಯಾದರೂ ನಾವು ತ್ರಿಭಾಷಾ ನೀತಿಯನ್ನು ಸಮರ್ಪಕವಾಗಿ ಅಳವಡಿಸಿಕೊಂಡಿದ್ದೇವೆ‌. ಕನ್ನಡಕ್ಕೆ ಅತಿಹೆಚ್ಚು ಪ್ರಾಶಸ್ತ್ಯ ನೀಡುವ ಸಂಸ್ಥೆಗಳ ಪೈಕಿ ಭಾರತೀಯ ಜೀವ ವಿಮಾ ನಿಗಮವು ಮೊದಲ ಸಾಲಿನಲ್ಲಿದೆ. ನಮ್ಮ ಕನಕಪುರ ಶಾಖೆಯ ಕನ್ನಡ ಶ್ರೀನಿವಾಸ್ ಅಚ್ಚ ಕನ್ನಡವನ್ನೆ ಉಚ್ಛರಿಸುತ್ತಾರೆ. ಇತರ ಭಾಷೆಯನ್ನು ಬಳಸುವುದೂ ಇಲ್ಲ ಬೆರೆಸುವುದೂ ಇಲ್ಲ. ಅಲ್ಲದೆ ನಮ್ಮ ಸಿಬ್ಬಂದಿಗಳಲ್ಲಿ ಕವಿಗಳು ಸಾಹಿತಿಗಳು ಇದ್ದಾರೆ. ಇದು ನಮಗೆ ಹೆಮ್ಮೆಯ ಸಂಗತಿ. ಆಂಧ್ರದವನಾದ ನಾನು ಕನ್ನಡ ಭಾಷೆಯ ಹಿರಿಮೆಗೆ ಮಾರುಹೋಗಿ ಕನ್ನಡದಲ್ಲೇ ಮಾತನಾಡುತ್ತಿದ್ದೇನೆ” ಎಂದರು.

ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದ ಚಂದ್ರು ನಿರೂಪಣೆಯ ಜೊತೆಗೆ ಕನ್ನಡದ ಮಹತ್ವ, ಕನ್ನಡದ ಹಲವಾರು ಮೊದಲುಗಳನ್ನು ತಿಳಿಸುತ್ತ ಕಾರ್ಯಕ್ರಮದ ಆಕರ್ಷಣೆ ಎನಿಸಿದರು.

ಇದನ್ನು ಓದಿದ್ದೀರಾ? ರಾಮನಗರ | ಮನೆ, ಮನಗಳಲ್ಲಿ ನಿತ್ಯವೂ ಕನ್ನಡ ಆಚರಿಸುವ ದೀಕ್ಷೆ ತೊಡಬೇಕು: ಎ ಆರ್ ಗೋವಿಂದಸ್ವಾಮಿ

ಕಾರ್ಯಕ್ರಮದಲ್ಲಿ ಶಾಖಾ ಉಪವಿಭಾಗಾಧಿಕಾರಿ ಶಶಿಧರ್, ಪ್ರತಿನಿಧಿ ಅಧ್ಯಕ್ಷರಾದ ಶಿವಶಂಭುಲಿಂಗೇಗೌಡ, ಕನ್ನಡ ಪಂಡಿತ ಕನ್ನಡ ಶ್ರೀನಿವಾಸ್ ಹಾಗೂ ವಿಠಲ್ ಸನ್ಮಾನ ಮಾಡಲಾಯಿತು.

IMG 20241202 WA0003

ಕಾರ್ಯಕ್ರಮದಲ್ಲಿ ಪ್ರಶಾಂತ್ ಹೊಸದುರ್ಗ, ಕನ್ನಡ ಸಂಘದ ಅಧ್ಯಕ್ಷ ಚಂದ್ರು, ವಿಜಯ್ ಕುಮಾರ್, ಜಗನ್ನಾಥ್, ಮಹೇಶ್ವರಿ, ನೇತ್ರಾವತಿ, ರುದ್ರೇಶ್, ಮಾದಾ ನಾಯಕ್, ನಾಗರಾಜು, ಸೋಮೇಶ್ವರ್, ಶಿವಪ್ರಸಾದ್ ಮಂಚೇಗೌಡ ಹಾಗೂ ಇತರ ಪ್ರತಿನಿಧಿಗಳು‌, ಸಿಬ್ಬಂದಿಗಳು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...