ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಹೋಟೆಲ್‌ಗೆ ನುಗ್ಗಿದ ಘಟನೆ ಜಿಲ್ಲೆ ಲಿಂಗಸುಗೂರು ಪಟ್ಟಣದ ಮಾತೇ ಮಾಣಿಕೇಶ್ವರಿ ಮಠದ ಸಮೀಪ ಬುಧವಾರ ಬೆಳಿಗ್ಗೆ ನಡೆದಿದೆ.
ಬೀದರ–ಶ್ರೀರಂಗಪಟ್ಟಣ 150ಎ ರಾಷ್ಟ್ರೀಯ ಹೆದ್ದಾರಿಯ ಲಿಂಗಸುಗೂರು ಪಟ್ಟಣದ ಮಾತೇ ಮಾಣಿಕೇಶ್ವರಿ ಮಠದ ಹತ್ತಿರ ಇರುವ ವೀರೇಶ ಅವರ ಹೋಟೆಲ್‌ಗೆ ಕಾರು ನುಗ್ಗಿದ ಪರಿಣಾಮ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲವೆಂದು ತಿಳಿದುಬಂದಿದೆ.
ಗುರುಗುಂಟಾ ಕಡೆಯಿಂದ ಲಿಂಗಸಗೂರು ಪಟ್ಟಣದತ್ತ ಬರುತ್ತಿದ್ದ ಕಾರನ್ನು ಅಪ್ರಾಪ್ತರು ಚಲಾಯಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಕಾರು ಅತಿವೇಗವಾಗಿ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ವೇಗದ ನಿಯಂತ್ರಣ ತಪ್ಪಿದ ಪರಿಣಾಮ ಕಾರು ಪಲ್ಟಿ ಹೊಡೆದು ಹೋಟೆಲ್ ಕಂಪೌಂಡ್ ಗೋಡೆಯನ್ನು ಕುಸಿತಗೊಳಿಸಿ ಒಳಗೆ ನುಗ್ಗಿದೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಜೆಡಿಎಸ್ ಮುಖಂಡರ ಮೇಲೆ ಸುಳ್ಳು ಪ್ರಕರಣ; ಆರೋಪಿಸಿ ಪ್ರತಿಭಟನೆ
ಕಾರಿನಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಹೋಟೆಲ್ ಕಟ್ಟಡದ ಭಾಗಶಃ ಹಾನಿ ಸಂಭವಿಸಿದೆ.





