ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ವೀರಾಪೂರು ಗ್ರಾಮದಲ್ಲಿ ಸಂಭವಿಸಿದ ಆಕಸ್ಮಿಕ ಬೆಂಕಿ ಅವಘಡದಲ್ಲಿ ಸುಮಾರು ₹70 ಸಾವಿರ ಮೌಲ್ಯದ ಸಜ್ಜೆಯ ಸೊಪ್ಪಿ, ಶೇಂಗಾ ಹೊಟ್ಟು ಹಾಗೂ ತೊಗರಿ ಹೊಟ್ಟಿನ ಬಣವೆಗಳು ಸಂಪೂರ್ಣವಾಗಿ ಸುಟ್ಟು ಕರಕಲೆಗೊಂಡಿವೆ.
ಕುರಿಗಾಯಿ ದುರಗಮ್ಮ ಎನ್ನುವವರಿಗೆ ಸೇರಿದ ಬಣವೆ ಬೆಂಕಿಗಾಹುತಿಯಾಗಿದೆ. ಬೇಸಿಗೆಯಲ್ಲಿ ಜಾನುವಾರಗಳಿಗೆ ಮೇವಿನ ಅಭಾವ ಸೃಷ್ಟಿಯಾಗಬಾರದು ಎಂದು ದುರುಗಮ್ಮ 70 ಸಾವಿರ ರೂಪಾಯಿ ಮೌಲ್ಯದ ಸಜ್ಜೆ ಸೊಪ್ಪಿ, ಶೇಂಗಾ, ತೊಗರಿ ಹೊಟ್ಟು ಸಂಗ್ರಹಿಸಿಟ್ಟಿದ್ದರು.
ಬೆಂಕಿ ಕಾಣಿಸಿಕೊಂಡ ತಕ್ಷಣವೇ ಅಗ್ನಿ ಶಾಮಕದಳಕ್ಕೆ ಕರೆ ಮಾಡಿದ ಸ್ವಲ್ಪ ಹೊತ್ತಿನಲ್ಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಬೆಂಕಿ ಆರಿಸಲು ಇನ್ನು ಸ್ವಲ್ಪ ತಡವಾಗಿದ್ದರು ಇನ್ನು ಪಕ್ಕದಲ್ಲೆ ಇದ್ದ 5 ಬಣವೆಗಳು, ತೊಗರಿಯ ರಾಶಿ, ಸುಮಾರು ಆಡುಗಳು ಅಗ್ನಿ ಅನಾಹುತಕ್ಕೀಡಾಗುತ್ತಿತ್ತು.
ಈ ಸುದ್ದಿ ಓದಿದ್ದೀರಾ? ಮಸ್ಕಿ | ಶಾಲಾ ಆವರಣದಲ್ಲಿ ವಿದ್ಯುತ್ ಟ್ರಾನ್ಸ್ಫಾರ್ಮರ್; ಸ್ಥಳಾಂತರಕ್ಕೆ ಪೋಷಕರ ಆಗ್ರಹ
ಸಂತ್ರಸ್ತ ಕುಟುಂಬ ಕುರಿಮರಿಗಳನ್ನು ಕಾಯ್ದು ಬದುಕುವ ಕುಟುಂಬ ಆಗಿದ್ದು, ನಷ್ಟ ಪರಿಹಾರವಾಗಿ 1 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಗ್ರಾಮ ಪಂಚಾಯ್ತಿ ಸದಸ್ಯ ಹಾಗೂ ಸಿಪಿಎಂ ತಾಲೂಕು ಕಾರ್ಯದರ್ಶಿ ರಮೇಶ ವೀರಾಪೂರು ಆಗ್ರಹಿಸಿದ್ದಾರೆ.




