ಲಿಂಗಸೂಗೂರು | ಬೆಂಕಿ ಅವಘಡ: ₹70 ಸಾವಿರ ಮೌಲ್ಯದ ಬಣವೆಗಳು ಭಸ್ಮ

Date:

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ವೀರಾಪೂರು ಗ್ರಾಮದಲ್ಲಿ ಸಂಭವಿಸಿದ ಆಕಸ್ಮಿಕ ಬೆಂಕಿ ಅವಘಡದಲ್ಲಿ ಸುಮಾರು ₹70 ಸಾವಿರ ಮೌಲ್ಯದ ಸಜ್ಜೆಯ ಸೊಪ್ಪಿ, ಶೇಂಗಾ ಹೊಟ್ಟು ಹಾಗೂ ತೊಗರಿ ಹೊಟ್ಟಿನ ಬಣವೆಗಳು ಸಂಪೂರ್ಣವಾಗಿ ಸುಟ್ಟು ಕರಕಲೆಗೊಂಡಿವೆ.

‎ಕುರಿಗಾಯಿ ದುರಗಮ್ಮ ಎನ್ನುವವರಿಗೆ ಸೇರಿದ ಬಣವೆ ಬೆಂಕಿಗಾಹುತಿಯಾಗಿದೆ. ಬೇಸಿಗೆಯಲ್ಲಿ ಜಾನುವಾರಗಳಿಗೆ ಮೇವಿನ ಅಭಾವ ಸೃಷ್ಟಿಯಾಗಬಾರದು ಎಂದು ದುರುಗಮ್ಮ 70 ಸಾವಿರ ರೂಪಾಯಿ ಮೌಲ್ಯದ ಸಜ್ಜೆ ಸೊಪ್ಪಿ, ಶೇಂಗಾ, ತೊಗರಿ ಹೊಟ್ಟು ಸಂಗ್ರಹಿಸಿಟ್ಟಿದ್ದರು.

‎ಬೆಂಕಿ ಕಾಣಿಸಿಕೊಂಡ ತಕ್ಷಣವೇ ಅಗ್ನಿ ಶಾಮಕದಳಕ್ಕೆ ಕರೆ ಮಾಡಿದ ಸ್ವಲ್ಪ ಹೊತ್ತಿನಲ್ಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಬೆಂಕಿ ಆರಿಸಲು ಇನ್ನು ಸ್ವಲ್ಪ ತಡವಾಗಿದ್ದರು ಇನ್ನು ಪಕ್ಕದಲ್ಲೆ ಇದ್ದ 5 ಬಣವೆಗಳು, ತೊಗರಿಯ ರಾಶಿ, ಸುಮಾರು ಆಡುಗಳು ಅಗ್ನಿ ಅನಾಹುತಕ್ಕೀಡಾಗುತ್ತಿತ್ತು.

ಈ ಸುದ್ದಿ ಓದಿದ್ದೀರಾ? ಮಸ್ಕಿ | ಶಾಲಾ ಆವರಣದಲ್ಲಿ ವಿದ್ಯುತ್‌ ಟ್ರಾನ್ಸ್‌ಫಾರ್ಮರ್;‌ ಸ್ಥಳಾಂತರಕ್ಕೆ ಪೋಷಕರ ಆಗ್ರಹ

‎ಸಂತ್ರಸ್ತ ಕುಟುಂಬ ಕುರಿಮರಿಗಳನ್ನು ಕಾಯ್ದು ಬದುಕುವ ಕುಟುಂಬ ಆಗಿದ್ದು, ನಷ್ಟ ಪರಿಹಾರವಾಗಿ 1 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಗ್ರಾಮ ಪಂಚಾಯ್ತಿ ಸದಸ್ಯ ಹಾಗೂ ಸಿಪಿಎಂ ತಾಲೂಕು ಕಾರ್ಯದರ್ಶಿ ರಮೇಶ ವೀರಾಪೂರು ಆಗ್ರಹಿಸಿದ್ದಾರೆ.

?s=150&d=mp&r=g
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...