ಎಟಿಎಂ ನಲ್ಲಿ ಹಣ ತೆಗೆದುಕೊಡುವ ನೆಪದಲ್ಲಿ ಎಟಿಎಂ ಕಾರ್ಡ್ ಬದಲಾಯಿಸಿ 54,000 ರೂಪಾಯಿಗಳನ್ನು ದೋಚಿದ ಮಾಡಲು ಸಹಾಯ ಮಾಡುವ ನೆಪದಲ್ಲಿ ವಂಚಿಸಿದ ಘಟನೆ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದಲ್ಲಿ ನಡೆದಿದೆ.
ಇಂದು ಬೆಳಿಗ್ಗೆ ಭೀಮಪ್ಪ ಎಂಬ ವ್ಯಕ್ತಿ ಹಣ ತೆಗೆದುಕೊಳ್ಳಲು ಎಟಿಎಂಗೆ ಹೋಗಿದ್ದಾನೆ. ಆದರೆ ಎಟಿಎಂನಲ್ಲಿ ಅಷ್ಟು ತಿಳಿವಳಿಕೆ ಇಲ್ಲದನ್ನು ಗಮನಿಸಿದ ಕಳ್ಳರು ಹಣ ತೆಗೆದು ಕೊಡುವ ನೆಪದಲ್ಲಿ ಕಾರ್ಡ್ ಬದಲಾಯಿಸಿದ್ದಾರೆ. ನಂತರ ಲಿಂಗಸುಗೂರಿಗೆ ಬಂದ ಕಳ್ಳರು ಲಿಂಗಸುಗೂರಿನ ವಿವಿಧ ಕಡೆ ಎಟಿಎಂ ಬಳಸಿ 54,000 ರೂ. ಹಣ ದೋಚಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಅಕ್ರಮ ಆಸ್ತಿ ಪತ್ತೆ; ಜಿಲ್ಲಾ ಪಂಚಾಯತ್ ಲೆಕ್ಕ ಸಹಾಯಕನ ವಿರುದ್ಧ ಕ್ರಮಕ್ಕೆ ದಲಿತ ಸೇನೆ ಆಗ್ರಹ
ಈ ಕುರಿತು ಮುದಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.





