ಬೀದರ್‌ | ಜಗತ್ತಿಗೆ ಮಾನವೀಯ ತತ್ವ ಪರಿಚಯಿಸಿದ ಲಿಂಗಾಯತ ಧರ್ಮ : ಸಿದ್ಧರಾಮ ಶರಣರು

Date:

ಜಗತ್ತಿಗೆ ಪ್ರಜಾಪ್ರಭುತ್ವ ಮೊದಲು ಕೊಟ್ಟಿದ್ದು ಕಲ್ಯಾಣ ನಾಡು, ಜಗತ್ತಿಗೆ ಮಾನವೀಯ ತತ್ವ ಪರಿಚಯಿಸಿದ ಲಿಂಗಾಯತ ಧರ್ಮ. ಬಸವಣ್ಣನವರು 900 ವರ್ಷಗಳ ಹಿಂದೆಯೇ ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪಿಸಿದರು ಎಂದು ಬಸವಕಲ್ಯಾಣ ಬಸವ ಮಹಾಮನೆ ಸಂಸ್ಥೆಯ ಡಾ.ಸಿದ್ಧರಾಮ ಶರಣರು ಬೆಲ್ದಾಳ ನುಡಿದರು.

ಬಸವಕಲ್ಯಾಣ ಹರಳಯ್ಯನವರ ಗವಿಯಲ್ಲಿ ಅಂತರ‍್ರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರದಿಂದ ನಡೆದ ಲಿಂಗಾಯತ ಧರ್ಮೋದಯ ದಿನಾಚರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದರು.

ʼಲಿಂಗಾಯತ ಪದ ಶ್ರೇಷ್ಠ ಅರ್ಥವುಳ್ಳದ್ದು ಕಾಯವನ್ನು ಶುದ್ಧ ಮಾಡಿಕೊಂಡು, ಅಂಗದ ಮೇಲೆ ಇಷ್ಟಲಿಂಗವನ್ನು ದೀಕ್ಷೆಯಿಂದ ಅಳವಡಿಸುವುದು ಮತ್ತು ಅಂತರಂಗಕ್ಕೆ ಮಂತ್ರದಿಂದ ಪ್ರಾಣಲಿಂಗ ಸಂಬಂಧಿಸುವುದು. ಸದಾಚಾರಕ್ಕೆ ಮೂಲ ಇಷ್ಟಲಿಂಗ. ಇದರ ಧಾರಣೆಯಿಂದ ಅಂಗಕ್ರಿಯೆಗಳೆಲ್ಲ ಲಿಂಗಕ್ರಿಯೆಗಳಾಗಿ ಸದಾಚಾರಗಳೆನಿಸುವುದು ವಚನಗಳು, ಪಂಚಾಚಾರ, ಷಟಸ್ಥಲಗಳು ಲಿಂಗಾಯತರ ಆಚರಣೆಗಳಾಗಿವೆʼ ಎಂದು ವಿಶ್ಲೇಷಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹರಳಯ್ಯ ಗವಿಯ ಡಾ. ಗಂಗಾಂಬಿಕಾ ಅಕ್ಕ ನೇತೃತ್ವ ವಹಿಸಿ ಮಾತನಾಡಿ, ʼಲಿಂಗಾಯತ ಧರ್ಮ ವೈಜ್ಞಾನಿಕ, ವೈಚಾರಿಕ ಮಾನವ ಆಧಾರಿತ ಧರ್ಮವಾಗಿದೆ. ಶೂನ್ಯ ಸ್ವರೂಪಿ ಪರಮಾತ್ಮ ಎಲ್ಲರ ಅಂತರಂಗದಲ್ಲಿಯೇ ಇದ್ದಾನೆ. ಅದಕ್ಕೆ ನಿನ್ನೊಳಗಿನ ಶಕ್ತಿ ನಿನ್ನ ಪರಮಾತ್ಮ ಅದನ್ನು ನೀನು ಆರಾಧಿಸಬೇಕು ಎಂದು ಬಸವಣ್ಣನವರು ಇಷ್ಟಲಿಂಗ ನೀಡಿದ್ದಾರೆ. ಇದು ಬಸವಣ್ಣನವರಿಗೆ ಇಂದು ಆವಿಷ್ಕಾರವಾಗಿದೆ. ಲಿಂಗಾಯತ ಧರ್ಮ ಪ್ರಕೃತಿ ಧರ್ಮ, ಸೃಷ್ಟಿಯ ಮೂಲಕಾರಕಗಳನ್ನು ಅಂಗೀಕರಿಸಿಕೊಂಡು ಹುಟ್ಟಿದ ಧರ್ಮವಾಗಿದ್ದು, ಸೃಷ್ಟಿಯ ಎಲ್ಲಾ ಮೌಲ್ಯಗಳು, ಗುಣಗಳು ಹೊತ್ತುಕೊಂಡು ಬಂದ ಧರ್ಮವಾಗಿದೆʼ ಎಂದರು.

ಅಕ್ಕಮಹಾದೇವಿಯ ಗವಿಯ ಸತ್ಯಕ್ಕತಾಯಿ ವಚನ ಪಠಣ ಮಾಡಿಸಿದರು. ಶ್ರೀ ಬಸವೇಶ್ವರ ದೇವಸ್ಥಾನ ಪಂಚಕಮಿಟಿ ನಿರ್ದೇಶಕ ರೇವಣಪ್ಪಾ ರಾಯವಾಡೆ ಅಧ್ಯಕ್ಷತೆ ವಹಿಸಿಕೊಂಡಿದ್ದರು. ರಾಷ್ಟ್ರೀಯ ಬಸವದಳದ ಅಧ್ಯಕ್ಷ ರವಿಂದ್ರ ಕೊಳಕೂರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.

ಇದೇ ಸಂದರ್ಭದಲ್ಲಿ ಚಿತ್ರದುರ್ಗದಲ್ಲಿ ನಡೆಯಲಿರುವ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ
ಪೂಜ್ಯ ಡಾ. ಸಿದ್ಧರಾಮ ಶರಣರು ಬೆಲ್ದಾಳ ಅವರನ್ನು ಸನ್ಮಾನಿಸಲಾಯಿತು.

ಈ ಸುದ್ದಿ ಓದಿದ್ದೀರಾ? ಬೀದರ್‌ | ಬಸವಣ್ಣ ಪ್ರತಿಮೆಗೆ ಅಪಮಾನ: ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ, ಸಂಚಾರ ಸ್ಥಗಿತ

ಶ್ರೀ ಬಸವೇಶ್ವರ ಹಿರಿಯ ನಾಗರಿಕರ ಒಕ್ಕೂಟದ ಜಂಟಿ ಕಾರ್ಯದರ್ಶಿ ಈಶ್ವರ ಶೀಲವಂತ, ಮೇದಾರ ಕೇತಯ್ಯ ಸಮಾಜದ ಗಾಯತ್ರಿ ಟೀಚರ್ ಉಪಸ್ಥಿತರಿದ್ದರು. ಹರಳಯ್ಯ ಸಮಾಜದ ನಾಮದೇವ ಸೂರ್ಯವಂಶಿ ಧ್ವಜಾರೋಹಣಗೈದರು. ನಿವೃತ್ಯ ನ್ಯಾಯಾಧೀಶ ಸುಭಾಶ್ಚಂದ್ರ ನಾಗರಾಳೆ. ಕಾಶಪ್ಪಾ ಬಾಲಿಕಿಲೆ, ಶ್ರೀಶೈಲ ಹುಡೇದ, ಶಂಕರ ಕರಣೆ, ಸುಲೋಚನಾ ಮಾಮಾ, ವಿದ್ಯಾವತಿ ಶೇರಿಕಾರ,
ಶಿವರಾಜ ನೀಲಕಂಠೆ, ಮಂಗಲಾ ಪಾಟೀಲ ಸೇರಿಂದತೆ ಇತರರಿದ್ದರು. ಸಂಗಮೇಶ ತೋಗರಖೇಡೆ ನಿರೂಪಿಸಿದರು. ಅಕ್ಕನ ಬಳಗದ ಶರಣೆಯರಿಂದ ಸಿದ್ಧರಾಮೇಶ್ವರರರ ತ್ರಿವಿಧಿಗಳನ್ನು ಪಠಿಸಲಾಯಿತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಔರಾದ್‌ | ಅಪ್ಪಟ ದೇಶಪ್ರೇಮಿ ಶಾಹೀದ್ ಭಗತ್ ಸಿಂಗ್

ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ನಿದ್ದೆಗೆಡಿಸಿದ ಸಿಂಹಾಳಿಯಂತೆ ಗರ್ಜಿಸಿ ಭಾರತದ ಹಿರಿಮೆ ಗರಿಮೆಯನ್ನು...

ಬೀದರ್‌ | ಕಾರಂಜಾ ಸಂತ್ರಸ್ತರಿಗೆ ಕಾಲಮಿತಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿ

ಕಾರಂಜಾ ಸಂತ್ರಸ್ತರ ಸಮಸ್ಯೆ ಕುರಿತು ದಶಕಗಳಿಂದ ಹೋರಾಟ ನಡೆಯುತ್ತಿದ್ದು, ಸರ್ಕಾರಕ್ಕೂ ಈ...

ಬೀದರ್‌ನಲ್ಲಿ ಮಾ.25ರಂದು ಉದ್ಯೋಗ ಮೇಳ

ಬೀದರ್ ನಗರದ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ...

ರಾಯಚೂರು | ಟ್ರಾಕ್ಟರ್ ಗೆ ಬೈಕ್ ಡಿಕ್ಕಿ; ಇಬ್ಬರು ಯುವಕರು ಸಾವು

ರಸ್ತೆ ಬದಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು...