ಮೈಸೂರು | ಹಮಾಲಿಗಳ ಕುಂದುಕೊರತೆ, ಸಮಸ್ಯೆ ಆಲಿಸಿ; ಸರ್ಕಾರಕ್ಕೆ ಅನಿರ್ದಿಷ್ಟಾವಧಿ ಧರಣಿಯ ಎಚ್ಚರಿಕೆ

Date:

ಮೈಸೂರಿನ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕರ್ನಾಟಕ ಶ್ರಮಿಕ ಶಕ್ತಿ ಹಾಗೂ ಕರ್ನಾಟಕ ರಾಜ್ಯ ಲೋಡಿಂಗ್ ಮತ್ತು ಅನ್ ಲೋಡಿಂಗ್ ಕಾರ್ಮಿಕರ ಒಕ್ಕೂಟದ ರಾಜ್ಯಾಧ್ಯಕ್ಷರಾದ ವರದರಾಜೇಂದ್ರ ಮಾತನಾಡಿ, ” ರಾಜ್ಯ ಸರ್ಕಾರ ಪಡಿತರರಿಗೆ 5 ಕೆಜಿ ಅಕ್ಕಿ ಬದಲು ‘ಇಂದಿರಾ ಆಹಾರ ಕಿಟ್’ ನೀಡುತ್ತಿರುವುದು ಸ್ವಾಗತಾರ್ಹ. ಆದರೇ, ರಾಜ್ಯದಲ್ಲಿ ಕಾರ್ಯಗತ ಮಾಡುವ ಹಮಾಲಿಗಳ ಕುಂದುಕೊರತೆ, ಸಮಸ್ಯೆಗಳನ್ನು ಆಲಿಸಿ. ಯಾವುದೇ ಯೋಜನೆ ಕಾರ್ಯರೂಪಕ್ಕೆ ಬರಬೇಕು ಅಂದರೇ ಅದಕ್ಕೆ ಶ್ರಮಿಕ ವರ್ಗದ ಶ್ರಮ ಇರಲೇಬೇಕು. ಹೀಗಿರುವಾಗ ಹಮಾಲಿಗಳನ್ನು ಕಡೆಗಣಿಸುತ್ತಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.

“ರಾಜ್ಯಾದ್ಯಂತ ಆಹಾರ ನಿಗಮದ ಗೋದಾಮುಗಳಲ್ಲಿ ಪಡಿತರ ಅನ್ನಭಾಗ್ಯ ಯೋಜನೆ ಜಾರಿ ಮಾಡುವ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಕೆಲಸ ಮಾಡುವ ಹಮಾಲಿ ಕಾರ್ಮಿಕರು. ಆಹಾರ ಧಾನ್ಯಗಳ ಎತ್ತುವಳಿ ಕೆಲಸವನ್ನು ಹಲವು ದಶಕಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. ಹಿಂದಿನ ಸರ್ಕಾರಗಳು ಈ ಕಾರ್ಮಿಕರನ್ನು ಮನುಷ್ಯರೆಂದೇ ಪರಿಗಣಿಸಿರಲಿಲ್ಲ. ನಮ್ಮ ಒಕ್ಕೂಟದ ನಿರಂತರ ಹೋರಾಟದ ಫಲವಾಗಿ ಇಂದು ಕಾರ್ಮಿಕರಿಗೆ ಗುತ್ತಿಗೆ ಕಾರ್ಮಿಕ ಕಾಯಿದೆ, ಸಾಮಾಜಿಕ ಭದ್ರತೆಯ ಕಾನೂನುಗಳಾದ ಇಎಸ್ಐ, ಇಪಿಎಫ್, ಕಾರ್ಮಿಕ ನಷ್ಟ ಪರಿಹಾರ ಕಾಯಿದೆ, ಕೈಗಾರಿಕಾ ವಿವಾದ ಕಾಯಿದೆ ಸೇರಿದಂತೆ ಹಲವು ಕಾಯಿದೆಗಳು ಜಾರಿಗೆ ಬಂದಿವೆ”.

ಆದರೇ, ಟೆಂಡರ್ ನಿಯಮಾವಳಿಗಳಲ್ಲಿ ಮಾತ್ರವಿದ್ದು ಇನ್ನೂ ಕಾರ್ಮಿಕರಿಗೆ ತಲುಪದೆ ಗಗನ ಕುಸುಮವಾಗಿವೆ. ಸರ್ಕಾರವೇ ನಡೆಸುತ್ತಿರುವ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಡಿ ಬರುವ ಆಹಾರ ನಿಗಮದ ಗೋದಾಮುಗಳಲ್ಲಿ ಆಹಾರ ಧಾನ್ಯಗಳ ಎತ್ತುವಳಿ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಕೆಲಸ ಮಾಡುವ ಹಮಾಲಿ ಕಾರ್ಮಿಕರ ಕೆಲಸಕ್ಕೆ ಕೂಲಿ ನಿಗದಿಗೆ ಸಮಗ್ರವಾದ ಒಂದು ನೀತಿ ಇಲ್ಲವಾಗಿದ್ದು, ಸರ್ಕಾರ ಮತ್ತು ಅಧಿಕಾರಿಗಳು ಏರಿಸಿದಾಗ ಕೂಲಿ ಹೆಚ್ಚಳ ಇಲ್ಲವಾದಲ್ಲಿ ಅದೇ ಹಳೆಯ ಕೂಲಿಗೆ ದುಡಿಯಲೇಬೇಕಾದ ಒತ್ತಡ ಮತ್ತು ಕಿರುಕುಳ ನಿರಂತರವಾಗಿ ನಡೆದುಕೊಂಡು ಬರುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅಂದರೇ, 2010, 2014, 2016, 2019, 2023ರ ಜೂನ್, ಹಾಗೂ 2025ರ ಫೆಬ್ರವರಿ ತಿಂಗಳಿನಿಂದ ರಾಜ್ಯದಲ್ಲಿ ಸಾಗಾಣಿಕೆ ಟೆಂಡರ್ ಆಗಿರುವ ತಾಲೂಕುಗಳಿಗೆ ಮಾತ್ರವೇ ಕೂಲಿ ದರ ಕ್ವಿಂಟಾಲ್ ಗೆ ₹23.62 ರೂಪಾಯಿ ಜಾರಿಗೆ ಬಂದಿದ್ದು, ಇದು ಸಹ 2024ರ ಏಪ್ರಿಲ್ ಮಾಹೆಯಿಂದ ಜಾರಿಗೆ ಬಂದಿರುವ ಕನಿಷ್ಟ ವೇತನ. ನಿಯಮಾನುಸಾರವೇ ಆದರು ಜಾರಿಗೆ ಬಂದದ್ದು ಮಾತ್ರ 2025ರ ಫೆಬ್ರವರಿಯಿಂದ.

ಈ ಟೆಂಡ‌ರ್ ಅವದಿ ಇರುವುದೇ 2026ರ ಮಾರ್ಚ್ ವರೆಗೆ. ಅಂದರೆ, ಇನ್ನೂ ಉಳಿದಿರೊದು ಕೇವಲ 5 ತಿಂಗಳು ಮಾತ್ರ. ಆದರೇ, ಹಳೆಯ ಟೆಂಡ‌ರ್ ಮತ್ತು ಹಳೆಯ ಕೂಲಿದರ ಕ್ವಿಂಟಾಲ್ ಗೆ ₹19 ರೂಪಾಯಿ ಜಾರಿಯಲ್ಲಿದೆ. ಹೊಸ ಟೆಂಡ‌ರ್ ಜಾರಿಯಾಗಿರುವ ತಾಲೂಕಿನ ಕೂಲಿ ದರ, ಸಗಟು, ಅನ್ ಲೋಡಿಂಗ್ ₹10.92 ರೂಪಾಯಿ. ಚಿಲ್ಲರೇ ಸಾಗಾಣಿಕೆ ಲೋಡಿಂಗ್ ಅನ್‌ಲೋಡಿಂಗ್ ಕೂಲಿ ದರ ಕ್ವಿಂಟಾಲ್ ಗೆ ₹23.62 ರೂಪಾಯಿ.

ಅಂದರೆ, 2025ರ ಫೆಬ್ರವರಿಯಿಂದ ಟೆಂಡರ್ ಆಗಿ ಜಾರಿಗೆ ಬಂದಿರುವ ತಾಲೂಕುಗಳಿಗೆ ಮಾತ್ರವೇ ಕೂಲಿ ಹೆಚ್ಚಳವಾಗಿದೆ. ಆದರೇ, ಟೆಂಡ‌ರ್ ಆಗದೆ ಉಳಿದಿರುವ 120 ಕ್ಕೂ ಹೆಚ್ಚು ತಾಲೂಕಿನ ಗೋದಾಮಿನ ಕಾರ್ಮಿಕರಿಗೆ ಅದೇ ಹಳೆಯ ದರ ಕ್ವಿಂಟಾಲ್‌ಗೆ ₹19 ರೂಪಾಯಿ ಮುಂದುವರಿಯುತ್ತಿದ್ದು ಇದು ಕಾರ್ಮಿಕ ವಿರೋಧಿ ನೀತಿಯಾಗಿದೆ. ಇದನ್ನು ಕರ್ನಾಟಕ ಶ್ರಮಿಕ ಶಕ್ತಿ ಸಂಘಟನೆ ಉಗ್ರವಾಗಿ ಖಂಡಿಸುತ್ತದೆ. ಹಾಗೂ ಈ ಕೂಡಲೇ ಟೆಂಡರ್ ಆಗದೆ ಉಳಿದಿರುವ ತಾಲೂಕುಗಳ ಲೋಡಿಂಗ್, ಅನ್ಲೋಡಿಂಗ್ ಕೂಲಿ ದರ ಹೆಚ್ಚಿಸಿ ಆದೇಶ ಮಾಡಬೇಕೆಂದು ಒತ್ತಾಯಿಸಿದರು.

ಪ್ರತಿ ವರ್ಷ ಕಾರ್ಮಿಕ ಇಲಾಖೆ ಹೊರಡಿಸುವ ತುಟ್ಟಿ ಬತ್ತೆ ಬೆಲೆ ಏರಿಕೆ, ಅನುಪಾತ ಹಾಗೂ ಕನಿಷ್ಟ ವೇತನ ಕಾಯಿದೆಯ ನಿಯಮಾನುಸಾರ ಪ್ರತಿವರ್ಷ ಟೆಂಡರ್ ಆಗಲಿ ಬಿಡಲಿ ಕೂಲಿ ಹೆಚ್ಚಳಕ್ಕೆ ನಿಯಮ ರೂಪಿಸಬೇಕು. ಆಹಾರ ಧಾನ್ಯಗಳ ಎತ್ತುವಳಿ 2015ರ ಟೆಂಡ‌ರ್ ನಿಯಮಾವಳಿಗಳಿಂದಲೇ ಇಎಸ್ಐ ಮತ್ತು ಇಪಿಎಫ್ ಜಾರಿಗೆ ಬಂದಿದ್ದರೂ, ಇನ್ನೂ ಪೂರ್ಣ ಪ್ರಮಾಣದಲ್ಲಿ ಜಾರಿಯಾಗದೆ ಅಧಿಕಾರಿಗಳು ಮತ್ತು ಸಾಗಾಣಿಕೆ ಗುತ್ತಿಗೆದಾರರ ಹೊಂದಾಣಿಕೆಯಿಂದಾಗಿ ಸಾಗಾಣಿಕೆ ಗುತ್ತಿಗೆದಾರರಿಂದ ದೌರ್ಜನ್ಯ, ದಬ್ಬಾಳಿಕೆ ಅನುಭವಿಸಬೇಕಾಗಿದೆ. ಹಾಗಾಗಿ, ಸಂಪೂರ್ಣವಾಗಿ ಇಎಸ್ಐ ಮತ್ತು ಇಪಿಎಫ್ ಪಾವತಿಗೆ ಕಟ್ಟುನಿಟ್ಟಿನ ಕ್ರಮವಹಿಸಿಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ಸರ್ಕಾರವು ಅಕ್ಕಿಯ ಜೊತೆಗೆ ಸಮಗ್ರ ಆಹಾರ ಕಿಟ್ ಭಾಗವಾಗಿ ತರುತ್ತಿರುವ ‘ಇಂದಿರಾ ಆಹಾರ ಕಿಟ್’ ಯೋಜನೆಯನ್ನು ಸ್ವಾಗತಿಸುತ್ತೇವೆ. ಆದರೇ, ವೆಚ್ಚ ಕಡಿತಕ್ಕಾಗಿ ಆಹಾರ ಧಾನ್ಯಗಳ 10 ಕೆ.ಜಿಯಿಂದ 5 ಕೆ.ಜಿ ಗೆ ಕಡಿತ ಮಾಡಿರುವದನ್ನು ವಿರೋಧಿಸುತ್ತೇವೆ. ಹಾಗೂ ಈಗ ಇರೋ 10 ಕೆ.ಜಿ ಯ ಅಕ್ಕಿಯ ಪ್ರಮಾಣವನ್ನೇ ಮುಂದುವರಿಸುತ್ತಾ ತರಲು ಹೊರಟಿರುವ ಉದ್ದೇಶಿತ ಇಂದಿರಾ ಕಿಟ್‌ ಗೆ ಉತ್ತಮ ಗುಣಮಟ್ಟದ ಪೌಷ್ಟಿಕ ಆಹಾರ ಪದಾರ್ಥಗಳನ್ನು ಸೇರಿಸಿ ನೀಡಬೇಕೆಂದು ಒತ್ತಾಯಿಸುತ್ತೇವೆ.

ಈಗ ತರಲು ಹೊರಟಿರುವ ಇಂದಿರಾ ಕಿಟ್ ಗಳನ್ನು ಆಹಾರ ನಿಗಮದ ಗೋದಾಮುಗಳಿಗೆ ಸರಬರಾಜು ಮಾಡದೆ, ನೇರವಾಗಿ ನ್ಯಾಯಬೆಲೆ ಅಂಗಡಿಗೆ ಸರಬರಾಜು ಮಾಡುವ ಉದ್ದೇಶವಿದೆ ಎಂದು ತಿಳಿದುಬಂದಿದ್ದು, ಅದು ಕಾರ್ಮಿಕ ವಿರೋಧಿ ನೀತಿ ಮತ್ತು ವೆಚ್ಚ ಕಡಿತ ಮಾಡುವ ಉದ್ದೇಶ ಹೊಂದಿದ್ದು ಅದನ್ನು ತೀವ್ರವಾಗಿ ವಿರೋಧಿಸುತ್ತೇವೆ. ಹಾಗೂ, ಆಹಾರ ಕಿಟ್ ಲೋಡಿಂಗ್ ಮತ್ತು ಅನ್ ಲೋಡಿಂಗ್ ಕೆಲಸಕ್ಕೆ ಪ್ರತ್ಯೇಕ ಕೂಲಿ ದರ ನಿಗದಿ ಮಾಡಬೇಕು.

ಆದಷ್ಟು ಬೇಗ ಟೆಂಡರ್ ಆಗದೇ ಉಳಿದಿರುವ ತಾಲೂಕುಗಳಿಗೆ ಕೂಲಿ ಹೆಚ್ಚಳ ಮಾಡದೆ ಇದ್ದಲಿ ಇದೇ ನವೆಂಬರ್. 3 ರಿಂದ ಅನಿರ್ದಿಷ್ಟಾವಧಿವರೆಗೆ ಕೆಲಸ ನಿಲ್ಲಿಸಿ ಪ್ರತುಭಟನೆ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಈ ವಿಶೇಷ ಸುದ್ದಿ ಓದಿದ್ದೀರಾ? ‘ನಮ್ಮೊಳಗಿನ ಬುದ್ಧ ಬೆಳಕನ್ನು ಹುಡುಕಬೇಕು, ಅಂಬೇಡ್ಕರರಂತೆ ಜ್ಞಾನದಾಹಿಗಳಾಗಬೇಕು’; ವಿಶ್ವಶಾಂತಿ ಸಾರಿದ ಬೌದ್ಧ ಮಹಾ ಸಮ್ಮೇಳನ

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಕರಿನಾಯಕ, ಉಪಾಧ್ಯಕ್ಷ ನರಸಿಂಹಮೂರ್ತಿ, ಸದಸ್ಯರಾದ ವಿಕ್ರಂ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...